ಧಾರವಾಡ : ಧಾರವಾಡದ ಜೆ ಎಸ್ ಎಸ್ ಕಾಲೇಜಿನಲ್ಲಿ ನಡೆದ ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ನಟ ಉಪೇಂದ್ರ ಬರುವ ಮುಂಚೆ ವಿಧ್ಯಾರ್ಥಿಗಳು ಜಾನಪದ ಹಾಡಿಗೆ ಹೆಜ್ಜೆ ಹಾಕಿದರು.
“ನಾ ಡ್ರೈವರ್ ” ಎಂಬ ಹಾಡು ವಿಧ್ಯಾರ್ಥಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮಾದಕ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ವಿಧ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.
ನಟ ಉಪೇಂದ್ರ ಹುಬ್ಬಳ್ಳಿಯ ಕಾರ್ಯಕ್ರಮ ಮುಗಿಸಿಕೊಂಡು ಬರುವದು ತಡವಾದ ಹಿನ್ನೆಲೆಯಲ್ಲಿ, ವಿಧ್ಯಾರ್ಥಿಗಳ ಮನರಂಜನೆಗಾಗಿ ನಾ ಡ್ರೈವರ್ ಮತ್ತು ಹೈಸ್ಕೂಲ್ ಹುಡುಗಿ ಲವ್ ಕುರಿತಾದ ಹಾಡುಗಳನ್ನು ಹಚ್ಚಲಾಯಿತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಇಲಾಖೆ ಕಳೆದೊಂದು ತಿಂಗಳಿನಿಂದ ಮಾದಕ ವಿರೋಧಿ ಅಭಿಯಾನ ನಡೆಸಿದ್ದು, ಕಳೆದ ವಾರವಷ್ಟೇ ಜನಪ್ರಿಯ ನಟ ಶಿವರಾಜಕುಮಾರ ಬಂದು ಹೋಗಿದ್ದಾರೆ. ಇದೀಗ ನಟ ಉಪೇಂದ್ರ, ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.