ದಸರಾದಂತೆ ವಿಜಯಶಾಲಿಗಳಾಗುತ್ತೇವೆ : ಡಾಕ್ಟರ್ ಶರಣಪ್ಪ ಕೊಟಗಿ

ಧಾರವಾಡ : ಪುರಾಣ, ಇತಿಹಾಸ ಸಾಕ್ಷಿಯಾಗಿದೆ. ಹಿಂಸವಾದಿಗಳು, ಜಾತಿವಾದಿಗಳು, ಕೋಮುವಾದಿಗಳು ತಾತ್ಕಾಲಿಕ ಜಯಶಾಲಿಗಳಾಗಿದ್ದಾರೆ. ತಾತ್ಕಾಲಿಕ ಸುಖ ಸಂತೋಷ ಅನುಭವಿಸುತ್ತಾರೆ.

ಕಾಂಗ್ರೆಸ್ ಸದಾ ಅಹಿಂಸಾ ವಾದಿಗಳು, ಜಾತ್ಯತೀತ ವಾದಿಗಳು. ಮಹಾ ಮಾನವತಾವಾದಿಗಳಾದ ಬುದ್ಧ ಬಸವ ಅಂಬೇಡ್ಕರ್ ತತ್ವಗಳ ಮೇಲೆ ಜೀವನ ಹಾಗೂ ರಾಜ್ಯಭಾರ ಮತ್ತು ರಾಜಕೀಯ ಮಾಡುವ ಪಕ್ಷವಾಗಿದೆ ಎಂದು ಶ್ರೀ ಶರಣಬಸವೇಶ್ವರ ಎಜುಕೇಶನ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ನ ಅಧ್ಯಕ್ಷರು ಸಮಾಜವಾದಿಗಳು ಶಿಕ್ಷಣ ಪ್ರೇಮಿಗಳು ಆಗಿರುವ ಡಾಕ್ಟರ್ ಶರಣಪ್ಪ ಕೋಟಗಿ ಹೇಳಿದರು.

ನಗರದ ತತ್ತೂರಿನ ಶ್ರೀ ತಳದ ಕರಿಯಮ್ಮ ದೇವಿ ಉದ್ಭವ ಮೂರ್ತಿ ಟ್ರಸ್ಟ್ ಕಮಿಟಿ ವತಿಯಿಂದ ದಸರಾ ಜಂಬು ಸವಾರಿ ಮೆರವಣಿಗೆಯಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಡಾಕ್ಟರ್ ಶರಣಪ್ಪ ಕೊಟಗಿ ಮಾತನಾಡಿದರು.

ದಸರಾ ಹಬ್ಬವನ್ನು ಕೆಟ್ಟದರ ಮೇಲೆ ಒಳ್ಳೆಯದ ವಿಜಯ ಎಂದು ಆಚರಿಸಲಾಗುತ್ತದೆ. ಈ ಹಬ್ಬವು ದೇಶದಾದ್ಯಂತ ಉತ್ಸಾಹ ಮತ್ತು ಸಮರ್ಪಣೆಯಿಂದ ಆಚರಿಸಲ್ಪಡುತ್ತದೆ, ಕೆಲವಡೆ ಜನರು ವಿಜಯದಶಮಿ ಎಂದು ಕರೆಯುತ್ತಾರೆ. ಇದು ದೇವತೆಗಳನ್ನು ಒಳಗೊಂಡಿರುವ ಮೆರವಣಿಗೆಗಳು ಮತ್ತು ಉತ್ಸವಗಳೊಂದಿಗೆ ವಿಜಯೋತ್ಸವದ ಸಂದೇಶವನ್ನು ನೀಡುತ್ತದೆ ಎಂದರು.

ದಸರಾ ಹಬ್ಬವು ಕೆಟ್ಟ ಶಕ್ತಿಯ ಮೇಲೆ ಒಳ್ಳೆಯ ಶಕ್ತಿಯ ವಿಜಯ, ಸತ್ಯದ ಮೇಲೆ ಸುಳ್ಳಿನ ವಿಜಯ, ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸೂಚಿಸುತ್ತದೆ. ಎಲ್ಲರೂ ಈ ಹಬ್ಬವನ್ನು ದೇಶದಾದ್ಯಂತ ಏಕರೀತಿಯ ಭಾವನೆಯಿಂದ ಆಚರಿಸುತ್ತಾರೆ.

ಕುಲು ದಸರಾ ಹಬ್ಬ ಹಿಮಾಚಲ ಪ್ರದೇಶದ ಕುಲು ಕಣಿವೆಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿ ರಾಜ್ಯದ ವಿಧವಿಧದ ದೇವತೆಗಳು ತೇರುಗಳಲ್ಲಿ ಮೆರವಣಿಗೆಯಲ್ಲಿ ಬರುತ್ತವೆ.
ದೇವತೆಗಳನ್ನು ತೇರುಗಳಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡುವುದು ಕುಲು ದಸರಾದ ವಿಶಿಷ್ಟ ಲಕ್ಷಣವಾಗಿದೆ ಎಂದು ಡಾಕ್ಟರ್ ಶರಣಪ್ಪ ಕೊಟಗಿ ತಿಳಿಸಿದರು.

ಧಾರವಾಡ ಸತ್ತೂರಿನಲ್ಲಿ ಅದ್ದೂರಿ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಆನೆಯ ಪ್ರತಿಕೃತಿ ನಿರ್ಮಿಸಿ ಅಂಬಾರಿ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಅಂಬಾರಿ ಮೆರವಣಿಗೆಯು ಸತ್ತೂರಿನ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ನೋಡುಗರ ಕಣ್ಮನ ಸೆಳೆಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮನಸೂರಿನ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಶ್ರೀ ಶಿವಪುತ್ರ ಸ್ವಾಮೀಜಿ, ನಾಗರಾಜ ಗೌರಿ, ವೆಂಕನಗೌಡ ಪಾಟೀಲ, ಬಸವರಾಜ ಕೊಕಾಟಿ, ದೀಪಕ ಚಿಂಚೋರೆ, ಫಕೀರಗೌಡ ಪಾಟೀಲ, ಗುರುಪ್ರಸಾದ, ಶಿವಾನಂದ ಹೇರಕಲ್, ‘ಮಹಾಂತೇಶ ಇಚ್ಚಂಗಿಮಠ, ಸೋಮನಗೌಡ ಪಾಟೀಲ, ರವೀಂದ್ರ ಪಾಸಲೆ, ಮಹಾಂತೇಶ ಕಿತ್ತೂರ ಸೇರಿದಂತೆ ಇತರೆ ಗಣ್ಯರು ಹಾಜರಿದ್ದರು.