4 ರಂದು 36 ನೇ ನೃತ್ಯ ನಿರಂತರ ಸಮಾರಂಭ.

ಧಾರವಾಡ : ಶ್ರೀ ಗಣೇಶ ನೃತ್ಯ ಶಾಲೆಯ 36 ನೇ ನೃತ್ಯ ನಿರಂತರ ಸಮಾರಂಭ ಜನೇವರಿ 04 ರಂದು ಸಂಜೆ 6 ಕ್ಕೆ ಸೃಜನಾ ರಂಗ ಮಂದಿರದಲ್ಲಿ ಆಯೋಜಿಸಿದೆ ಎಂದು ವಿಧುಷಿ ರೋಹಿಣಿ ಇಮಾರತಿ ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸಾಧನಕೇರಿ ಬಡಾವಣೆಯಲ್ಲಿ 1990 ನೇ ಇಸ್ವಿಯಲ್ಲಿ ಆರಂಭವಾದ ನೃತ್ಯ ಶಾಲೆಯಲ್ಲಿ ಇಲ್ಲಿವರೆಗೂ ಅಂದಾಜು ೦5 ಸಾವಿರ ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ತರಬೇತಿ ಪಡೆದಿದ್ದಾರೆ.

15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಂಗ ಪ್ರವೇಶ ಮಾಡಿದ್ದಾರೆ. ಕರಾವಳಿ, ಕಿತ್ತೂರ, ಆನೆಗುಂದಿ, ಹಾವೇರಿ, ಬೆಳವಡಿ ಸೇರಿದಂತೆ ವಿವಿಧ ಜಿಲ್ಲಾ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ರಾಜ್ಯ ಹಾಗೂ ಅಂತರಾಜ್ಯ ಮಟ್ಟದಲ್ಲಿ ಕೂಡ ನಮ್ಮ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ಕೆನಡಾ ಮತ್ತಿತರ ವಿದೇಶಿಗರು ಈ ಶಾಲೆಯಲ್ಲಿ ನೃತ್ಯ ತರಬೇತಿ ಪಡೆದಿರುವುದು ಹೆಮ್ಮೆಯ ಸಂಗತಿ. ನಮ್ಮ ಶಾಲೆಗೆ ಹಲವು ಸಂಘ ಸಂಸ್ಥೆಗಳು ಮಠಗಳು ಪ್ರಶಸ್ತಿ ನೀಡಿ ಗೌರವಿಸಿದ್ದು ವರ್ಷದುದ್ದಕ್ಕೂ ಹಲವಾರು ಕಾರ್ಯಕ್ರಮ ಆಯೋಜಿಸಿ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದರು.

ಧಾರವಾಡದ ಶ್ರೀಮತಿ ಸುಧಾ ಜೋಗಿ 44 ವರ್ಷದ ಗೃಹಿಣಿ ಯೋಗಪಟುವಾಗಿದ್ದು 07 ವರ್ಷದಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ಅವರ ಮಗಳು ಕು. ಗಾಯತ್ರಿ ಜೊತೆ ರಂಗಪ್ರವೇಶ ಮಾಡಿರುವುದು ವಿಶೇಷ. ಸಾಗರದಲ್ಲಿ ನಡೆದ ರಾಜ್ಯಮಟ್ಟದ 35 ರಿಂದ 45 ವಯೋಮಿತಿ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಹಾಗೂ ನೃತ್ಯ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದರು.

ಅಂದಿನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉದ್ಘಾಟಿಸಲಿದ್ದು ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಅಧ್ಯಕ್ಷತೆವಹಿಸುವರು. ಕಿತ್ತೂರಿನ ತಹಶೀಲ್ದಾರ ಕಲಗೌಡ ಪಾಟೀಲ ಅತಿಥಿಯಾಗಿ ಆಗಮಿಸುವರು. ಕನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರವಿಕುಮಾರ ಕಗ್ಗಣ್ಣವರ ಅವರನ್ನು ಸನ್ಮಾನಿಸಲಿದ್ದು ಯೋಗ ನೃತ್ಯಪಟು ಶ್ರೀಮತಿ ಸುಧಾ ಜೋಗಿ ಉಪಸ್ಥಿತರಿರುತ್ತಾರೆ. ನಟುವಾಂಗದಲ್ಲಿ ವಿದುಷಿ ಶ್ರೀಮತಿ ರೋಹಿಣಿ ಇಮಾರತಿ, ವಾಣಿ ಉಡುಪಿ ಹಾಡುಗಾರಿಕೆ, ಡಾ.ಗೋಪಿಕೃಷ್ಣ ಮೃದಂಗ, ವಿದ್ವಾನ ಜಗನ್ನಾಥ ಕಬಾಡಿ ವಾಯಲಿನ್, ಸುಜಯ ಭಟ್ ಕೊಳಲು ನುಡಿಸಲಿದ್ದಾರೆ ಎಂದು ತೀಳಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಧಾ ಜೋಗಿ. ರಂಜನಾ ಕಠಾರಿ. ಅನಿತಾ ಬಂಡಿವಡ್ಡರ .ಕ್ಷಿಲೆ ಎಂ ಕೆ, ವ್ಯೆಷ್ಣವಿ ಇದ್ದರು.