ಧಾರವಾಡ : ನೆನ್ನೆ ನಡೆದ ನಮ್ಮ ಬಡಾವಣೆಯ,ಸಡಗರದಿಂದ ಜರುಗಿತು . ಬೆಳಿಗ್ಗೆ 7.30 ರಿಂದ ಪ್ರಾರಂಭವಾದ ಪೂಜಾ ಕಾರ್ಯಕ್ರಮ ರುದ್ರಾಭಿಷೇಕ, ಅಷ್ಟೋತ್ತರ ನಾಮವಳಿ, ದುರ್ಗಾ ಹೋಮ ಪೂಜೆ ,ಮಹಾಮಂಗಳಾರತಿ.
ನಂತರ ಮಧ್ಯಾಹ್ನ ನಡೆದ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಸುಮಾರು 2,500 ಜನ ಭಾಗವಹಿಸಿ ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ದಲ್ಲಿ ಪಾಲ್ಗೊಂಡಿದ್ದರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 500 ಜನಕ್ಕೂ ಹೆಚ್ಚು ಮಹಿಳೆಯರು ಕುಂಕುಮಾರ್ಚನೆ, ಲಲಿತಾ ಸಹಸ್ರ ನಾಮವಳಿ, ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾತ್ರಿ ನಡೆದ ಕಾರ್ಯಕ್ರಮದ ಲ್ಲಿ ಅಳಗಿರಿ ನಂದಿನೀ ನೃತ್ಯ ರೂಪಕ ಎಲ್ಲರ ಮನಸೆಳೆಯಿತು.
ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಶ್ರೀಮತಿ ನೇಕಾರ, ಇನ್ನಿತರರು ಎಲ್ಲರ ಮನಸನ್ನು ಮುದಗೊಳಿಸಿದರು.

ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ನಾಗಸಮುದ್ರ ಕೂಡ ಈ ಸಂಧರ್ಭದಲ್ಲಿ. ಸಂಗೀತ ಗಾಯನ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ವಾರ್ಡಿನ ಮಾಜಿ ಮಹಾಪೌರರು,ಹಾಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಶಿವು ಹಿರೇಮಠ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ನಾಗಸಮುದ್ರ, ಗೌರವ ಅಧ್ಯಕ್ಷರಾದ ಶ್ರೀ ಎಸ್ ಹೆಚ್ ಪಾಟೀಲ್,ಉಪಾಧ್ಯಕ್ಷರಾದ ಎಂ ಜಿ ಹೊಳೆಯನ್ನವರ, ಪ್ರಧಾನ ಕಾರ್ಯದರ್ಶಿ ಡಾ. ಸಿ ಗು. ಹಿರೇಮಠ,ಕೋಶಾಧ್ಯಕ್ಷೃರಾದ ಶಿವಶಂಕರ್ ಕಾಲದೀಪ್,ಸಂಘಟನಾ ಕಾರ್ಯದರ್ಶಿ ಹೆಚ ಎಸ್ ಗಡ್ಡಿ, ಸಹ ಕಾರ್ಯದರ್ಶಿ ರಾಮಣ್ಣ ಸುಳ್ಯದ, ಮಹೇಶ್ ಸಾತಿಹಾಳ, ಅಶೋಕ್ ಗೌಡರ, ಪ್ರೊ ಆರ್ ವಿ ಕಡಕೋಳ ಸುಮಿತ್ರಾ ರಾಯ್ಕರ್, ರಾಜೇಶ್ ಮನಗುಂಡಿ, ಸುನಿಲ್ ಮದಗುಣಕಿ, ಲಲಿತಾ ಸಹಸ್ರ ನಾಮವಳಿ ಮಹಿಳಾ ತಂಡದ ಕಸ್ತೂರಿ ಹುಲಿಗೆಜ್ಜಿ, ಶಿಲ್ಪಾ ಮಾಲಿಪಾಟೀಲ್, ಸರಿತ ಕಾಲ ದೀಪ್, ಅನಿತಾ ಗೋಳೆಪ್ಪನವರ,ಮೈತ್ರಿ ನೇಕಾರ, ಶ್ರೀಮತಿ ಬಗರಿ, ಶ್ರೀಮತಿ ಸಾಲಿಮಠ ಮುಂತಾದ ಮಹಿಳೆಯರು ಅತ್ಯುತ್ತಮವಾಗಿ ಕಾರ್ಯಕ್ರಮ ನಡೆಸಿದರು. ಹಿರಿಯ ನ್ಯಾಷನಲ್ ಕ್ರೀಡಾಪಟು ಶ್ರೀಮತಿ ಚನ್ನಮ್ಮ ಹೆಡೆ ಅವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.





