ಧಾರವಾಡ : ಚಿತ್ರಕಲಾಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ದಿಂದ ಏರ್ಪಡಿಸುವ ಕಲಾ ಚಟುಚಟಿಕೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರಾಂತ ಯುವ ಹಾಗೂ ಹಿರಿಯ ಚಿತ್ರಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡುವ ಪ್ರಕ್ರಿಯೆ ಅಂಗವಾಗಿ ನಿನ್ನೆ (ನ.28) ಪ್ರಶಸ್ತಿ ಪುರಸ್ಕøತ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಏರ್ಪಡಿಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಬಿ.ಮಾರುತಿ ಅವರು ವಹಿಸಿ, ಮಾತನಾಡುತ್ತಾ, ಪ್ರಶಸ್ತಿ ಪುರಸ್ಕøತಕಲಾವಿದರು ಪ್ರತ್ಯಕ್ಷವಾಗಿ ಕಲಾಕೃತಿಗಳನ್ನು ರಚಿಸುವುದರಿಂದ ಚಿತ್ರಕಲೆಯನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಹಾಗೂ ಕಲಾಕೃತಿಗಳನ್ನು ಯಾವ ರೀತಿಯಾಗಿ ರಚಿಸಬಹುದೆಂಬ ತಿಳುವಳಿಕೆ ಮೂಡುತ್ತದೆ ಹಾಗೂ ಕಲಾವಿದರಲ್ಲಿ ಕಲಾಸಂವಹನ ಏರ್ಪಡುತ್ತದೆ ಎಂದರು.
ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ವೇದಿಕೆ ಕಲಾವಿದರ ಹಾಗೂ ಅತಿಥಿಗಳನ್ನು ಟ್ರಸ್ಟಿನ ಸದಸ್ಯ ಡಾ.ಬಸವರಾಜಕುರಿಯವರ ಪರಿಚಯಿಸಿದರು. ಟ್ರಸ್ಟಿನ ಸದಸ್ಯ ಹಾಗೂ ಹಿರಿಯಕಲಾವಿದ ಸುರೇಶ ಹಾಲಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ ವಿ.ಎಚ್. ಕುರಿಯವರ ಅವರು ನಿರೂಪಿಸಿದರು. ಟ್ರಸ್ಟಿನ ಹಿರಿಯ ಸದಸ್ಯ ಎಫ್.ವ್ಹಿ. ಚಿಕ್ಕಮಠ ಅವರು ವಂದಿಸಿದರು.
ಮಧ್ಯಾಹ್ನ ಪ್ರಶಸ್ತಿ ಪುರಸ್ಕøತರ ಸ್ಲೈಡ್ ಶೋ ಏರ್ಪಡಿಸಲಾಗಿತ್ತು. ಕಲಾವಿದರು ಮತ್ತು ಕಲಾ ವಿದ್ಯಾರ್ಥಿಗಳೊಂದಿಗೆ ಚಿತ್ರ ಕಲಾಕೃತಿಗಳ ಬಗ್ಗೆ ಸಂವಾದ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಲೋಹಿತ್ ನಾಯ್ಕರ, ಈಶ್ವರ ಜೋಶಿ, ಡಾ.ಆನಂದ ಪಾಟೀಲ, ಸಿ.ಯು ಬೆಳಕ್ಕಿ, ಡಾ.ಪಾರ್ವತಿ ಹಾಲಭಾವಿ ಹಾಗೂ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.