ಧಾರವಾಡ : ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನ ಧಾರವಾಡ ಇವರು ನವೆಂಬರ 21 ರಂದು 6 ಗಂಟೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಾದಗುರು ದೀಕ್ಷಾ ಗಂಡಾ ಬಂಧನ ಕಾರ್ಯಕ್ರಮ ಆಯೋಜಿಸಿದೆ.
ಅದರ ಸದುದ್ದೇಶ,ಗುರುಗಳು ವಿದ್ಯಾರ್ಥಿಯ ಮಣಿಕಟ್ಟಿನ ಮೇಲೆ ವಿಧ್ಯುಕ್ತ ದಾರವನ್ನು ಕಟ್ಟುವ ಮೂಲಕ ಶಿಷ್ಯನನ್ನು ಸ್ವೀಕರಿಸುವ ಸಂದರ್ಭವನ್ನು ಗುರುತಿಸಲು ವಿಶೇಷ ಸಮಾರಂಭವನ್ನು ನಡೆಸಲಾಗುತ್ತದೆ. ಈ ಸಮಾರಂಭವನ್ನು ‘ಗಂಡಾ-ಬಂಧನ್’ ಎಂದು ಕರೆಯಲಾಗುತ್ತದೆ.
ಅಲ್ಲಿ ಗಂಡ ಎಂದರೆ ‘ ಆಚರಣಾ ದಾರ ಮತ್ತು ಬಂಧನ ಎಂದರೆ ಕಟ್ಟುವುದು ಹೀಗೆ ಗುರುವಿನ ಕಲಿಕೆಗೆ ಶಿಷ್ಯ ತಮ್ಮ ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಬಂಧಿಸುವ ಸಂಪ್ರದಾಯ ಪಾರಂಪರಿಕವಾಗಿದೆ.ಇಂತಹ ಸಂಸ್ಕಾರ ಇತ್ತೀಚಿನ ದಿನಗಳಲ್ಲಿ ಅಪರೂಪವೇ ಸರಿ.
ಗುರುಗಳ ಮನದಿಚ್ಚೆಯನುಸಾರ ಶಿಷ್ಯಳನ್ನು ಧಾರವಾಡ ಘರಾಣೆಯ ಸಿತಾರ ವಾದನದಿ ನಾದ ಗುರು ದೀಕ್ಷೆಗೆ ಸಾಕ್ಷಿಯಾಗಿದೆ.ಈ ಪ್ರತಿಷ್ಠಿತ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪಂ.ಎಮ್ ವೆಂಕಟೇಶಕುಮಾರ ಅವರು ವಹಿಸಲಿದ್ದು ಕಳೆದ ಹದಿಮೂರು ವರ್ಷಗಳಿಂದ ಶಿಷ್ಯಳನ್ನಾಗಿ ಸ್ವೀಕರಿಸಿ ಸಿತಾರ ವಾದನ ಕಲಿಯುತ್ತಿರುವ ಕುಮಾರಿ ಜಿ.ಸೃಷ್ಟಿ ಸುರೇಶ ಅವಳಿಗೆ ಗುರುಗಳಾದ ಉಸ್ತಾದ್ ಶಫೀಕ್ ಖಾನ್ ಅವರಿಂದ ಗಂಡಾಬಂಧನ ನಂತರ ಸಿತಾರ ವಾದನ ,ತದನಂತರ ಪಂ ಎಮ್ ವೆಂಕಟೇಶಕುಮಾರ ಅವರ ಗಾಯನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಪ್ರಾರಂಬದಲ್ಲಿ ಜಿ ಸುರಭಿ ಸುರೇಶ ಇವರ ಗಾಯನ ಇವರಿಗೆ ನಾಡಿನ ಹೆಸರಾಂತ ತಬಲಾ ವಾದಕರಾದ ಪಂ ರವೀಂದ್ರ ಯಾವಗಲ್ ಹಾಗೂ ಶ್ರೀಧರ್ ಮಾಂಡ್ರೆ ಮತ್ತು ಹಾರ್ಮೋನಿಯಂ ವಾದಕರಾಗಿ ಬಸವರಾಜ ಹಿರೇಮಠ ಸಾಥ್ ಸಂಗತ ನೀಡಲಿದ್ದಾರೆ.