ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಅರವಿದ ಬೆಲ್ಲದ

ಧಾರವಾಡ 11: ಉತ್ತರ ಕರ್ನಾಟಕವು ಹೇರಳ ನೈಸರ್ಗಿಕ ಸಂಪನ್ಮೂಲ, ಕೈಗಾರಿಕೆಗೆ ಯೋಗ್ಯವಾದ ಭೂಮಿ ಹಾಗೂ ಮಾನವ ಸಂಪನ್ಮೂಲದ ಆಗರವಾಗಿದೆ. ಆದರೆ, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ನಮ್ಮ ಉತ್ತರ ಕರ್ನಾಟಕವು ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿದೆ. ಈ ಕಾರಣದಿಂದ ಇಲ್ಲಿನ ವಿದ್ಯಾವಂತ ಯುವ ಸಮುದಾಯ ಹಾಗೂ ಕೌಶಲ್ಯ ಕಾರ್ಮಿಕರು ಕೆಲಸ ಅರಸಿ ಬೆಂಗಳೂರು, ಮಂಗಳೂರು, ಗೋವಾ, ಮುಂಬೈ, ಹೈದ್ರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗುವಂತಾಗಿದೆ. ಪ್ರಾದೇಶಿಕ ಅಸಮಾನತೆ, ಮೂಲಸೌಕರ್ಯದ ಕೊರತೆ, ಉದ್ಯೋಗಾವಕಾಶಗಳ ಅಭಾವ ಇತ್ಯಾದಿ ಕಾರಣಗಳಿಂದ ನಮ್ಮ ಭಾಗವು ನಿರೀಕ್ಷಿತ ಅಭಿವೃದ್ಧಿಯನ್ನೂ ಕಂಡಿಲ್ಲ.

ಆದ್ದರಿಂದ, ಫೆಬ್ರವರಿ 12 ರಿಂದ ಬೆಂಗಳೂರಿನಲ್ಲಿ ನಡೆಯುವ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‌ – 2025 ರಲ್ಲಿ (GIM 2025) ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಬೇಕೆಂದು ನಾನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಪತ್ರ ಬರೆದು ಮನವಿ ಮಾಡಿದ್ದೇನೆ. ಅಲ್ಲದೇ ಉತ್ತರ ಕರ್ನಾಟಕದವರೇ ಆದ, ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಎಂ.ಬಿ ಪಾಟೀಲ್ ಹಾಗೂ ಐಟಿ-ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ.

GIM 2025 ರಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಹಾಗೂ ಕೈಗಾರಿಕೆಗಳನ್ನು ತರಲು ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಿ, ಉತ್ತರ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳಿಗೆ ವಿಶೇಷ ಅನುಕೂಲಗಳು ಹಾಗೂ ತೆರಿಗೆ ರಿಯಾಯಿತಿಗಳನ್ನು ನೀಡಲು ಸರ್ಕಾರವು ಮುಂದಾಗಬೇಕು.

ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಇಲ್ಲಿನ ರಸ್ತೆ ಸಂಪರ್ಕ, ವಿದ್ಯುತ್ ಮತ್ತು ನೀರು ಸರಬರಾಜು ಸೌಲಭ್ಯಗಳ ಕುರಿತು ಹೂಡಿಕೆದಾರರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಸ್ಪಷ್ಟ ಕಾರ್ಯತಂತ್ರ ರೂಪಿಸಬೇಕು.

ಅಲ್ಲದೇ, GIM 2025 ರಲ್ಲಿ, ಉತ್ತರ ಕರ್ನಾಟಕವು ಕೈಗಾರಿಕೆಗಳ ಸ್ಥಾಪನೆಗೆ ಯೋಗ್ಯ ಮತ್ತು ಪ್ರಶಸ್ತ ತಾಣವಾಗಿದೆ ಎಂದು ನಿರೂಪಿಸಲು ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಈ ಭಾಗವು ಹೂಡಿಕೆಗೆ ಲಾಭದಾಯಕ ತಾಣವೆಂದು ಪರಿಗಣಿಸಲು ವಿಶೇಷ ಸೆಷನ್‌ಗಳನ್ನು ಆಯೋಜಿಸಬೇಕು.

ಅಲ್ಲದೇ, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ವಿಶೇಷ ಕೈಗಾರಿಕಾ ವಲಯಗಳನ್ನು (Industrial Clusters) ಅಭಿವೃದ್ಧಿಪಡಿಸುವತ್ತ ಸರ್ಕಾರ ಗಮನಹರಿಸಬೇಕು.

ನಮ್ಮ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕಕ್ಕೂ ಸಮಾನ ಅವಕಾಶ ಮತ್ತು ಆದ್ಯತೆ ದೊರಕಬೇಕು. ಈ ಕುರಿತು ಸರ್ಕಾರವು ಸೂಕ್ತ ನಿರ್ಧಾರ ಕೈಗೊಂಡು, GIM 2025ನಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡುತ್ತೇವೆ.

  • Related Posts

    ಬಂಧಿಖಾನೆ ಮನಪರಿವರ್ತನೆಗಿರುವ ಒಂದು ಅವಕಾಶ

    ಧಾರವಾಡ:– ಸಾಧನಾ ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಸಂಸ್ಥೆ ,ಪ್ರೀಜನ್ ಮಿನಿಸ್ಟರಿ ಇಂಡಿಯಾ – ಧಾರವಾಡ ಮತ್ತು ವಿನ್ಸೆಂಟ್ ಡಿ ಪೌಲ‌ ನಿರ್ಮಲನಗರ ಧಾರವಾಡ ಕೇಂದ್ರ ಕಾರಾಗೃಹ ಧಾರವಾಡ ಇವರ ಸಹಯೋಗದಲ್ಲಿ ಬಂಧಿಖಾನೆ ಮಹಿಳಾ ನಿವಾಸಿಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‌ಆಯೋಜಿಸಲಾಗಿತ್ತು.…

    ಹು -ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಜನ್ನತ್ ನಗರಕ್ಕೆ ಭೇಟಿ

    ಧಾರವಾಡ 21 : ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷದ ಮನವಿಗೆ ಸ್ಪಂದಿಸಿ ಜನ್ನತ್ ನಗರಕ್ಕೆ ಭೇಟಿಮಾಡಿ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ ಪಾಲಿಕೆ ಅಧಿಕಾರಿಗಳು. ಜನ್ನತ್ ನಗರದ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು…

    RSS
    Follow by Email
    Telegram
    WhatsApp
    URL has been copied successfully!