ಕವಿತೆ ಬರೆಯುವವರಿಗೆ ದಿಟ್ಟತನ ಇರಬೇಕು: ಸಾಹಿತಿ ಎ ಎ ದರ್ಗಾ

ಧಾರವಾಡ 23 : ಜಾತಿ, ವರ್ಗ, ಲಿಂಗ ತಾರತಮ್ಯ ತೊರೆದು ಸರ್ವರಿಗೆ ನಡೆ ನುಡಿ ಸಾರುವ ಕನ್ನಡ ವಚನ ಸಾಹಿತ್ಯ ವಿಶ್ವ ಸಾಹಿತ್ಯದಲ್ಲೇ ಶ್ರೇಷ್ಠ ಸ್ಥಾನ ಪಡೆದಿದೆ ಎಂದು ಬಸವ ಶಾಂತಿ ಮಿಷನ್ ಟ್ರಸ್ಟ್ ಪ್ರಮುಖರಾದ ಶ್ರೀಮತಿ ಪ್ರೇಮಕ್ಕ ಹೊರಟ್ಟಿ ಹೇಳಿದರು.
ತಾಲೂಕು ಕ. ಸಾ. ಪ. ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ” ವಚನ ಸಾಹಿತ್ಯ ಮತ್ತು ಆತ್ಮಜ್ಞಾನ ” ಕುರಿತು ಅವರು ಮಾತನಾಡುತ್ತಿದ್ದರು.
ಚಂದ್ರಶೇಖರಗೌಡ ಬಸನಗೌಡ ಪಾಟೀಲ ಹಾಗೂ ಡಾ. ರಾ. ಯ. ಧಾರವಾಡಕರ ಸಾಪ್ತಾಹಿಕ ಉಪನ್ಯಾಸ ಮಾಲಿಕೆಯಡಿ ಗಣರಾಜ್ಯೋತ್ಸವ ಮತ್ತು ಮಕರ ಸಂಕ್ರಾಂತಿ ನಿಮಿತ್ತ ಧಾರವಾಡ ಕ. ಸಾ. ಪ. ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಸಹ ನಡೆಯಿತು.
ರಾ. ಯ. ಧಾರವಾಡಕರರು ಶ್ರೇಷ್ಠ ಬರಹಗಾರರು, ವಾಗ್ಮಿ, ಹಾಸ್ಯ ಲೇಖನಗಳ ಪ್ರಬಂಧಕಾರರೂ ಆಗಿದ್ದರೆಂದು ಶ್ರೀನಿವಾಸ ವಾಡಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡದ ಕಣ್ವ ಬಿ. ಎಂ. ಶ್ರೀ. ಅವರ ಗರಡಿಯಲ್ಲಿ , ಸಹೋದ್ಯೋಗಿಯಾಗಿದ್ದ ಧಾರವಾಡಕರರು ಕನ್ನಡ ಸಾಹಿತ್ಯದ ಇತಿಹಾಸ ಕುರಿತ ನಡೆಸಿದ ಸಂಶೋಧನಾತ್ಮಕ ಗ್ರಂಥಗಳು ಸಾಹಿತ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಂದಿಗೂ ದಾರಿದೀಪವಾಗಿವೆ ಎಂದು ವಾಡಪ್ಪಿ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಆಶಯ ನುಡಿಗಳನ್ನಾಡಿದ ಡಾ. ಎಸ್. ಎಸ್. ದೊಡಮನಿ ಕನ್ನಡ ಕಾವ್ಯ ನಡೆದು ಬಂದ ದಾರಿ ವಿವರಿಸಿದರು.
ದತ್ತಿದಾನಿಗಳಾದ ಅನಿಲ ಧಾರವಾಡಕರ ಮಾತನಾಡಿದರು.
ಧಾರವಾಡ ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಎ. ಎ. ದರಗಾ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ. ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಕಾರ್ಯದರ್ಶಿ ಶಾಂತವೀರ ಬೆಟಗೇರಿ ಅತಿಥಿಯಾಗಿದ್ದರು ಬಸವಶಾಂತಿ ಮಿಷನ್ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಹೊರಟ್ಟಿ ಗೌರವ ಉಪಸ್ಥಿತರಿದ್ದರು. ಮಾರ್ತಾ0ಡಪ್ಪ ಕತ್ತಿ ಹಾಜರಿದ್ದರು. ೨೫ ಕ್ಕೂ ಹೆಚ್ಚು ಕವಿಗಳು ಕಾವ್ಯ ವಾಚನ ಮಾಡಿದರು. ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಅವರನ್ನು ಸತ್ಕರಿಸಲಾಯಿತು ಹಾಗೂ ಪ್ರಮೀಳಾ ಜಕ್ಕಣ್ಣವರ ಪ್ರಾರ್ಥನೆ ಹಾಡಿದರು. ತಾಲೂಕಾ ಕ. ಸಾ. ಪ. ಅಧ್ಯಕ್ಷ
ಮಹಾಂತೇಶ ನರೇಗಲ್ಲ, ಸ್ವಾಗತಿಸಿದರು. ಮೇಘಾ ಹುಕ್ಕೇರಿ ಕಾರ್ಯಕ್ರಮ ನಿರ್ವಹಿಸಿದರು. ಮಾರ್ತಾಂಡಪ್ಪ ಕತ್ತಿ , ಎಚ್ ಎಸ್ ಪ್ರತಾಪ್, ಮಂಜುನಾಥ ಮೊಹರೆ, ಶ್ರೀನಿವಾಸ ಪಾಟೀಲ, ಸಂಜಯ ಪಾಟೀಲ, ಉಮೇಶ್ ಮುನವಳ್ಳಿ , ಪ್ರೊ. ಅರುಣಾ ಹಳ್ಳಿಕೇರಿ, ಗೀತಾ ಕುಲಕರ್ಣಿ, ಉಮಾ ಬಾಗಲಕೋಟೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!