
ಕೃಷಿ ಹವಾಮಾನ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ “ಮಳೆ ದಿನ” ಮಾನದಂಡಗಳನ್ನು ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಮರು ವ್ಯಾಖ್ಯಾನಿಸಬೇಕು ಎಂದು ಡಾ.ಹೊಸಮತ್ ವಾರ್ಷಿಕ ತಾಂತ್ರಿಕ ಸಭೆಯಲ್ಲಿ ಹೇಳುತ್ತಾರೆ.
ಧಾರವಾಡ ಕೃಷಿ ಮಹಾವಿದ್ಯಾಲಯದ ಕೃಷಿ ಹವಾಮಾನ ವಿಭಾಗ, ಬುಧುವಾರ ವಾರ್ಷಿಕ ತಾಂತ್ರಿಕ ಸಭೆಯನ್ನು ಆಯೋಜಿಸಿ ಕೃಷಿಯಲ್ಲಿನ ಪ್ರಮುಖ ಹವಾಮಾನ ಮತ್ತು ಹವಾಮಾನ ಸಂಬAಧಿತ ಸವಾಲುಗಳತ್ತಾ ಗಮನ ಸೆಳೆಯಿತು.
ಈ ಕಾರ್ಯಕ್ರಮದಲ್ಲಿ ಧಾರವಾಡದ ಯುಎಎಸ್‌ನ ಪ್ರಖ್ಯಾತ ವಿಜ್ಞಾನಿಗಳು, ಹವಾಮಾನಶಾಸ್ತ್ರಜ್ಞರು ಮತ್ತು ತಾಂತ್ರಿಕ ಅಧಿಕಾರಿಗಳು ಭಾಗವಹಿಸಿದ್ದರು.
ವಿಜಯಪುರದ ಪಾರದೇಶಿಕ ಕೃಷಿ ಸಂಶೋಧನ ಕೇಂದ್ರ (RARS)ದ ಸಹ ಸಂಶೊಧನಾ ನಿರ್ದೇಶಕ (ADR) ಡಾ. ಎಸ್.ಬಿ. ಜಗ್ಗಿನವರ್ ಅವರು ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ತಮ್ಮ ಮುಖ್ಯ ಭಾಷಣದಲ್ಲಿ, ಕೃಷಿಯಲ್ಲಿ ಹವಾಮಾನ ಮುನ್ಸೂಚನೆ ನಿರ್ಣಾಯಕ ಪಾತ್ರವನ್ನು ಅವರು ಒತ್ತಿ ಹೇಳಿದರು.
ಸಮಯೋಜಿತ ಮತ್ತು ನಿಖರವಾದ ಹವಾಮಾನ ಮಾಹಿತಿಯು ರೈತರಿಗೆ ಕೃಷಿ ಚಟುವಟಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗಿರುತ್ತದೆ ಎಂಬುವುದನ್ನು ಎತ್ತಿ ತೋರಿಸಿದರು. ಮುನ್ಸೂಚನೆಗಳ ನಿಖರತೆಯನ್ನು ಸುಧಾರಿಸುವ ಅಗತ್ಯವನ್ನು ಅವರು ಹೇಳಿದರು. ವಿಶೇಷವಾಗಿ ಕೀಟ ಮತ್ತು ರೋಗ ಹರಡುವಿಕೆಯ ಮಾಹಿತಿ ಓದುವುದು.
ಸಭೆಯ ಅಧ್ಯಕ್ಷತೆಯನ್ನು ಡಾ.ಜೆ.ಎ.ಹೊಸಮತ್ ಕೃಷಿಯ ಸಂದರ್ಭದಲ್ಲಿ “ಮಳೆಯ ದಿನ” ಎಂದರೇನು ಎಂಬುವುದರ ಮರು ವ್ಯಾಖ್ಯಾನಕ್ಕೆ ಕರೆ ನೀಡಿದರು.”ಪ್ರಸ್ತುತ್,ಭಾರತ ಹವಾಮಾನ ಇಲಾಖೆಯು ಮಳೆಯ ದಿನವನ್ನು ಕನಿಷ್ಠ ೨.೫ ಮಿಮೀ ಮಳೆಯಾಗುವ ದಿನ ಎಂದು ವ್ಯಾಖ್ಯಾನಿಸುತ್ತದೆ. ಹೆಚ್ಚುತ್ತಿರುವ ತಾಪಮಾನ ಮತ್ತು ಹೆಚ್ಚು ಆವಿಯಾಗುವಿಕೆಯಿಂದಾಗಿ ಈ ಪ್ರಮಾಣವು ಇನ್ನೂ ಮುಂದೆ ಕೃಷಿಗೆ ಅರ್ಥಪೂರ್ಣವಾಗಿಲ್ಲ ” ಎಂದು ಅವರು ಹೇಳಿದರು.
ಮಿತಿಯನ್ನು ೫ ಮಿಮೀಗೆ ಹೆಚ್ಚಿಸುವ ತಾಪಮಾನವನ್ನು ಮಂಡಿಸಿದರು. ಅಂತಹ ಮಳೆಯು ಮಾತ್ರ ಮಣ್ಣಿನ ತೇವಾಂಶ ಮತ್ತು ಬೆಳೆ ಬೆಳೆವಣಿಗೆ ಮೇಲೆ ಗಮನಾರ್ಹ ಉಪಯುಕ್ತ ಪರಿಣಾಮ ಬೀರುತ್ತದೆ ಎಂದರು.
ಎನ್ ಕೆಎಎಫ್ ಸಿ ಧಾರವಾಡದ ಉಸ್ತುವಾರಿ ಅಧಿಕಾರಿ ಡಾ. ರಾಜು ರೋಖಡೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾಗಿರುವ RADAR ದ ಮಹತ್ವವನ್ನು ವಿವರಿಸಿದರು. ಜಿಕೆಎಂಎಸ್ ಧಾರವಾಡದ ಹವಾಮಾನ ವೀಕ್ಷಕ ಹನುಮಂತ್ ಎಚ್ ಸಿ ವಿದ್ಯಾರ್ಥಿಗಳು ಇದ್ದರು.
ಈ ಸಂದರ್ಭದಲ್ಲಿ ಎ ಐ ಸಿ ಆರ್ ಪಿ ಮುಖ್ಯಸ್ಥ ಡಾ. ಗುರು ಯಡಹಳ್ಳಿ, ಹವಾಮಾನ ಶಾಸ್ತ್ರಜ್ಞ ಸಹಾಯಕ ಪ್ರಾಧ್ಯಾಪಕ ಡಾ. ಸುಮೇಶ್ ಕೆ.ಜಿ, ಗ್ರಾಮೀಣ ಕೃಷಿ ಮೌಸಮ್ ಸೇವಾ ಘಟಕಗಳ ತಾಂತ್ರಿಕ ಅಧಿಕಾರಿಗಳಾದ ಸಂಜೀವ್ ಯಡಹಳ್ಳಿ, ಸಿಬಿ ಕಬಡಗಿ, ಲಾವಣ್ಯ ಪಿ, ಇನ್ನಿತರರು ಉಪಸ್ಥಿತರಿದ್ದರು.