ಧಾರವಾಡ 14 : ಮರಾಠ ವಿದ್ಯಾ ಪ್ರಸಾರಕ ಮಂಡಳ ಹಾಗೂ ಅಂಗಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಯಾದ ಸುಭಾಷ್ ಶಿಂದೆ ಮುಖ್ಯ ಅತಿಥಿಗಳಾಗಿ ಸಹಕಾರ್ಯದರ್ಶಿ ಮಲ್ಲೇಶಪ್ಪ ಶಿಂದೆ ನಿರ್ದೇಶಕರಗಳಾದ ಅನಿಲ್ ಬೋಸ್ಲೆ ಈಶ್ವರ ಪಾಟೀಲ್ ಆಗಮಿಸಿದ್ದರು ಹಾಗೂ ಸಂಸ್ಥೆಯ ಮುಖ್ಯೋಧ್ಯಾಪಕ ಅಶೋಕ್ ಬಾಬರ್ ಎಂ ಎಸ್ ಗಾಣಿಗೇರ್ ಮೀನಾಕ್ಷಿ ಎಂ ಘಾಟಗೆ ಶ್ರೀಮತಿ ಶೈಲಶ್ರೀ ಎಂ.ಸಂಕೋಜಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಎ. ಪಿ. ಕೆಮಕರ್ ನಿರೂಪಿಸಿದರು ಎಂಎಸ್ ಯಾದವ್ ಅವರು ಸ್ವಾಗತಿಸಿದರು ಅಶ್ವಿನಿವಾಡ್ಕರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ವ್ಯಕ್ತಿತ್ವದ ಬಗ್ಗೆ ಸವಿವರವಾಗಿ ಮಾತನಾಡಿದರು.