ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಮರ್ಯಾದೆ ಗೇಡು ಹತ್ಯೆಗಳ ವಿರೋಧ ಎಐಡಿಎಸ್ಓ ಪ್ರಚಾರ.
ಧಾರವಾಡ : ನವೋದಯದ ಮಹಾನ್ ವ್ಯಕ್ತಿತ್ವ ಸಾವಿತ್ರಿಬಾಯಿ ಅವರ 195 ನೇ ಜನ್ಮದಿನವನ್ನು ಇಂದು ಧಾರವಾಡದ ವಿವಿಧ ಮೈದಾನ, ಶಾಲೆಗಳು, ಹಾಸ್ಟೆಲ್ ಹಾಗೂ ಬಡಾವಣೆಗಳಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಾವಿತ್ರಿಬಾಯಿ ಫುಲೆ ಅವರು ಕೇವಲ ಶಾಲೆಯನ್ನು ತೆರೆಯಲಿಲ್ಲ. ಬದಲಾಗಿ ಸಾವಿರಾರು ವರ್ಷಗಳ ಶೋಷಣೆ ವಿರುದ್ಧ ಕೇವಲ ಒಂದು ಪುಸ್ತಕ ಮತ್ತು ಎದೆಯ ತುಂಬಾ ಧೈರ್ಯವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಯುದ್ಧವನ್ನೇ ಸಾರಿದರು.
ಅವರು ಪುಣೆಯ ಬೀಡೆವಾಡ ಶಾಲೆಗೆ ನಡೆದುಕೊಂಡು ಹೋಗುವಾಗ ಜನ ಅವರಿಗೆ ಹೆಸರು ಸಗಣಿ ಮತ್ತು ಕಲ್ಲುಗಳನ್ನ ಎಸೆದಿದ್ದಾರೆ ಆದರೆ ಅವರು ಯಾವುದೇ ಅವಮಾನಕ್ಕೆ ಹೆದರದೆ ಅಂದು ಹೆಣ್ಣುಮಕ್ಕಳು ಹಾಗೂ ಕೆಳ ವರ್ಗದ ಮಕ್ಕಳಿಗಾಗಿ ಶಾಲೆಗಳನ್ನು ತೆರೆದರು. ಆದರೆ ಇಂದು ಸರ್ಕಾರ ಇಂಥ ಮಹಾನ್ ವ್ಯಕ್ತಿಗಳ ಆಶಯವನ್ನು ಗಾಳಿಗೆ ತೂರಿ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯದಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಇದರಿಂದ ಸಾವಿತ್ರಿಬಾಯಿ ಅವರ ಆಶಯ ವಾಗಿದ್ದ ಎಲ್ಲರಿಗೂ ಶಿಕ್ಷಣ ತಲುಪಬೇಕೆಂಬುದನ್ನು ನೆಲಸಮ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಸಾವಿತ್ರಿಬಾಯಿ ಕೊಲೆಯವರು ಅಂದು ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು ಜೊತೆಗೆ ಅನ್ಯ ಜಾತಿಯ ವಿವಾಹವನ್ನು ಬೆಂಬಲಿಸಿ ಸ್ವತಃ ತನ್ನ ಮಗನಿಗೆ ಅನ್ಯ ಜಾತಿ ವಿವಾಹವನ್ನು ಮಾಡಿಸುವುದರ ಮೂಲಕ ಸಮಾಜದಲ್ಲಿ ಆಳವಾಗಿ ಬೇರೂರಿಂದ ಜಾತಿ ವ್ಯವಸ್ಥೆ, ವಿರುದ್ಧ ಸಿಡಿದೆದ್ದರೂ ಆದರೆ ಇತ್ತೀಚಿಗೆ ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ತಂದೆ ಸ್ವತಃ ತನ್ನ ಗರ್ಭಿಣಿ ಮಗಳನ್ನು ಕೊಂದು ಹಾಕಿದ ಮರ್ಯಾದೆ ಹತ್ಯೆ ಯನ್ನು ನೋಡಿದ್ದೇವೆ.ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ ಹೋರಾಟವನ್ನು ನಾವು ನೆನಪಿಸಿಕೊಳ್ಳಬೇಕು ಇಂತಹ ಜಾತಿ ವ್ಯವಸ್ಥೆ ಮರ್ಯಾದೆ ಹತ್ಯೆಗಳನ್ನು ಅಳಿಸಿ ಹಾಕುವಲ್ಲಿ ಜನಗಳೆಲ್ಲ ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸಿಂಧೂ ಕೌದಿ, ಕಾರ್ಯಕರ್ತರಾದ ಶಾಂತು, ರವಿ, ಸಿದ್ದು ಹಾಗೂ ವಿದ್ಯಾರ್ಥಿಗಳು ಜನರು ಇದ್ದರು.





