ಧಾರವಾಡ 17 : ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಮತ್ತು ಅತಿಥಿ ಉಪನ್ಯಾಸಕರ ಕನಿಷ್ಠ (50,000-00) ರೂಪಾಯಿ ವೇತನ ಮತ್ತು ಸೇವಾ ಭದ್ರತೆ ನೀಡುವ ಕುರಿತು ಅಧ್ಯಕ್ಷ ಡಾ ಶರಣು ಮುಷ್ಟಿಗೇರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಆಶಯದೊಂದಿಗೆ ಆರಂಭವಾದ ಈ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿಯೇ ಅತಿ ದೊಡ್ಡ ಜ್ಞಾನ ಕೇಂದ್ರವಾದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸುಮಾರು 600 ಕ್ಕೂ ಹೆಚ್ಚು ಸಹಾಯಕ ಮತ್ತು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು ವಿಶ್ವವಿದ್ಯಾಲಯಗಳ ಅನುದಾನ ಆಯೋಗವು (ಯು.ಜಿ.ಸಿ)ಯು ಕನಿಷ್ಠ ವೇತನ 50,000-00 ರೂಪಾಯಿ ನೀಡಬೇಕೆಂದು ಆದೇಶಿಸಿರುತ್ತದೆ. ಆದರೆ ಕರ್ನಾಟಕ ವಿಶ್ವವಿದ್ಯಾಲಯ ನಮ್ಮನ್ನು ಶೈಕ್ಷಣಿಕ ಅರ್ಹತೆಗಳನ್ವಯ ನೇಮಕ ಮಾಡಿಕೊಂಡಿದೆ. ನಾವೆಲ್ಲರೂ ಸುಮಾರು 25 ವರ್ಷಗಳಿಂದ ಭೋಧನಾ ಕಾರ್ಯ ನಿರ್ವಹಿಸುತ್ತಿದ್ದೇವೆ. ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಲ್ಲಿ ನಿರತರಾಗಿದ್ದೇವೆ.
ಯು.ಜಿ.ಸಿ ಮಾರ್ಗಸೂಚಿಯಂತೆ, ರಾಜ್ಯದ ಇತರೆ ವಿಶ್ವವಿದ್ಯಾಲಯಗಳು ನೀಡುತ್ತಿರುವ ಕನಿಷ್ಠ ವೇತನವನ್ನು ನಮಗೂ ಸಹ ನೀಡುವಂತೆ ನಿರ್ದೇಶನ ನೀಡಿ ಈ ತಾರತಮ್ಯವನ್ನು ಸರಿಪಡಿಸಿ, ನಮಗೆ ನ್ಯಾಯ ದೊರಕುವಂತೆ ಸಂಬಂಧಿಸಿದ ಇಲಾಖೆಗೆ ತಾವುಗಳು ಶಿಪಾರಸ್ಸು ಮಾಡಬೇಕೆಂದು ಸರ್ಕಾರಕ್ಕೆ ವಿನಯ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಡಾ ಮಹಾದೇವ ಅರೇರ,ಡಾ ಮಹೇಂದ್ರ ಹರಿಹರ, ಡಾ ಎಮ್ ಭ್ಯಾಲಾಳ,ಡಾ ರಂಗಪ್ಪ ಎಂ ಎನ್,ಡಾ ರಾಮಕೃಷ್ಣ,ವಿಪುಲಾ ಮಹೇಂದ್ರಕರ,ಡಾ ಪತ್ರೆಮ್ಮ ಧಾರವಾಡ ಇದ್ದರು.