ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಮೀಸಲಿರುವ ಶಾಸನಬದ್ಧ ಅನುದಾನವನ್ನು ದುರುಪಯೋಗ ಮಾಡಿರುವ ಹಾರೋಬೆಳವಡಿ ಗ್ರಾಮ ಪಂಚಾಯತ ಆಡಳಿತದ ವಿರುದ್ಧ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ್ ಯುವಕ ಮಂಡಳದಿಂದ ಗ್ರಾಮ ಪಂಚಾಯತ ಬಾಗಿಲು ಬಂದ್ ಮಾಡಿ ಪ್ರತಿಭಟನೆ ಮಾಡಿದರು.
15 ನೇ ಹಣಕಾಸು ಯೋಜನೆಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ಉಲ್ಲಾಸ ದೊಡ್ಡಮನಿ ಖಂಡಿಸಿದರು. ಜಿಲ್ಲಾ ಸಮಿತಿಯ ನಾಗರಾಜ ಕಾಳೆ ಮಾತನಾಡಿ ಅಮೃತ ದೇಸಾಯಿ ಶಾಸಕರಿದ್ದಾಗ ಎಸ್ ಸಿ ಅನುದಾನದ 40 ಲಕ್ಷ ರೂಪಾಯಿಗಳನ್ನು ಯಾವುದೇ ಕಾಮಗಾರಿಗಳನ್ನು ಮಾಡದೇ ಗುಳುಂ ಮಾಡಿರುವ ಹಾಗೂ ಇತರೆ ಇಲಾಖೆಗಳಲ್ಲಿ ಆಗಿರುವ ಭ್ರಷ್ಟಾಚಾರವನ್ನು ಖಂಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
10 ವರ್ಷದಿಂದ ಇದುವರೆಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ನಮ್ಮ ಸಮುದಾಯಕ್ಕೆ ಯಾವುದೇ ಅನುದಾನ ನೀಡಿಲ್ಲಾ ಸಮಸ್ಯೆ ಕುರಿತು ಆಲಿಸಿರುವದಿಲ್ಲಾ ಎಂದು ಎಲ್ಲ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಈರಪ್ಪ ಕೋಲಕಾರ, ಗಂಗಪ್ಪ ದೊಡ್ಡಮನಿ, ವಿಜಯಲಕ್ಷೀ ದೊಡ್ಡಮನಿ, ಮುತ್ತು ಗುಬ್ಬಿ, ರತ್ನಾ ಮೆಳೆಪ್ಪನವರ, ಗಿರಿಜವ್ವ ದೊಡಮನಿ, ಶಿವರುದ್ರ ಮೆಳೆಪ್ಪನವರ, ಸಮುದಾಯದ ಮುಖಂಡರು, ಮಹಿಳೆಯರು, ಯುವಕರು ಜೈ ಭೀಮ್ ಘೋಷಣೆಯೊಂದಿಗೆ ಪ್ರತಿಭಟನೆ ಮಾಡಿದರು.