![Animal Husbandry Medical College Demand Appeal.](https://independentsangramnews.com/wp-content/uploads/2025/01/WhatsApp-Image-2025-01-17-at-1.59.39-AM.jpeg)
ಧಾರವಾಡ : ಜಯ ಕರ್ನಾಟಕ ಜನಪರ ವೇದಿಕೆಯಿಂದ, ಧಾರವಾಡ ವಿದ್ಯಾಕಾಶಿ ಎಂದೇ ಹೆಸರುವಾಸಿಯಾಗಿದೆ ಧಾರವಾಡದಲ್ಲಿ ಈಗಾಗಲೇ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಇರುವದು ಹೆಮ್ಮೆ ವಿಷಯವಾಗಿದೆ, ಆದರೆ ಧಾರವಾಡದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಹೊಂದಿದ ಕೃಷಿ ವಿಶ್ವವಿದ್ಯಾಲಯವಿದ್ಧರೂ ಕೂಡಾ ಅದರ ಅಂಗ ಸಂಸ್ಥೆಯಾದ ಪಶು ಸಂಗೋಪನಾ ವೈದ್ಯಕೀಯ ಮಹಾವಿದ್ಯಾಲವಿಲ್ಲಾವೆಂದು ಹೇಳಲು ವಿಷಾದನೀಯವೆನಿಸುತ್ತದೆ, ಆದಕಾರಣ ಇಂದು ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡದಲ್ಲಿ ಪಶು ಸಂಗೋಪನಾ ವೈದ್ಯಕೀಯ ಮಹಾವಿದ್ಯಾಲಯವನ್ನು ಆರಂಭಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ ಜಾದವ, ಪ್ರಮೋದ ಶೆಟ್ಟಿ, ಅರ್ಷದ ಪಠಾಣ, ಗುರು ಸುಣಗದ, ಪ್ರದೀಪ ಪಾಟೀಲ, ಶಿವರಾಜ ಶಿವಳ್ಳಿ, ಅರುಣ ಸುತಾರೆ, ಸಂಜಯ ಮೂಲಿಮನಿ, ಜ್ಯೋತಿಬಾ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.