ಧಾರವಾಡದ ರಾಜು ಪಾಟೀಲ ಅವರಿಗೆ 2025 ನೇ ಜೀವಮಾನ ಸಾಧನ ಪ್ರಶಸ್ತಿ.

ಧಾರವಾಡ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವೈಚಾರಿಕ ದಿನಾಚರಣೆ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ -2025 ರಲ್ಲಿ ಧಾರವಾಡದ ಸಣ್ಣ ಕೈಗಾರಿಕೆಗಳ ಉದ್ಯಮಿ ರಾಜು ಸಿ ಪಾಟೀಲ ಅವರಿಗೆ 2025ನೇ ಸಾಲಿನ ಜೀವಮಾನ ಸಾಧನ ಪ್ರಶಸ್ತಿಯು ಲಭಿಸಿದ್ದಕ್ಕಾಗಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ವತಿಯಿಂದ ಗೌಯಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಸಹಕಾರ್ಯದರ್ಶಿ ಕೃಷ್ಣಮೂರ್ತಿ ಗೊಲ್ಲರ, ಡಾ ಮಾರುತಿ ಚೌಡಕ್ಕನವರ, ಹಾಗೂ ಕಿಟಲ್ ಕಾಲೇಜಿನ ಉಪನ್ಯಾಸಕ ವೃಂದದವರು ಇದ್ದರು.

ರಾಜು ಪಾಟೀಲ ಅವರ ಪರಿಚಯ.

ಧಾರವಾಡದ ಸೈದಾಪುರದ ಗೌಡರ ಮನೆತನ ಎಲ್ಲರಿಗೂ ಗೊತ್ತು. ಈ ಹಿಂದೆ ಮಹಾದಾನಿ ಚೆನ್ನವೀರಗೌಡ ಅಣ್ಣಾ ಪಾಟೀಲರು (1850-1944) ಬ್ರಿಟಿಷ್ ಸರಕಾರದಲ್ಲಿ ಉತ್ತರ ಕರ್ನಾಟಕದ ಪ್ರಥಮ ಇಂಜಿನಿಯರ್ ಆಗಿ ಎಲ್.ಇ.ಎ ಟೌನ ಹಾಲನ್ನು ನಿರ್ಮಿಸಿದರು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ, ಕರ್ನಾಟಕದ ಏಕೀಕರಣಕ್ಕಾಗಿ ದುಡಿದದ್ದು ಗಮನಾರ್ಹ, ಮಾಜಿ ಎಚ್.ಡಿ.ಎಂ.ಸಿ. ಸದಸ್ಯರು, ಬಿಜೆಪಿ ಧುರೀಣರು ಆದ ಅವರ ಮರಿಮೊಮ್ಮಗೆ ಸಿ.ಎಸ್. ಪಾಟೀಲರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ.

ಸಿ ಎಸ್ ಪಾಟೀಲ ಅವರ ಮಗ ರಾಜು ಪಾಟೀಲ ಎಂ.ಬಿ.ಎ ಪದವೀಧರರು, ಪದವಿ ಪಡೆದರು ಸಹ ಪ್ರಗತಿಪರ ರೈತರು, ಉದ್ಯಮಿಗಳು ಮತ್ತು ಕಾರ್ಪೋರೆಟ್ ತಜ್ಞರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪ್ರಗತಿಪರ ರೈತರು, ಸಧ್ಯ ಅವರು ಲಘು ಉದ್ಯೋಗ ಭಾರತೀ ಇದರ ಅಧ್ಯಕ್ಷರು,ಕೆ.ಎಸ್.ಎಸ್.ಆಯ್.ಡಿ.ಸಿ (ಬೆಂಗಳೂರು) ನಿರ್ದೇಶಕರು, ಅವರು ಮೆಸರ್ಸ್ ಪಾಟೀಲ ಇಂಡಸ್ಟ್ರೀಜ್ (ಬೇಲೂರು) ಉದ್ಯಮ ಆರಂಭಿಸಿ ಹಲವರಿಗೆ ಉದ್ಯೋಗ ನೀಡಿದ ಹಿರಿಮೆ ಇವರದು. ಅವರು ಈ ಹಿಂದೆ ಆಯ್‌ಆಯ್‌ಎಫ್‌ಎಲ್ (ಉತ್ತರ ಕರ್ನಾಟಕ, ಗೋವಾ ವಲಯ)ದರ ಸಹಾಯಕ ಉಪಾಧ್ಯಕ್ಷರು, ಬೇಲೂರು ಉದ್ಯಮ ವೃತ್ತದ ನಿರ್ವಹಣಾ ಸಮಿತಿಯ ಸದಸ್ಯರು ಆಗಿದ್ದರು.

ಸಿ. ಎಸ್. ಪಾಟೀಲರು ಮತ್ತು ಎಸ್. ಸಿ. ಪಾಟೀಲರು ತಮ್ಮ ಚೆನ್ನವೀರಗೌಡ ಅಣ್ಣಾ ಪಾಟೀಲ ಟ್ರಸ್ಟ್ ಮೂಲಕ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ.. ಎಸ್.ಸಿ. ಪಾಟೀಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮ ವಿಕಾಸ, ಕೌಶಲ್ಯಾಭಿವೃದ್ಧಿ ಕುರಿತು ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ಹಣಕಾಸಿನ ಸಾಕ್ಷರತೆ ಕುರಿತು ಹುಬ್ಬಳ್ಳಿಯಲ್ಲಿ ‘ಕೆ.ಎಲ್.ಇ. ಧ್ವನಿ’ ಮೂಲಕ ಅನೇಕ ಬಾನುಲಿ ಭಾಷಣ ಹಾಗೂ ಉದ್ಯೋಗ ಸಂಪನ್ಮೂಲದ ಕುರಿತು ವಿವಿಧ ಕಂಪನಿಗಳು, ಸಂಸ್ಥೆಗಳು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಸಂಪನ್ಮೂಲ ಭಾಷಣಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಜಿ.ಎಸ್.ಟಿ. ಕುರಿತು ಹಣಕಾಸು ಸಾಕ್ಷರತಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಬಡವರು ಮತ್ತು ನಿರ್ಗತಿಕರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹಗುರವಾದ ಗೋಡೆಯ ಪ್ಯಾನಲ್ಸ್, ಹಸಿರು ಸಿಮೆಂಟ್ ಮತ್ತು ಜಿಯೋ ಪಾಲಿಮರ್ ವಿಜ್ಞಾನದಲ್ಲಿ ನಾವಿನ್ಯತೆಯನ್ನು ಮೆರೆದಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಬಿ.ಆಯ್.ಎಸ್. ಕಛೇರಿಯ ಸ್ಥಾಪನೆ, ಉಳಿದೆಡೆ ನೆರೆಹಾವಳಿ ಮತ್ತು ಕೋವಿಡ್ ನಿವಾರಣೆ ಕೈಗೊಳ್ಳುವ ಮೂಲಕ ‘ಸರ್ವೆ ಜನಾಃ ಸುಖನೋ ಭವಂತಿ’ ಆಶಯದವರು, ಶ್ರೀಯುತರಿಗೆ ಕರ್ನಾಟಕ ಸರಕಾರದ ‘ಅತ್ಯುತ್ತಮ ಹಾರ್ಟಿಕಲ್ಟರಿಸ್ಟ್’ ಪ್ರಶಸ್ತಿ ಸಂದಿದೆ. ಈಗ 2025 ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ನೀಡುವ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದ್ದು ಧಾರವಾಡಕ್ಕೆ ಒಂದು ಗೌರವ ಸಿಕ್ಕಂತಾಗಿದೆ.