ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದು ಅತಿ‌ ಅವಶ್ಯಕ — ಪ್ರೊ. ಎ.ಎಮ್‌.ಖಾನ್

ಧಾರವಾಡ : ಸ್ಥಿರವಾದ ಅಭಿವೃದ್ಧಿಗೆ ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಅನೇಕ ಯೋಜನೆಗಳನ್ನು ಅಳವಡಿಸಿಕೊಳ್ಳುವರಿಂದ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದು ಅತಿ‌ ಅವಶ್ಯಕತೆ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಮ್‌.ಖಾನ್ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗವು ‘ಭುವನ ವಿಜಯ’, ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಪ್ರವಾಸೋದ್ಯಮ ಸೇರಿದಂತೆ ವೃತ್ತಿಪರ ಕೋರ್ಸುಗಳು ಆಯ್ಕೆ ಮಾಡಿಕೊಳ್ಳುವದು ಬಹಳ ಅಗತ್ಯವಿದೆ ಎಂದು ಭವಿಷ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಮಾಡಲು ಪ್ರಯತ್ನಿಸಲಾಗುವದು ಪ್ರವಾಸೋದ್ಯಮ ವಿದ್ಯಾರ್ಥಿಗಳು ವೃತ್ತಿಪರವಾಗಿ ಕೌಶಲಗಳನ್ನು ಅಳವಡಿಸಿಕೊಳ್ಳಿ ಎಂದ ಅವರು ಪ್ರವಾಸೋದ್ಯಮ ‌ಕ್ಷೇತ್ರವು ವಿಪುಲವಾದ ಅವಕಾಶಗಳೊಂದಿಗೆ ಹೆಚ್ಚು ವಿಕಸಿತಗೊಳ್ಳುತ್ತಿದೆ ಎಂದರು.

ಅಹಮದಾಬಾದಿನ ಕೇಂದ್ರೀಯ ಪರಿಸರ ಶಿಕ್ಷಣದ ನಿರ್ದೇಶಕರಾದ ಡಾ‌. ಶ್ರೀಜಿ ಕುರುಪ್ ಅವರು ‘ಸ್ಥಿರವಾದ ಪರಿವರ್ತನೆಗೆ ಪ್ರವಾಸೋದ್ಯಮ’, ಎಂಬ ವಿಷಯದ ಕುರಿತು ಮಾತನಾಡಿ ಸ್ಥಿರವಾದ ಅಭಿವೃದ್ಧಿ ಮೂಲಕ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು‌ ನೀಡಬೇಕಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಮುದ್ರ ತೀರ (ಬೀಚ್) ಗಳನ್ನಯ ಅಭಿವೃದ್ಧಿಪಡಿಸುವದು ಮತ್ತು ಸಮಾಜದ ಮತ್ತು ಪರಿಸರ ಶಿಕ್ಷಣವನ್ನು ನೀಡುವುದು ಸ್ಥಿರವಾದ ಬೆಳವಣಿಗೆಗೆ ಅಭಿವೃದ್ಧಿ ಶ್ರಮಿಸುವದಾಗಿದೆ ಎಂದರು. ಇಂದು ಪರಿಸರ ಪತ್ರಿಕೋದ್ಯಮದ ಮೂಲಕ ಪರಿಸರ ಮತ್ತು ದೇಶದಲ್ಲಿರುವ ಸಮುದ್ರ ತೀರಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ ಎಂದರು.

ಈ‌ ಸಂದರ್ಭದಲ್ಲಿ ಅಹಮದಾಬಾದಿನ ಕೇಂದ್ರ ಪರಿಸರ ಶಿಕ್ಷಣದ ಕೋಸ್ಟಲ್ ಮರೀನ್ ಬ್ಲೂ ಫ್ಲ್ಯಾಗ್ ಇಂಡಿಯಾ ಜೊತೆಗೆ ಕರ್ನಾಟಕ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಜೊತೆಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲಾಯಿತು. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ‌ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವರಾದ ಪ್ರೊ.ಎಸ್.ರಾಜಶೇಖರ, ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ಐ.ಸಿ.ಮುಳಗುಂದ , ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಜಗದೀಶ ಕಿವುಡನವರ, ಡಾ.ಎಸ್.ಎಮ್.ತುವಾರ, ಡಾ.ಜಾಕೀರ ಗುಳಗುಂಡಿ, ಡಾ.ಮುಕುಂದ ಲಮಾಣಿ, ಡಾ.ಸುಷ್ಮಾ ಮಳಗಿ, ಸೇರಿದಂತೆ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಜರಿದ್ದರು.