ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗಕ್ಕೆ ಉಪಾಧ್ಯಕ್ಷೆಯಾಗಿ ನ್ಯಾಯವಾದಿ ಗೀತಾ ಥಾವಂಶಿ.
ಧಾರವಾಡ : ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗಕ್ಕೆ ಧಾರವಾಡದ ಖ್ಯಾತ ನ್ಯಾಯವಾದಿಗಳಾದ ಶ್ರೀಮತಿ ಗೀತಾ ಥಾವಂಶಿ ಇವರನ್ನು ನೇಮಕ ಮಾಡಲಾಗಿದೆ.
ಅವರು ಕೆಪಿಸಿಸಿಯ ಆದೇಶದಂತೆ ಹಲವಾರು ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಧಾರವಾಡ 74 ಮತಕ್ಷೇತ್ರದ ಗ್ಯಾರೆಂಟಿ ಅಧ್ಯಕ್ಷೆಯಾಗಿ ಇವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಕ್ಷ ಸಂಘಟನೆಗಳಲ್ಲಿ ಸಂಘಟನಾ ಚಾತುರ್ಯರಾಗಿ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇವರ ಸಾಮಾಜಿಕ ಸೇವೆ, ಪಕ್ಷ ನಿಷ್ಠೆ, ಮಹಿಳೆಯರಿಗಾಗಿ ಅನೇಕ ಜನಜಾಗ್ರತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಕಾರಣ ಕೆಪಿಸಿಸಿಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮತ್ತು ಕಾನೂನು ಮಾನವ ಹಕ್ಕು ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಡಾಕ್ಟರ್ ಅಭಿಷೇಕ್ ಸಿಂಘವಿ ಆದೇಶದ ಮೇರೆಗೆ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ.






