ಧಾರವಾಡ ಮೃತ್ಯುಂಜಯ ನಗರದ, ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾಹೋತ್ಸವದ ಅಂಗವಾಗಿ, ಗುಗ್ಗಳ ಮಹೋತ್ಸವ ಕಾರ್ಯಕ್ರಮ ಜರುಗಿತು.

ಮುಂಜಾನೆ 8 ಗಂಟೆಗೆ, ಶಿರಕೋಳದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಗುಗ್ಗಳ ಕೊಡಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮುತೈದೆಯರು ಆರತಿಯೊಂದಿಗೆ, ಪ್ರಸಿದ್ದ ಪುರವಂತರು ಒಡಪು ಹೇಳುತ್ತಾ, ಸಂಬ ಸಂಬಾಳ ಬಾರಿಸುತ್ತ ಮೆರವಣಿಗೆಯು ಸವದತ್ತಿ ರಸ್ತೆ, ತೊಟಗೇರ ಓಣಿ, ಮೂರೂಸಾವಿರಾಮಠ ರಸ್ತೆ, ಡಿಪೋ ವೃತ್ತ,ಮೂಲಕ ಅರಿಗೇರಿ, ಬಣಗಾರ ಓಣಿ, ಮತ್ತೆ ಸವದತ್ತಿ ರಸ್ತೆಯ ಮೂಲಕ ಶ್ರೀ ಮುರುಘಮಠಕ್ಕೆ ತೆರಳಿ, ಮರಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ, ಕೆಂಡ ಹಾಯುವದರ ಮೂಲಕ ಸಂಪಣ್ಣಗೊಂಡಿತು.
ನಂತರ ಸಾವಿರಾರು ಜನ ಗೋದಿ ಹುಗ್ಗಿ ಪ್ರಸಾದವನ್ನು ಸವಿದರು.

As part of the Sri Veerabhadreshwara Fair, the Guggala Mahotsava program was held.
ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಅರವಿಂದ ಏಗನಗೌಡರ, ಮೃತ್ಯುಂಜಯ ಸಿದ್ನಾಳ, ಈಶ್ವರ ಮಾಲಾಗರ, ಮಹಾಂತೇಶ ಕುರಾಟ್ಟಿದೇಸಾಯಿ,ಈರಪ್ಪ ಗೋಡಿಕಟ್ಟಿ, ಸಿದ್ದಪ್ಪ ಕರಡಿಗುಡ್ಡ, ಗುರುಸಿದ್ದಪ್ಪ ಭಾವಿಕಟ್ಟಿ, ಮಹಾಂತೇಶ ಗೊರವನಕೊಳ್ಳ,ಬಸವರಾಜ ಹಡಗಲಿ, ಶಿವಯೋಗಿ ಧರ್ಮಣ್ಣವರ, ಶಿವನಗೌಡ ಪಾಟೀಲ ,ಸೋಮಣ್ಣ ಗೋಡಿಕಟ್ಟಿ,ಶಿವಯೋಗಿ ಹಂಚಿನಾಳ, ಮೃತ್ಯುಂಜಯ ಬಟ್ಟುರ ಸೇರಿದಂತೆ ನೂರಾರು ಜನರು ಸೇರಿದ್ದರು. ಪ್ರಸಾದದ ವ್ಯವಸ್ಥೆಯಯನ್ನು ಮರಿತ್ಯುಂಜಯ ಯುವಕ ಮಂಡಳದ ಸದಸ್ಯರು ನಿರ್ವಹಿಸಿದರು.