4 ರಂದು “ನಮ್ಮ ನಗರ ಸುಂದರ ನಗರ ” ನಗರ ಸ್ವಚ್ಛತೆಯಲ್ಲಿ ನಮ್ಮ ಪಾತ್ರದ ಕುರಿತು ಮಹಿಳೆಯರಿಗೆ ಗುಂಪು ಚರ್ಚಾ ಸ್ಪರ್ಧೆ 

ಧಾರವಾಡ 03 : ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿಯಿಂದ 15 ನೇ ಗಾಂಧೀಜಿ ಜಯಂತಿ ಪ್ರಯುಕ್ತ ಮಹಿಳೆರಿಗಾಗಿ ಸ್ವಚ್ಛತೆಯ ಅರಿವು ಮೂಡಿಸಲು “ನಮ್ಮ ನಗರ ಸುಂದರ ನಗರ ” ಗುಂಪು ಚರ್ಚಾ ಸ್ಪರ್ಧೆಯನ್ನು ಅಕ್ಟೂಬರ. ದಿ 04 ರಂದು ಮದ್ಯಾಹ್ನ ಸಮಯ 2-30 ಗಂಟೆಗೆ  ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.ಈಗಾಗಲೇ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳಾ ಗುಂಪುಗಳು ಹೆಸರು ನೋಂದಾಯಿಸಿದ್ದಾರೆ ಎಂದು ಪರಿಸರ ಸಮಿತಿಯ ಅಧ್ಯಕ್ಷೆ  ಜಯಶ್ರೀ ಗೌಳಿಯವರು ತಿಳಿಸಿದರು.

ಅಂದು ಸಾಯಂಕಾಲ 5 :30 ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ವಿ ಬಿ ನಿಟಾಲಿ(ನಿವೃತ್ತ ಅರೋಗ್ಯ ಅಧಿಕಾರಿಗಳು ಹುಬ್ಬಳ್ಳಿ) ಆಗಮಿಸುವರು. ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ  ಸರೋಜಾ ಪೂಜಾ‌ (ಪರಿಸರ ಅಭಿಯಂತರರು, ಹೆಚ್ ಡಿ ಎಂ ಸಿ ಧಾರವಾಡ), ಸತೀಶ್ ತುರುಮರಿ (ಕೋಶಧ್ಯಕ್ಷರು, ಕರ್ನಾಟಕ ವಿದ್ಯಾವರ್ಧಕ ಸಂಘ), ರವಿ ಕುಲಕರ್ಣಿ , ನವೀನ ಪ್ಯಾಟಿಮನಿ (ಟ್ಯಾಕ್ಸಿಡರ್ಮಿಸ್ಟ್.ವಸ್ತು ಸಂಗ್ರ ಹಾಲಯ, ಮೈಸೂರು) ಇವರು ಭಾಗವಹಿಸಲಿದ್ದಾರೆ. ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಾರ್ಡ್ ನಂಬರ್ 1ರ ಪಾಲಿಕೆ ಸದಸ್ಯರಾದ ಅನಿತಾ ಚಳಗೇರಿಯವರು ವಹಿಸಲಿದ್ದಾರೆ.

ಪತ್ರಿಕಾಗೂಷ್ಟಿಯಲ್ಲಿ ಹೇಮಾವತಿ ಪಾಟೀಲ, ಜಯಶ್ರೀ ಕರಗುದರಿ ಇದ್ದರು.