ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ : ಸಲೀಂ ಅಹ್ಮದ್

ಇಂದು ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಕುರಿತು ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರಾದ ಶ್ರೀ ಸಲೀಂ ಅಹ್ಮದ್ ರವರು, ಇಂದಿನ ಬಜೆಟ್ ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ ಆಗಿದೆ.

ಬಜೆಟ್ ಕೇವಲ ಪದಗಳಿಂದ ತುಂಬಿತ್ತು.ದೇಶದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ದಿಕ್ಸೂಚಿಯಿಲ್ಲ..

ಈ ಬಜೆಟ್ ನಲ್ಲಿ ದಕ್ಷಿಣ ಭಾರತ ಹಾಗೂ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ..

ರೈತರಿಗೆ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಇಲ್ಲ.. ರಾಜ್ಯದ ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪವಿಲ್ಲ.
ಯುವಕರಿಗೆ ಉದ್ಯೋಗದ ಸ್ರಷ್ಟಿ ನೀಡುವಲ್ಲಿ ವಿಫಲ.. ಒಟ್ಟಾರೆ ದೇಶದ ರಾಜ್ಯದ ಹಿತದ್ರಷ್ಟಿಯಿಂದ ಯಾವುದೇ ಮಹತ್ವವಿಲ್ಲದ ಬಜೆಟ್ ಇದಾಗಿದೆ ಎಂದು ಸಲೀಂ ಅಹ್ಮದ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.