ಧಾರವಾಡ ೧೪ : ಐಐಟಿ ವಿದ್ಯಾಥಿ೯ನಿಗೆ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ಹಾಗೂ ಐಐಟಿ ಧಾರವಾಡ ಇವರ ವತಿಯಿಂದ ಐಐಟಿ ಧಾರವಾಡದ ಬಿ.ಟೆಕ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾದ ಸ್ನೇಹಾ ಐನಾಪುರೆ ಇವರಿಗೆ ಸ್ವಯಂಚಾಲಿತ ಗಾಲಿಕುರ್ಚಿಯನ್ನು ಕೊಡಮಾಡಲಾಯಿತು.
ಸ್ನಾಯು ಕ್ಷಯವೆಂಬ ಭಾಗಶಃ ಅಂಗವಿಕಲತೆಯಿಂದ ವ್ಯಾಸಂಗದಲ್ಲಿ ದೈನಂದಿಕವಾಗಿ ಕಠಿಣತೆ ಅನುಭವಿಸುತ್ತಿದ್ದ ವಿದ್ಯಾರ್ಥಿನಿಯ ಸಹಾಯಕ್ಕೆಂದು ಐಐಟಿಯಲ್ಲಿ ಪ್ರಾಧ್ಯಾಪಕರಾಗಿರುವ ಶಾಗ್ನೀಕ್ ಸೇನ್ ಗಾಲಿಕುರ್ಚಿಗಾಗಿ ರೋಟರಿ ಸಂಸ್ಥೆಯನ್ನು ಸಂಪರ್ಕಿಸಿದ್ದರು.
ರೋಟರಿಯ ಜಿಲ್ಲಾ ಮುಖ್ಯಸ್ಥ ಶರದ್ ಪೈ ರೋಟರಿಯ ಪದಾಧಿಕಾರಿ ಗೌರಿ ಮದಲಭಾವಿ, ಸ್ಮಿತಾ, ಡಾ.ಆನಂದ ತಾವರಗೇರಿ, ಡಾ. ರವಿ ಹುಂಜಿ ಇವರ ಉಪಸ್ಥಿತಿಯಲ್ಲಿ ಅವರಿಗೆ ನೀಡಿದರು.
ರೋಟರಿ ಇದೇ ರೀತಿ ಮಾನವೀಯತೆ ಕೆಲಸಕ್ಕಾಗಿ ತನ್ನನ್ನು ಮೀಸಲಾಗಿರಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿಯೆಂದು ಶರದ ಪೈ ನುಡಿದರು.
ಸ್ನೇಹಾ ತನ್ನ ವ್ಯಾಸಂಗದ ನಂತರ ಒಳ್ಳೆಯ ಕೆಲಸಗಿಟ್ಟಿಸಿ , ಅವರೂ ಕೂಡ ಇನ್ನೊಬ್ಬರಿಗೆ ಹೀಗೆ ಸಹಾಯ ಮಾಡುವಂತಾಗಲಿ, ಈ ಸಹಾಯದ ಸರಪಳಿ ಹೀಗೆ ಬೆಳಿಯಲಿ ಎಂದು ಅಧ್ಯಕ್ಷರಾದ ಗೌರಿ ಮದಲಭಾವಿ ಹಾರೈಸಿದರು.ಇದು ರೋಟರಿ ಸೆವೆನ್ ಹಿಲ್ಸ್ ಹಾಗೂ ಐಐಟಿಯ ಜಂಟಿ ಕಾರ್ಯಕ್ರಮವಾಗಿತ್ತು. ದೇಣಿಗೆ ಪಡೆದ ವಿದ್ಯಾರ್ಥಿನಿ ಸ್ನೇಹಾ ಅವರ ಪಾಲಕರ ಸಂತೋಷ ಮನತುಂಬಿ ಬರುವಂತಿತ್ತು.