ಧಾರವಾಡ : ಡಿ. 6 ರಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ. ಭಾರತದಲ್ಲಿ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ಆಚರಿಸುತ್ತಾರೆ. ಕರ್ನಾಟಕ ಭೀಮಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಭೋಜರಾಜ ಡಿ ಮಾದರ ಅವರು ಧಾರವಾಡದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ. ಮುಂಭೈ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತ ಕಂಡ ಮಹಾನ್ ವ್ಯಕ್ತಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕೂಡ ಒಬ್ಬರು. ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಭಾರತ ದೇಶಕ್ಕೆ ಇವರು ನೀಡಿರುವ ಕೊಡುಗೆಗಳು ಅಪಾರ. ಅವರ ಜೀವನ ಹಾಗೂ ಪರಂಪರೆ ಸರ್ವರಿಗೂ ಆದರ್ಶಪ್ರಿಯವಾದದ್ದು. ಡಾ. ಭೀಮಾರಾವ್ ರಾಮ್‌ಜಿ ಅಂಬೇಡ್ಕರ್ ಅವರು ಸಮಾಜ ಸುಧಾರಕರೂ ಆಗಿದ್ದರು. ದಲಿತ ಬೌದ್ಧ ಚಳುವಳಿಯನ್ನು ಮುನ್ನಡೆಸುವ ಮೂಲಕ ಪ್ರೇರಣೆಯಾದವರು. ಡಿಸೆಂಬರ್ 6 ಇವರ ಪುಣ್ಯತಿಥಿ. ಈ ದಿನವನ್ನು ಮಹಾಪರಿನಿರ್ವಾಣ ದಿನ ಎಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಭಾರತದಲ್ಲಿ ಅಸ್ಪೃಶ್ಯತೆಯ ನಿರ್ಮೂಲನೆಗೆ ಅವರ ನಿಲುವು ಮತ್ತು ಕೊಡುಗೆಗಳ ಕಾರಣ, ಅವರನ್ನು ಬೌದ್ಧ ಗುರು ಎಂದು ಪರಿಗಣಿಸಲಾಗಿದೆ. ಇವರ ಸಮಾಧಿ ಇರುವ ಸ್ಥಳವನ್ನು ಪವಿತ್ರ ಭೂಮಿ ಎಂದು ಗುರುತಿಸಲಾಗಿದೆ ಮತ್ತು ಇದನ್ನು ಚೈತ್ಯ ಭೂಮಿ ಎಂದು ಕೂಡ ಕರೆಯಲಾಗುತ್ತದೆ ಎಂದರು.
ಹಿರಿಯ ಪತ್ರಕರ್ತರಾದ ಬಸವರಾಜ ಆನೆಗುಂದಿ ಮಾತನಾಡಿ ಸಂವಿಧಾನ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು ಜಗತ್ತು ಅವರನ್ನ ಗೌರವಿಸಿ ಪ್ರೀತಿಸುತ್ತಿರುವಾಗ ಕರ್ನಾಟಕ ಭೀಮಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಭೋಜರಾಜ ಡಿ ಮಾದರ ನೇತೃತ್ವದಲ್ಲಿ ಚೈತ್ಯ ಭೂಮಿ ತೆರಳುತ್ತಿರುವ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಸರ್ಜಾಪುರ್, ಕಲ್ಲಪ್ಪ ಭೋವಿ, ಮಂಜುನಾಥ್ ವರೂರ್, ಸಮರ್ಥ್ ಸರ್ಜಾಪುರ್ ಚಂದ್ರಶೇಖರ್ ಹಿರೇಮಠ, ಮಾದೇವ ಹುಬ್ಬಳ್ಳಿ ಪ್ರಕಾಶ್ ಸೇರಿದಂತೆ ಮೊದಲಾದವರು ಇದ್ದರು.