ಬಾಂಗ್ಲಾದೇಶ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಲ್ಲೆ – ಜಯ ಕರ್ನಾಟಕ ಬೃಹತ್ ಪ್ರತಿಭಟನೆ

 

ಧಾರವಾಡ  : ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಲ್ಲೆ, ಹತ್ಯೆ ಹಾಗೂ ದೌರ್ಜನ್ಯ ಖಂಡಿಸಿ, ಹಾಗೂ ಅಲ್ಲಿ ಹಿಂದೂಗಳ ರಕ್ಷಣೆ ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜತಾಂತ್ರಿಕ ಒತ್ತಡ ಹೇರಲು ಹಾಗೂ ಕ್ರಮ ಕೈಗೊಳ್ಳಲು ಒತ್ತಾಯಿಸಿ ಧಾರವಾಡ ಜಿಲ್ಲೆಯ ಜಯಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ ಮಂತ್ರಿಗೆ ಮನವಿ ಅರ್ಪಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸುಧೀರ ಎಂ ಮುಧೋಳ ಮಾತನಾಡಿ, ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಮುಖಂಡ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಗುರುವಾರ ಮತ್ತೊಬ್ಬ ಹಿಂದೂ ವ್ಯಕ್ತಿಯ ಮೇಲೆ ಹರಿತವಾದ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ, ಬೆಂಕಿ ಹಚ್ಚುವ ಮೂಲಕ ಹತ್ಯೆಗೆ ಯತ್ನಿಸಲಾಗಿದೆ. ಡಿ.31 ರಂದು ಶರಿಯತ್ ಪುರ ಜಿಲ್ಲೆಯಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳ ಗುಂಪು 50 ವರ್ಷದ ಹಿಂದೂ ಉದ್ಯಮಿ ಖೋಖೋನ್ ದಾಸ್ ಎಂಬಾತನ ಮೇಲೆ ದಾಳಿ ನಡೆಸಿದೆ. ಬಳಿಕ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದೆ ಎಂದರು.

ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಖೋಖೋನ್ ದಾಸ್ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ. ಖೋಖೋನ್ ದಾಸ್ ಅವರು ಜೀವ ಉಳಿಸಿಕೊಳ್ಳಲು ರಸ್ತೆ ಬದಿಯಲ್ಲಿದ್ದ ಕೊಳಕ್ಕೆ ಹಾರಿದರು. ಸ್ಥಳೀಯ ನಿವಾಸಿಗಳು ರಕ್ಷಣೆಗೆ ಧಾವಿಸುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಳದಲ್ಲಿ ಬಿದ್ದಿದ್ದ ದಾಸ್ ಅವರನ್ನು ರಕ್ಷಿಸಿದ ಸ್ಥಳೀಯರು, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದರು.

ಮುಖಂಡರಾದ ಲಕ್ಷ್ಮಣ. ದೊಡ್ಡಮನಿ ಮಾತನಾಡಿ, ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ, ಅಂತ್ಯಕ್ರಿಯೆಯಲ್ಲಿ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭಾಗಿಯಾದ್ದರು. ಸಚಿವರ ಭೇಟಿ ಬಳಿಕ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ಸರಕಾರದ ಆಶಾವಾದದ ನಡುವೆ ಮತ್ತೊಬ್ಬ ಹಿಂದೂ ವ್ಯಕ್ತಿಯ ಮೇಲಿನ ಹಲ್ಲೆ ಸಂಬಂಧ ಸುಧಾರಣೆ ಹಾದಿಗೆ ಅಡ್ಡಗೋಡೆಯಾಗಿದೆ ಎಂದರು.

ಆದ್ದರಿಂದ ಭಾರತದ ಘನ ಸರ್ಕಾರ ಬಾಂಗ್ರಾದೇಶದಲ್ಲಿನ ಅಮಾಯಕ ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಹಾಗೂ ಹತ್ಯೆಗಳನ್ನು ನಿಯಂತ್ರಿಸುವಮತೆ ಆ ಸರಕಾರದ ಮೇಲೆ ರಾಜತಾಂತ್ರಿಕ ಒತ್ತಡಗಳನ್ನು ಹೇರುವುದಲ್ಲದೇ ಅವರ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಬೇಕೆಂದು ಈ ಮೂಲಕ ತಮ್ಮಲ್ಲಿ ಆಗ್ರಹ ಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದರು.

ಈ ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸುಧೀರ ಎಂ ಮುಧೋಳ, ಮುಖಂಡರಾದ ಲಕ್ಷ್ಮಣ ಬ. ದೊಡ್ಡಮನಿ, ಚಂದ್ರು ಅಂಗಡಿ, ಮಂಜುನಾಥ ಸುತಗಟ್ಟಿ, ಎಚ್‌. ರಾಮಣ್ಣ, ವಿರುಪಾಕ್ಷಯ್ಯ ಹುಬ್ಬಳ್ಳಿಮಠ, ಗಂಗಪ್ಪ ದೊಡ್ಡಮನಿ, ನಾರಾಯಣ ಮಾದರ, ಹನಮಂತ ಮೊರಬ, ಅಲ್ತಾಪ್ ಜಾಲೆಗಾರ, ಹರೀಶ ನಾಯಕ, ಮಣಿಕಂಠ ಹವಾಲ್ದಾರ, ಮಂಜುನಾಥ ಜುಲ್ಡಿ, ಗಿರಿರಾಜ ಮೇಲಿನಮನಿ, ರಾಜು ಚಲವಾದಿ, ಜಾಕೀರಖಾನ್, ಪ್ರಕಾಶ್ ಹಿರೇಮಠ, ದುರಗಪ್ಪ ಕಡೇಮನಿ, ರಾಜು ಜುನ್ನಾಯಿಕರ, ಮಂಜುನಾಥ ಹೊಸಮನೀ, ಮುತ್ತು ಕುಲಕರ್ಣಿ, ರಾಜು ಗೌಳಿ, ರಮೇಶ ಗೌಳಿ, ಅಮೀತ್ ಗೌಳಿ, ,ಪ್ರಕಾಶ್ ಹಿರೇಮಠ ಪ್ರಶಾಂತ ಹಿರೇಮಠ ಶಬ್ಬಿರ ಅತ್ತಾರ, ಸಂಜಯ್ಯ ಜಿಂದ್ರಾಳೆ, ರೆಹಮಾನಸಾಬ್ ನಿಚ್ಚಣಿಕಿ, ವಿವೇಕ ಬಿರಾದಾರ, ಚಂದ್ರು ಮಾಮನಿ, ಉಮೇಶ ಗುಣಕಿ, ಶಶಾಂಕ ದೊಡ್ಡಮನಿ, ಪ್ರಶಾಂತ ಕಸಬೇದ, ವಿಜಯ ಪುಟ್ಟಣ್ಣವರ, ಪ್ರಶಾಂತ ಹಿರೇಮಠ, ಸಂಜು ಮಠಪತಿ, ನೀಲಕಂಠ ಗುಲಬರ್ಗಾ, ಸೋಮು ಸಿಂದಗಿ, ಇನ್ನೂ ಅನೇಕರು ಉಪಸ್ಥಿತರಿದ್ದರು.