
ಅಂತರರಾಷ್ಟ್ರೀಯ ಎಶೀಯಾ ಶ್ರವಣದೂಷ ಚದುರಂಗ ಸ್ಪದೆ೯ಯಲ್ಲಿ ಎರಡು ಚಿನ್ನದ ಪದಕ ಗೆದ್ದ ಧಾರವಾಡದ ಅಂಬಿಕಾ ಮಸಗಿ
ಧಾರವಾಡ : ಉಜಕಿಸ್ಥಾನ ಟಾಸ್ಕಂಟನಲ್ಲಿ ನಡೆದ ಅಂತರರಾಷ್ಟ್ರೀಯ ಎಶಿಯಾ ಶ್ರವಣದೂಷ ಉಳ್ಳವರ ಚದುರಂಗ ಸ್ಪದೆ೯ಯಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಧಾರವಾಡದ ಅಂಬಿಕಾ ಮಸಗಿ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದು, ಇವಳು ಮೈಸೂರಿನ ಸುತ್ತೂರ ಮಠದಲ್ಲಿ ಡಿಪ್ಲೊಮಾ ಸಿ ಎಸ್ ಮುಗಿಸಿ ಹುಬ್ಬಳ್ಳಿಯ ಪ್ರತಿಷ್ಟಿತ ಜೈನ್ ಇಂಜನಿಯರಿಂಗ ಕಾಲೇಜಿನಲ್ಲಿ ಬಿ ಇ ಕಂಪ್ಯೂಟರ ಸೈನ್ಸ 2022 ಮುಗಿಸಿದ್ದಾಳೆ ಎಂದು ಮಂಜುನಾಥ ಮೂಹರೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಶಿಯಾ ಬಿಲ್ಝ ಡೆಫ್ ಚೆಸ್ ಟೀಮ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ,ಹಾಗೂ ಎಶೀಯಾ ರ್ಯಾಪಿಡ್ ಡೇಫ್ ಚೆಸ್ ಚಿನ್ನದ ಪದಕ ಪಡೆದಿದ್ದು ಇದಕ್ಕೆ ಮೈಸೂರಿನ ಅಜೀತ್ ಎಂ ಪಿ ಇವರು ಉಚಿತವಾಗಿ ಆನ್ ಲೈನ್ ಮಾಗ೯ದಶ೯ನ ಸ್ಮರಣೀಯ ಎಂದರು.
ಎ ಐ ಡಿ ಎಸ್ ಓ ,ಕೆ ಎಸ್ ಎಪ್ ಡಿ, ಹಾಗೂ ಸಾಯಿ ಇವರು ನನ್ನ ಅಂತರ ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯದಲ್ಲಿ ಭಾಗವಹಿಸಲು ಸಹಕರಿಸಿದ್ದಕ್ಕೆ ನಮ್ಮ ಮಸಗಿ ಕುಟುಂಬ ಚಿರರುಣಿ ಆಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ನಾಗಪ್ಪ ಮಸಗಿ,ನಿಖಿಲ ಹಡಗಲಿ ಇದ್ದರು.