ಶಿಗ್ಗಾಂವಿ : ನಗರದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಆಚರಿಸಲಾಯಿತು. ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನನು ಒಳಗೊಂಡ ಸಮಾಜವನ್ನು ರೂಪಿಸುವುದು ಅವಶ್ಯ.

ದಿನಾಚರಣೆ ಪ್ರಯುಕ್ತ ಮಾತನಾಡಿದ ಶಿಗ್ಗಾವಿ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕ ಯಾಶೀರ್ ಖಾನ್ ಪಠಾಣ ಅವರು ವಿಕಲಚೇತನರ ಜಿಲ್ಲಾ ಮಟ್ಟದ

World Day of Persons with Disabilities celebrated at district level

ಸಮಾವೇಶ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದು ನನ್ನ ಸೌಭಾಗ್ಯ.ದೇವರಿಗೆ ಅತಿ ಪ್ರಿಯವಾದ ಮಾನವ ಕುಲ ಎಂದರೆ ಅದು ವಿಕಲಚೇತನರು.
ಈ ಕಾರ್ಯಕ್ರಮದಲ್ಲಿ ಪಂಡಿತ್ ಪುಟ್ಟರಾಜ ಗವಾಯಿ ಅವರನ್ನು ನೆನೆಯಬೇಕು ಬಾಳಿಗೆ ಬೆಳಕು ಜೀವನದಲ್ಲಿ ಏನನ್ನಾದರೂ ಮಾಡಬಹುದು ಎಂಬುದಕ್ಕೆ ಆದರ್ಶಪ್ರಾಯ ಆದವರು.
ಮುಂದಿನ ದಿನದಲ್ಲಿ ವಿಕಲಚೇತನರಿಗೆ ಗೌರವಧನ 1400 ಇದ್ದುದನ್ನು 3000 ರ ಬರುವಂತೆ ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇನೆ. ನಿನ್ನ ಆಸೆಯಂತೆ ಒಂದೇ ಸಮಯದಲ್ಲಿ ವಿಶೇಷ ಅನುದಾನ ತಂದು 100 ವಿಕಲಚೇತನ ಗಾಡಿ ವಿತರಿಸಬೇಕು ಎಂಬ ಆಸೆ ಇದೆ ಎಂಬ ಮಾತು ಆಡಿದರು.

ಬಿಜೆಪಿ ಮುಖಂಡ ಭರತ್ ಬಸವರಾಜ ಬೊಮ್ಮಾಯಿ ಮಾತನಾಡಿ ವಿಕಲಚೇತನರ ಕಾರ್ಯಕ್ರಮ ಅದ್ಭುತವಾಗಿ ಹಮ್ಮಿಕೊಂಡಿದ್ದು ಎಲ್ಲರಿಗೆ ಧನ್ಯವಾದ ತಿಳಿಸುತ್ತಾ. ತಮಗೆಲ್ಲ ನೋಡಿದರೆ “ನನ್ನ ಪ್ರಕಾರ ದೇವರ ಮಕ್ಕಳು ನಾವು ಸಾಮಾನ್ಯ ಮನುಷ್ಯರು”.
” ತಾವು ಇದಕ್ಕೂ ಕಮ್ಮಿ ಇಲ್ಲ ತಮಗೆ ಯಶಸ್ಸು ಸಿಗುತ್ತದೆ” ಎಂಬ ಮಾತುಗಳನ್ನು ಹೇಳಿದರು. ನಂತರ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವಜಾರಣೆ ಮಾಡುವ ಮೂಲಕ ಚಾಲನೆ ನೀಡಿದರು.