
ಧಾರವಾಡ : ಸ್ಥರ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕಳೆದ 10 ವರ್ಷಗಳಿಂದ ಹುಬ್ಬಳ್ಳಿಧಾರವಾಡದಲ್ಲಿ ತಬಲಾ ಮತ್ತು ಸಿತಾರ ಶಿಕ್ಷಣವನ್ನು ನೀಡುತ್ತ ಬಂದಿದ್ದು ಅನೇಕ ಮಕ್ಕಳನ್ನು ತಯಾರು ಮಾಡುತ್ತಿದ್ದಾರೆ, ತಬಲಾ ಗುರುಗಳಾದ ಡಾ|ಶ್ರೀಹರಿ ದಿಗ್ಗಾವಿ ಮತ್ತು ಸಿತಾರ ಗುರುಗಳಾದ ಶ್ರೀಮತಿ ಶೃತಿ ದಿಗ್ಗಾವಿ ಅವರ ಸಾರಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಕಳೇದ 2023 ರ ಮೇ ತಿಂಗಳನಲ್ಲಿ ತಮ್ಮ ಸಂಸ್ಥೆಯ ಸಂಪೂರ್ಣ ದಿನದ ವಾರ್ಷಿಕೋತ್ಸವ ಮತ್ತು ಸಂಗೀತೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿ ಅತ್ಯಂತ ಪ್ರಶಂಸೆಗೆ ಪಾತ್ರವಾಗಿತ್ತು. ಪ್ರಸ್ತುತ 2025 ನೇ ಯ ಏಪ್ರೀಲ್ 20 ರಂದು ಈ ಬಾಲ “ಅನಾಹತ” ಎ೦ಬ ಏಷೇಷ ಶೀರ್ಷಿಕೆಯಡಿ ನಡೆಯಲಿದೆ.
ಇದು ಸಂಪೂರ್ಣ ದಿನದ ಕಾರ್ಯಕ್ರಮವಾಗಿದ್ದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ರ ವರೆಗೆ ಕನಾ೯ಟಕ ಕುಲ ಪುರೋಹಿತ ಆಲೂರ ವೆಂಕಟರಾವ ಸಭಾಭವನ ನಡೆಯಲಿದ್ದು ಎಲ್ಲ ಕಲಾಸಕ್ತರು ಪಾಲ್ಗೊಳ್ಳಬಹುದಾಗಿದೆ ಎಂದು ಶ್ರೀ ಹರಿ ದಿಗ್ಗಾವಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕೇವಲ ತಬಲಾ ಮತ್ತು ಸಿತಾರ ಇವುಗಳ ವಾದ್ಯಗಳ ಸಮ್ಮಿಶ್ರಣದಲ್ಲಿಯೇ ಸಂಪೂರ್ಣ ದಿನದ ಕಾರ್ಯಕ್ರಮವನ್ನು ನಡೆಸುವುದು ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ. ಇದರೊಂದಿಗೆ ದೇಶದ ರಾಷ್ಟ್ರೀಯ ಮಟ್ಟದ ಕಲಾವಿದರುಗಳಿಂದ ಸಂಗೀತ ಕಾರ್ಯಕ್ರಮಗಳು ಇರುತ್ತವೆ , ಡಾ.ಉದಯ ಕುಲಕರ್ಣಿ ರವರ ತಬಲಾ ಸೋಲೋ, ಬಸವರಾಜ ವಂದಲಿ ರವರ ಹಿಂದೂಸ್ತಾನಿ ಗಾಯನ ಮತ್ತು ಡಾ|| ಅರಣ್ಯಕುಮಾರ ರವರ ಸಿತಾರ ವಾದನ ಕೊನೆಯಲ್ಲಿ ನಾಡಿನ ಅತ್ಯಂತ ಪ್ರತಿಭಾನ್ವಿತ ಯುವ ಕಲಾವಿದರಾದ ಸಿದ್ದಾರ್ಥ ಬೆಳ್ಳಣ್ಣು ರವರ ಹಿಂದೂಸ್ತಾನಿ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬೀಳದೆ ಎಂದರು.
ಕೇವಲ ಕಾರ್ಯಕ್ರಮವಷ್ಟೇ ಅಲ್ಲದೆ ಸಂಸ್ಥೆಯು ಪ್ರತಿ ಸಲ ಹಲವಾರು ಹಿರಿಯ ಮತ್ತು ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಅನೇಕ ಮಹನೀಯರಿಗೆ ಗೌರವ ಸನ್ಮಾನವನ್ನು ಮಾಡುತ್ತ ಬಂದಿದೆ. ಈ ಬಾರಿ ಹಿರಿಯ ಸಿತಾರ ವಾದಕ ಮತ್ತು ಸಂಗೀತ ಸಂಯೋಜಕರಾದ ಪಂ.ಶ್ರೀನಿವಾಸ ಜೋಶಿ, ಡಾ||ಗಂಗೂಬಾಯಿ ಹಾನಗಲರ ಶಿಷ್ಯರಾದ ಹಿರಿಯ ಗಾಯಕರಾದ ಪಂ.ಅಶೋಕ ನಾಡಿಗೇರ, ತಬಲಾ ಕ್ಷೇತ್ರಕ್ಕೆ ಅನೇಕ ಶಿಷ್ಯಂದಿರನ್ನು ಕೊಟ್ಟ ಪಂ.ಬಸವರಾಜ ಬೇಂಡಿಗೆರಿ ಹಾಗೂ ಪಂ.ಮಮ್ಮುಲಾಲ ಸಾಂಗಾವಕರ ರವರ ಶಿಷ್ಯರಾದ ಪಂ.ಡಾ.ರಾಚಯ್ಯ ಹಿರೇಮಠ, ನಾಡಿನ ಪ್ರಖ್ಯಾತ ಸಿತಾರ ವಾದಕ ಮತ್ತು ಧಾರವಾಡ ಕಲ ಘರಾಣಿಯ ಹಾಗೂ ಕಳೆದ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉಸ್ತಾದ ಶಫೀಕ ಖಾನ್ ರವರಿಗೆ, ಸ್ವರ ಮಂದಾರ ಸಂಸ್ಥೆಯ ವತಿಯಿಂದ ಗೌರವ ಸನ್ಮಾನವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಎಲ್ಲ ಕಲಾಸಕ್ತರು ಕಾರ್ಯಕ್ರಮಕ್ಕೆ ಆಗಮಸಬೇಕಾಗಿ ಕಾರ್ಯದರ್ಶಿಗಳಾದ ಶ್ರೀಮತಿ ಶೃತಿ ದಿಗ್ಗಾವಿ ಪತ್ರಿಕಾಗೋಷ್ಟಿಯಲ್ಲಿ ಕೋರಿದರು.