
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಮಾಧ್ಯಮ ಸಂಯೋಜಕರಾಗಿ ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಆಯ್ಕೆ.
ಕವಿ ಕುಮಾರವ್ಯಾಸನ ಜನ್ಮಸ್ಥಳವಾದ ಕೋಳಿವಾಡ ಗ್ರಾಮದ ಕೃಷಿ ಹಾಗೂ ಬಡಕುಟುಂಬದಲ್ಲಿ ಜನಿಸಿದ ರವಿಕುಮಾರ ಅವರು ಪತ್ರಿಕೋದ್ಯಮ ಪದವಿ ಪಡೆದು ಪತ್ರಕರ್ತರಾದರು. ವಿಜಯ ಸಂದೇಶ, ಕೆಂಪುಜಲ, ಅಮೋಘ ನ್ಯೂಜ್, ಉಷಾಕಿರಣ, ಇನ್ ನ್ಯೂಜ್, ಸೃಷ್ಠಿರಾಜ ಟೈಮ್ಸ್, ಹುಬ್ಬಳ್ಳಿ ಸಂಜೆ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಕಳೆದ 21 ವರುಷದಿಂದ ಪತ್ರಿಕಾ ರಂಗದಲ್ಲಿ ವಿಶಿಷ್ಟ ಸೇವೆ ಮಾಡುತ್ತಿದ್ದು ಇದೀಗ ಕನ್ನಡಮ್ಮ ದಿನ ಪತ್ರಿಕೆಯಲ್ಲಿ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೃದಯಿ ಹಾಗೂ ಸತ್ಯಶುದ್ದ ಕಾಯಕಯೋಗಿ ಆಗಿರುವ ಇವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ವಿಶೇಷ.
01 ಸಾವಿರ ಕ್ಕೂ ಅಧಿಕ ಸಮಾರಂಭದಲ್ಲಿ ನಿರೂಪಣೆ 3೦೦ ಕ್ಕೂ ಹೆಚ್ಚು ಸಮಾರಂಭದಲ್ಲಿ ಉಪನ್ಯಾಸ 250 ಕ್ಕೂ ಹೆಚ್ಚು ವಿಶೇಷ ಲೇಖನ ಬರೆದಿದ್ದಾರೆ.
ಶರಣ ಕಾಯಕ ರತ್ನ, ಸುವರ್ಣ ಪುರಸ್ಕಾರ, ಕನ್ನಡ ರತ್ನ, ಮೌಲ್ಯ ಪತ್ರಿಕೋದ್ಯಮ ರತ್ನ, ಬಸವ ರತ್ನ, ಸಮಾಜರತ್ನ ಶ್ರಮಜೀವಿ, ಹೆಮ್ಮೆಯ ಧಾರವಾಡಿಗ, ಬಸವಪ್ರೀಯ, ವಿಶ್ವೇಶ್ವರಯ್ಯ ಪ್ರಶಸ್ತಿ, ರೋಟರಿ ಎಕ್ಸಲೆನ್ಸ ಅವಾರ್ಡ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯೋತ್ಸವ ಧೀಮಂತ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡಿದ ಅತ್ಯುತ್ತಮ ಲೇಖನ ಪ್ರಶಸ್ತಿ, 2024 ನೇ ಸಾಲಿನಲ್ಲಿ ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಗೌರವ ಸನ್ಮಾನ ಸ್ವೀಕರಿಸಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ ಮತ್ತು ಸಮಸ್ತ ಪದಾಧಿಕಾರಿಗಳು ಇವರ ಸೇವೆಯನ್ನು ಪರಿಗಣಿಸಿ ಮಹಾಸಭಾದ ಸಮಸ್ತ ಕಾರ್ಯಗಳನ್ನು ಪ್ರಚಾರ ಮಾಡಲು ನೇಮಕ ಮಾಡಿದ್ದಾರೆ.