ಧಾರವಾಡ : ಚಿಕ್ಕವಯಸ್ಸಿನಲ್ಲಿ ಸುಖಗಳನ್ನ ತ್ಯಜಿಸಿ ಅಕ್ಕಮಹಾದೇವಿಯವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು.ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರು ಲೌಕಿಕ ಜಗತ್ತನ್ನು ಧಿಕ್ಕರಿಸಿ  ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿ ಎಂದು ಡಾ. ಮೌನೇಶ್ವರ ಕಮ್ಮಾರ್ ಪ್ರಾಧ್ಯಾಪಕರು ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಕೃಷಿ ವಿಶ್ವವಿದ್ಯಾಲಯ ಧಾರವಾಡ ಹೇಳಿದರು. ಇವರು ಧಾರವಾಡ ಜಗನ್ಮಾತಾ ಅಕ್ಕಮಹಾದೇವಿ ಮಠದ 57ನೇ ವಾರ್ಷಿಕೋತ್ಸವ ಹಾಗೂ 16ನೇ ಶರಣೋತ್ಸವ ಉದ್ಘಾಟಿಸಿ ಮಾತನಾಡಿದರು.

ಸ್ವಾಭಿಮಾನದ ಪ್ರತೀಕವಾಗಿ ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಜಗತ್ತು ಪ್ರಸಿದ್ಧರಾದವರು ಎಂದು ಹೇಳಿದರು. ಡಾ. ವಿನೋತಾ ಮುಕ್ತ ಮಠ ಕೃಷಿ ವಿಜ್ಞಾನಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರು ಶರಣೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು ವಿಜ್ಞಾನಕ್ಕೂ ಅಧ್ಯಾತ್ಮಕ್ಕೂ ಹತ್ತಿರವಾದ ಸಂಬಂಧವಿದೆ ಎಂದ ಅಕ್ಕಮಹಾದೇವಿಯವರ ವಚನಗಳೊಂದಿಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ದಿವ್ಯ ಸಾನಿಧ್ಯ ವಹಿಸಿದ ಪೂಜ್ಯಶ್ರೀ ಮಹಾ ಜಗದ್ಗುರು ಡಾ.ಮಾತೆ ಗಂಗಾದೇವಿಯವರು ಆಶೀರ್ವಚನ ನೀಡಿದರು. 12ನೇ ಶತಮಾನದಲ್ಲಿ ಬಸವಣ್ಣನವರ ಅಕ್ಕಮಹಾದೇವಿಯವರ ಕೊಡುಗೆ ಅಪಾರವಾದದ್ದು ಎಂದ ಅವರು ಶರಣ ಶರಣೆಯರು ಜೀವಮಾನದಲ್ಲಿ ಆಯುಷ್ಯಆರೋಗ್ಯಇರುವವರೆಗೆ ಎಷ್ಟುಸಲ ಒಬ್ಬ ವ್ಯಕ್ತಿ ಶರಣೋತ್ಸವಗಳಲ್ಲಿ ಭಾಗಿಯಾಗುತ್ತಾನೋ ಆತ ನಿಜಕ್ಕೂ ಹೆಚ್ಚು ಪುಣ್ಯವಂತ ಇಂತಹ ಪವಿತ್ರ ಶರಣೋತ್ಸವಕ್ಕೆ ಜಾತಿ,ಮತ,ಪಂಥಗಳ ಭೇದವಿಲ್ಲದೆ ಸಹೋದರ ಭಾವನೆಯಿಂದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಮ್ಯೂಸಿಯಂನ್ನ ಬಸವ ಟಿವಿಯ ಮುಖ್ಯಸ್ಥರಾದ ಈ ಕೃಷ್ಣಪ್ಪ ಉದ್ಘಾಟಿಸಿದರು. ನಂತರ ಕೃತಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪೂಜ್ಯಶ್ರೀ ಜಗದ್ಗುರು ಜ್ಞಾನೇಶ್ವರಿ ಮಾತಾಜಿ. ಪೂಜ್ಯಶ್ರೀ ಸದ್ಗುರು ಬಸವಕುಮಾರ ಸ್ವಾಮೀಜಿ ಯವರು ಪೂಜ್ಯ ಶ್ರೀ ಜಗದ್ಗುರು ಮಾತೆ ದಾನೇಶ್ವರಿ ಯವರು ಪೂಜ್ಯಶ್ರೀ ಜಗದ್ಗುರು ಕಸ್ತೂರಿ ಮಾತಾಜಿ. ಪೂಜ್ಯ ಶ್ರೀ ಸದ್ಗುರು ಬಸವ ಪ್ರಕಾಶ್ ಸ್ವಾಮೀಜಿ,ಪೂಜ್ಯ ಶ್ರೀ ಸದ್ಗುರು ಬಸವ ಯೋಗಿ ಸ್ವಾಮೀಜಿ ಪೂಜ್ಯ ಶ್ರೀ ಸದ್ಗುರು ಮಾತೆ ಲಾವಣ್ಯದೇವಿ ಸೇರಿಂತ ಮೊದಲಾದ ಶ್ರೀಗಳು ದಿವ್ಯ ಸಮ್ಮುಖ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ  ಡಾ. ಶಾಂತಾ ಬಿರಾದಾರ್ ಡಾ.ವೀಣಾ ಬಿರಾದರ, ಶಶಿಕಲಾ ಬಸವರೆಡ್ಡಿ. ತೆಲಂಗಾಣದ ರಾಷ್ಟ್ರೀಯ ಬಸುವದಳದ ಅಧ್ಯಕ್ಷರು ಶಂಕ್ರಪ್ಪ ಪಾಟೀಲ್ ಕರ್ನಾಟಕದ ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ವೀರೇಶ್ ಗೌರವಾಧ್ಯಕ್ಷರಾದ ಬಸವರಾಜ ಆನೆಗುಂದಿ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರಾದ ಪೂಜಾ ಸವದತ್ತಿ ರಾಷ್ಟ್ರೀಯ ಬಸವೇಶ್ವರದ ಪ್ರಧಾನ ಕಾರ್ಯದರ್ಶಿ ಅಜಯ್ ಚೌಹಾನ್, ಪರಮೇಶ್ವರ್ ಕೆಂಗಾರ್, ಅಶೋಕ್ ಶೆಟ್ಟರ್, ರಮಾನಂದ್ ಕಮ್ಮಾರ್, ಸುಧಾ ಕಬ್ಬೂರ್ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.