ಮಾನವ ಹಕ್ಕುಗಳು ಮತ್ತು ಕಾನೂನು ಮಾಹಿತಿ ವಿಚಾರ ಸಂಕೀರಣ.

ಧಾರವಾಡ : ಸಂಸ್ಕೃತಿ ಸೇವಾ ಸಂಸ್ಥೆ ಧಾರವಾಡ ಹಾಗೂ ಅಖಿಲ ಭಾರತ ಮಾನವ ಹಕ್ಕುಗಳ ಸಂಘ ದೆಹಲಿ, ಇವರುಗಳ ಸಹಯೋಗದೊಂದಿಗೆ ಮಾನವ ಹಕ್ಕುಗಳು ಮತ್ತು ಕಾನೂನು ಮಾಹಿತಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ನಿವೃತ್ತ ಎಸ್.ಪಿ. ಗುರು ಬಿ. ಮತ್ತೂರ ಇವರು ಬದಲಾವಣೆಗೆ ಎಲ್ಲರೂ ಕೈ ಜೋಡಿಸಬೇಕು ಹಾಗೂ ರಸ್ತೆಯ ಸಂಚಾರಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ಕೊಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸದಾನಂದ ಎಂ. ಪಾಟೀಲ ಇವರು ಭಾರತ ಮಾನವ ಹಕ್ಕುಗಳ ಸಂಸ್ಥೆಯ ಜನರಲ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸುತ್ತಿದ್ದು ಮಾನವ ಹಕ್ಕುಗಳ ಸಂಸ್ಥೆಯ ಕಾರ್ಯವೈಖರಿಯನ್ನು ತಿಳಿಸಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರೇಮಲ್ಲೂರು ಈಶ್ವರನ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್‌. ಆರ್. ತೋಡಕರ್ ಇವರು ಮಾತನಾಡಿ ಮೌಲ್ಯಗಳ ಕುಸಿತಕ್ಕೆ ಕಾರಣವನ್ನು ವಿವರಿಸಿ, ಸಧೃಡ ಸಮಾಜದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಯುವಕರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕೆಂದು ಕರೆಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ನಮ್ಮ ಸಂಸ್ಕೃತಿ ಸೇವಾ ಸಂಸ್ಥೆಯ ಅಧ್ಯಕ್ಷ ರವಿ ಸಂಗನಾಳ ಇವರು ವಹಿಸಿದ್ದರು, ಅತಿಥಿಗಳಾಗಿ ವಕೀಲರಾದ ಬಿ. ಬಿ. ರಾಯರೆಡ್ಡಿ, ಕೆ.ಎಸ್.ಹಿರೇಮಠ, ಶ್ರೀಮತಿ ಅರ್ಚನಾ ತಿವಾರಿ, ಮಧು ರಾಯರೆಡ್ಡಿ, ವಿಶ್ವನಾಥ ರಡ್ಡಿ ಹಾಗೂ ಗೋಪಾಲ ಬಿಳಗಿಕರ ಉಪಸ್ಥಿತರಿದ್ದರು.

ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆಯ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಶ್ರೀಮತಿ ವಿದ್ಯಾ ಕೋಟೂರ ನಡೆಸಿಕೊಟ್ಟರು ಕಾರ್ಯಕ್ರಮ ನಿರೂಪಣೆ ಮಹಾಂತೇಶ, ಹುಬ್ಬಳ್ಳಿ ಶ್ರೀಮತಿ ಪಲ್ಲವಿ ಪಾಟೀಲ ವಂದನಾರ್ಪಣೆ ಮಾಡಿದರು.