![Environmental Sustainability State Level Essay Competition - Irrigation Katagi First](https://independentsangramnews.com/wp-content/uploads/2025/01/WhatsApp-Image-2025-01-17-at-2.33.16-AM.jpeg)
ಧಾರವಾಡ : ನವದೆಹಲಿಯಲ್ಲಿ ಜನವರಿ 11 ಮತ್ತು 12 ರಂದು ನಡೆದ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಧಾರವಾಡ ನಗರದ ವ್ಯದ್ಯಕೀಯ ವಿದ್ಯಾರ್ಥಿನಿ ಸಿಂಚನಾ ಕಟ್ಟಗಿ ಅವರು ‘ ಕಮ್ಯುನಿಟಿ ಮೆಡಿಸಿನ್’ ವಿಷಯದ ಕುರಿತು ಪ್ರಬಂಧ ಮಂಡಿಸಿ ರಾಜ್ಯದ ಗರಿಮೆ ಹೆಚ್ಚಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಯುವ ಜನೋತ್ಸವಕ್ಕೆ ರಾಜ್ಯದಿಂದ 45 ವಿದ್ಯಾರ್ಥಿಗಳಲ್ಲಿ ಸಿಂಚನಾ ಕಟಗಿ ಒಬ್ಬರು. ಇವರು ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಎನ್.ಎಸ್.ಎಸ್ ಕೋಶ ಮತ್ತು ಯುವ ಸಬಲೀಕರಣ ಇಲಾಖೆಗಳ ಸಹಯೋಗದಲ್ಲಿ ಬೆಂಗಳೂರಿನ ಶೇಷಾಸ್ರಿಪುರಂನಲ್ಲಿ ಏರ್ಪಡಿಸಸಿದ್ದ ವಿಕಸಿತ ಭಾರತ ಅಡಿಯಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ‘ಪರಿಸರದ ಸ್ಥಿರತೆ’ ಎಂಬ ವಿಷಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರೀಯ ಯುವ ಜನೋತ್ಸವಕ್ಕೆ ಆಯ್ಕೆ ಆಗಿದ್ದರು. ಪ್ರಸ್ತುತ ಸಿಂಚನಾ ಅವರು ಬಾಗಲಕೋಟೆಯ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದು, ಇವರಿಗೆ ತಂದೆ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್.ಕಟಗಿ, ಶಿಕ್ಷಕರು ಸಿಂಚನಾ ಕಟಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.