ಹುಬ್ಬಳ್ಳಿ 27 : ಉಜ್ವಲ ಭವಿಷ್ಯಕ್ಕೆ ಗಣ್ಯರ ಸಾಧನೆಯು ನಮಗೆ ದಾರಿದೀಪವಾಗಬೇಕು ಎಂದು ದೇವಕಿ ಯೋಗಾನಂದ ಹೇಳಿದರು.
ಹು- ಧಾ ಮಹಾನಗರ ಪಾಲಿಕೆಯ ವಾಡ್೯ ನಂ 27 ರ ನವನಗರದ ಭಗನಿ ನೀವೆದಿತಾ ವಿದ್ಯಾಲಯದಲ್ಲಿ ಎರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. 1 ಮತ್ತು 2 ನೇ ತರಗತಿ ಮಕ್ಕಳಿಂದ ಛದ್ಮವೇಷ ಪ್ರದರ್ಶನ ಮಾಡಿದರು.
5 ನೇ ತರಗತಿ ಮಕ್ಕಳು ದೇಶಭಕ್ತಿಗೀತೆ ಹಾಡನ್ನು ಹಾಡಿದರು. 6 ನೇ ಮತ್ತು 7 ನೇ ತರಗತಿ ಮಕ್ಕಳು ಭಾಷಣ
ಮಾಡಿದರು. 3 ನೇ ತರಗತಿ ಮಕ್ಕಳು ದೇಶಭಕ್ತಿ ನೃತ್ಯವನ್ನು ಮಾಡಿ ಜನ ಮೆಚ್ಚುಗೆ ನಡೆಸಿದರು.
ಪ್ರೌಢ ಶಾಲೆಯ ಮಕ್ಕಳು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಭಾಷಣವನ್ನು ಮಾಡಿದರು. 10 ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿದರು. 8 ಮತ್ತು 9 ನೇ ತರಗತಿ ಮಕ್ಕಳು ಯೋಧರ ನೃತ್ಯವನ್ನು ಅದ್ಭುತವಾಗಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಎರಡು ವಿಭಾಗದ ಮುಖ್ಯ ಶಿಕ್ಷಕರು, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು, ಸಮಿತಿಯ ಸದಸ್ಯರು, ಎಲ್ಲ ಶಿಕ್ಷಕರು, ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು. ಜಿ.ಜಿ.ಹೆಗಡೆ ಅವರು ಸ್ವಾಗತ ಸಹನಾ ಓಂಕಾರ ಶಿಕ್ಷಕಿಯವರು ನಿರೂಪಣೆ, ಚೇತನಾ ಪಟ್ಟಣಶೆಟ್ಟಿ ವಂದನಾರ್ಪಣೆ ಮಾಡಿದರು.
ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ
ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…