ಧಾರವಾಡ 29 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನ ಆಚರಣೆ ಮಾಡಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್ ಅವರು ಕುವೆಂಪು ಅವರ ಕುರಿತು ಬಾರಿಸು ಕನ್ನಡ ಡಿಂಡಿಮವ ಎಂದು ಕನ್ನಡದ ಡೋಲನ್ನು ಭಾರಿಸುವ ಮೂಲಕ ಕನ್ನಡಕ್ಕಾಗಿ ಹೋರಾಡಿದ ಧೀಮಂತ ಕವಿ ಎಂದು ಬಣ್ಣಿಸಿದರು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಅವರ ಈ ವಾಕ್ಯವನ್ನು ಸ್ಮರಿಸಿದರು.
ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ರಾಷ್ಟ್ರ ಕವಿ, ಯುಗದ ಕವಿ, ಜಗದ ಕವಿ ಎಂದು ಪ್ರಸಿದ್ಧರಾದ ಕುವೆಂಪು ಅವರ ಸಾಹಿತ್ಯ ಅಧ್ಯಯನ ಯೋಗ್ಯವಾಗಿದೆ ಎಂದರು.
ಡಾ. ಎಸ್ ದೊಡಮನಿ,ಚನ್ನಬಸಪ್ಪ ಧಾರವಾಡ ಶೆಟ್ಟರ್, ಪಿ ಡಿ ಬಸನಾಳ, ಮರೀಷ ನಾಗಣ್ಣವರ, ಎಮ್ ಎ ಹುಲಿಗೆಜ್ಜಿ, ಕೆ ಎಸ್ ಬಂಗಾರಿ, ಹನುಮಂತ ಮಾರಡಗಿ, ಪಿ ಆರ್ ಮ್ಯಾಗೇರಿ, ಅಂಜನೇಯ ಅರವೇಡ, ಮುಂತಾದವರು ಉಪಸ್ಥಿತರಿದ್ದರು.ಶಾಂತವೀರ ಬೆಟಗೇರಿ ಸ್ವಾಗತಿಸಿದರು, ಗಂಗಾಧರ ಗಾಡದ ನಿರೂಪಿಸಿದರು, ಆತ್ಮಾನಂದ ಗದ್ದೀಕೇರಿ ವಂದಿಸಿದರು.