
ಧಾರವಾಡ:– ಮರಾಠ ವಿದ್ಯಾ ಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2024 25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಕುಮಾರಿ ರಾಣಿ ಬಿ ಸೋನಪ್ಪನವರ್ 524 ಅಂಕಗಳು ಪ್ರಥಮ ಸ್ಥಾನ ಕುಮಾರ್ ಕಿಶನ್.ಬಿ.ಕೆ 483 ಅಂಕಗಳು ದ್ವಿತೀಯ ಸ್ಥಾನ ಕುಮಾರ ವಿನಯ ಎನ್ ಸತ್ತುರ್ 468 ಅಂಕಗಳು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕುಮಾರ ಪ್ರವೀಣ ಬಿ ಮರೆದ 546 ಪ್ರಥಮ ಸ್ಥಾನ ಕುಮಾರಿ ದೀಪಾ ಜೆ ತುಕ್ಕಾಯಿ 545 ದ್ವಿತೀಯ ಸ್ಥಾನ ಕುಮಾರಿ ಸೌಂದರ್ಯ ಎಂ ಕದಂ 536 ತೃತೀಯ ಸ್ಥಾನ ಪಡೆದು ಕಾಲೇಜಿಗೆ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಸಂಸ್ಥೆಯ ಅಧ್ಯಕ್ಷರಾದ ಎಂ.ಎನ್ . ಮೋರೆ ಉಪಾಧ್ಯಕ್ಷರಾದ ಎಲ್ಲಪ್ಪ ಚೌಹಾಣ ಕಾರ್ಯಾಧ್ಯಕ್ಷರಾದ ಸುಭಾಷ ಶಿಂದೆ ಗೌರವ ಕಾರ್ಯದರ್ಶಿಗಳಾದ ರಾಜು ಬಿರಜೇನವರ ಸಹ ಕಾರ್ಯದರ್ಶಿಗಳಾದ ಮಲ್ಲೇಶಪ್ಪ ಶಿಂದೆ ನಿರ್ದೇಶಕರಾದ ಈಶ್ವರ ಪಾಟೀಲ, ಶಿವಾಜಿ ಸೂರ್ಯವಂಶಿ, ಸುಭಾಷ ಪವಾರ, ದತ್ತಾತ್ರೇಯ ಮೋಟೆ, ಅನಿಲಕುಮಾರ ಬೊಸ್ಲೆ , ಮಹೇಶ್ ಶಿಂದೆ, ಪುರುಷೋತ್ತಮ ಜಾಧವ, ರಾಜು ಕಾಳೆ, ಸುನಿಲ ಮೊರೆ, ಪ್ರಸಾದ ಹಂಗಳಕಿ ಕಾಲೇಜಿನ ಪ್ರಾಚಾರ್ಯರ ಶ್ರೀಮತಿ ಶೈಲಶ್ರೀ ಎಂ ಸಂಕೋಜಿ ಹಾಗೂ ಸಿಬ್ಬಂದಿ ವರ್ಗದವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ