ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ, ಕೆ ಜಿ ದೇವರಮನಿ


ಧಾರವಾಡ  : ಭಾರತ ಜ್ಞಾನ ವಿಜ್ಞಾನ ಸಮಿತಿ ಇದೊಂದು ವೈಜ್ಞಾನಿಕ ಮನೋಭಾವ ಮೂಡಿಸುವ ಜನರಲ್ಲಿ ವಿಜ್ಞಾನದ ಅರಿವು ಮೂಡಿಸುವುದರ ಜೊತೆಗೆ ಪ್ರಾಥಮಿಕ ಶಿಕ್ಷಣದ ಚಿಣ್ಣರ ಮೇಳ, ನಲಿಕಲಿ, ವಠಾರ ಶಾಲೆ, ವಿಜ್ಞಾನ ಹಬ್ಬ ಮಕ್ಕಳ ಸಾಹಿತ್ಯ ಹಬ್ಬ ಮುಂತಾದ ಪ್ರಮುಖ ಕಾರ್ಯಕ್ರಮಗಳನ್ನು ಸಾಕಷ್ಟು ಕೆಲಸಗಳನ್ನು ಮಾಡಿದ ಸಂಸ್ಥೆ ಈದಾಗಿದೆ ಎಂದು ಗಣಿತ ತಜ್ಞ ಕೆ ಜಿ ದೇವರಮನಿ ತಿಳಿಸಿದರು.

ಅವರು ಹುಬ್ಬಳ್ಳಿಯ ಬೆಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಹುಬ್ಬಳ್ಳಿಯ ಬಿಜಿವಿಎಸ್ ಕೇಶವಪುರ ಘಟಕ ಆಯೋಜಿಸಿದ್ದ, ಮಕ್ಕಳ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ, ಕೇಶವಪುರ ಘಟಕವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಡಿಸೆಂಬರ್ 22 ಗಣಿತ ತಜ್ಞ ರಾಮಾನುಜನ್ ಜನ್ಮ ದಿನದ ಅಂಗವಾಗಿ ಜಿಲ್ಲೆಯಲ್ಲಿ ಗಣಿತ ಓಲಂಪಿಯಾಡ ಕಾರ್ಯಕ್ರಮ ರೂಪಿಸೋಣ ಎಂದರು.

ಮುಖ್ಯ ಅತಿಥಿಯಾಗಿದ್ದ ಸರ್ವಧರ್ಮ ಸಮಾಜದ ಅಧ್ಯಕ್ಷರಾದ ರಮೇಶ ಮಹಾದೇವಪ್ಪನವರ ಮಾತನಾಡಿ, ಮಕ್ಕಳಿಗೆ ಇಂದು ಓದುವ ಬರೆಯುವ ಹವ್ಯಾಸವನ್ನು ರೂಪಿಸುವುದು ಅತಿ ಅವಶ್ಯಕವಾಗಿದೆ, ಮೊಬೈಲ್ ನಿಂದ ಮಕ್ಕಳನ್ನು ದೂರವಿರಿಸುವಲ್ಲಿ ಪಾಲಕರ ಪಾತ್ರ ಮುಖ್ಯವಾಗಿದೆ ಎಂದರು. ಹುಬ್ಬಳ್ಳಿಯ ಪ್ರತಿಷ್ಠಿತ
ಈಶ್ವರಿ ಫೌಂಡೇಷನ್ ಅಧ್ಯಕ್ಷ ಸಂತೋಷ ವರ್ಣೇಕರ ಮಾತನಾಡಿ ಭಾರತದ ಭವಿಷ್ಯ ಇರುವುದು, ಮುದ್ದು ಮಕ್ಕಳ ಕಣ್ಣುಗಳಲ್ಲಿ ಇದೆ, ನಕ್ಷತ್ರ ಗ್ರಹಗಳಲ್ಲಿ ಇಲ್ಲ, ಮುದ್ದು ಮಕ್ಕಳ ಕಣ್ಣುಗಳಲ್ಲಿ ನಗು,ಉಲ್ಲಾಸ, ಸಂತಸ ಆನಂದ ತುಂಬಿದ್ದರೆ ಈ ದೇಶಕ್ಕೆ ಭವಿಷ್ಯವಿದೆ, ಆ ಮಕ್ಕಳ ಕಣ್ಣುಗಳಲ್ಲಿ ಕಣ್ಣೀರು, ನಿರಾಶೆ ನಿರುತ್ಸಾಹವಿದ್ದರೆ ಖಂಡಿತವಾಗಿಯೂ ಈ ದೇಶಕ್ಕೆ ಭವಿಷ್ಯವಿಲ್ಲ ಆದ್ದರಿಂದ ಮಕ್ಕಳ ಏಳಿಗೆಗಾಗಿ ನಾವೆಲ್ಲರೂ ಸೇವೆ ಮಾಡೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಮಿತಿಯ ಸದಸ್ಯ ಎಲ್ ಐ ಲಕ್ಕಮ್ಮನವರ
ಭಾರತ ಜ್ಞಾನ ವಿಜ್ಞಾನ ಸಮಿತಿಯು ವಿಜ್ಞಾನವನ್ನು ಜನಪ್ರಿಯಗೊಳಿಸಲು ಕೆಲಸ ಮಾಡುತ್ತಿರುವ ರಾಷ್ಟ್ರಮಟ್ಟದ ಜನವಿಜ್ಞಾನ ಸಂಘಟನೆಯಾಗಿದೆ. ಇದರ ಹುಟ್ಟಿಗೆ ಕಾರಣ ಹೇಳಬೇಕೆಂದರೆ ೧೯೮೪ ರ ಡಿಸೆಂಬರ್ ನಲ್ಲಿ ೨೦೦,೨೫೬ ಜನರನ್ನು ಬಲಿ ಪಡೆದ ಭೋಪಾಲ್ ಅನಿಲ್ ದುರಂತ. ವಿಜ್ಞಾನದ ಅರಿವು ಜನಸಾಮಾನ್ಯರಿಗೂ ದಕ್ಕಬೇಕು. ವಿಜ್ಞಾನ ಅರಿವಿನಿಂದ ಅಷ್ಟೇ ಸಮಾಜದಲ್ಲಿನ ಸಮಸ್ಯೆಗಳನ್ನು ನಿವಾರಿಸಬಹುದು ಎಂಬ ನಿಟ್ಟಿನಲ್ಲಿ ಹಲವು ವಿಜ್ಞಾನಿಗಳು ಚಿಂತಕರು ಶಿಕ್ಷಕರು ಶಿಕ್ಷಣ ತಜ್ಞರು ಸಾಹಿತಿ ಕಲಾವಿದರು ದೇಶ ವ್ಯಾಪಿ ಜನ ಜಾಗೃತಿ ಜಾತಾಗಳು ಹಾಗೂ ಆಂದೋಲನಗಳನ್ನು ಸಂಘಟಿಸಿದರು ಅದರ ಪರಿಣಾಮವಾಗಿ ೧೯೮೭  ರಲ್ಲಿ ರಾಷ್ಟ್ರಮಟ್ಟದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ರಚನೆ ಆಯಿತು.
ರೈತ ಕಾರ್ಮಿಕ ನೌಕರ ವಿದ್ಯಾರ್ಥಿ ಅಧಿಕಾರಿ ವಿಜ್ಞಾನಿ ಮುಂತಾದ ಜನ ವರ್ಗಗಳ ಸದಸ್ಯರನ್ನು ಲಿಂಗ ಬೇಧವಿಲ್ಲದಂತಹ ಸಂಯೋಜನೆಯನ್ನು ಹೊಂದಿರುವ ಜನವಿಜ್ಞಾನ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಇದಾಗಿದೆ.
ರಾಷ್ಟ್ರೀಯ ಸಾಕ್ಷರತಾ ಆಂದೋಲನದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ಸ್ವಯಂಸೇವಕರು ತೊಡಗಿಕೊಂಡು ಆಂದೋಲನವನ್ನು ಮುನ್ನಡೆಸುವಲ್ಲಿ ಬಿಜಿವಿಎಸ್ ಗಳನ್ನಿಯ ಪಾತ್ರ ವಹಿಸಿದೆ.
ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕಾಗಿ ಹಮಾರಾಧೀಶ್ ನಲ್ಲಿ ಕಲಿ ಹಾಗೂ ಸಂತಸ ಕಲಿಕೆಯ ಚಿನ್ನರ ಮೇಳ ಪರಿಸರ ಪಯಣ ಹಾಗೂ ಖಗೋಳ ಯಾನದಂತಹ ಸರಳ ಸುಂದರ ಹಾಗೂ ಸಮಾಧಾನಾತ್ಮಕ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ. ಎಂದರು
ಮಹಿಳಾ ಸಬಲೀಕರಣ ಸಾಕ್ಷರತೆ ಪ್ರಾಥಮಿಕ ಶಿಕ್ಷಣ ವಿಜ್ಞಾನ ಶಿಕ್ಷಣ ಪ್ರಾಥಮಿಕ ಆರೋಗ್ಯ ಪಾಲನೆ ವೈಜ್ಞಾನಿಕ ಚಿಂತನೆ ವೈಜ್ಞಾನಿಕ ಮನೋವೃತ್ತಿ ಪ್ರೇರೇಪಣೆ ಮತ್ತು ಪರಿಸರ ಜಾಗೃತಿ ಮತ್ತು ಸಂರಕ್ಷಣೆ ವಿಜ್ಞಾನ ಸಾಹಿತ್ಯದ ಬಲವರ್ಧನೆಯಾಗಿದೆ.
ಇಂತಹ ರಾಷ್ಟ್ರ ಮಟ್ಟದ ಅನೇಕ ಚಟುವಟಿಕೆ ಹಾಗೂ ಧ್ಯೇಯಗಳನ್ನು ಒಳಗೊಂಡಂತಹ ಬಿಜಿವಿಯ ಸಂಸ್ಥೆ ಈ ನಮ್ಮ ಬಿಜಿವಿಎಸ್ ಆಗಿದೆ ಎಂದು ಹುಬ್ಬಳ್ಳಿಯ ಕೇಶ್ವಾಪೂರ ಘಟಕದ ಅಧ್ಯಕ್ಷರಾದ ಸ್ನೇಹ ಜಾಧವ ಅಧ್ಯಕ್ಷಿಯ ಮಾತುಗಳನ್ನಾಡಿದರು,ಸದಾಶಿವ ಚೌಶೆಟ್ಟಿ ಗೌರವಾಧ್ಯಕ್ಷರಾದ ನಾಗರಾಜ ಪೂಜಾರ ಜಿಲ್ಲಾ ಸಮಿತಿಯ ಸದಸ್ಯ ಮಲ್ಲಪ್ಪ ಹೊಸಕೇರಿ.ಮುಖ್ಯ ಶಿಕ್ಷಕಿ ಕಲ್ಯಾಣಿ ಪಿಳ್ಳೆ ಸಮಾಜಸೇವಕ ಸುನಿಲ್ ಎಸ್ ಮೊಸಳೆ ಪವರ್ ಆಫ್ ಯುಥ್ಸ ಫೌಂಡೇಶನ್ ಅಧ್ಯಕ್ಷರಾದ ರವಿಚಂದ್ರ ಅನುಪಮಾ ಹಂಸಬಾವಿ ಪ್ರೇಮಾ ಪೂಜಾರ ಸ್ವಾಗತಿಸಿದರು. ವೆಂಕಟೇಶ್ ಭಂಡಾರಿ ನಿರೂಪಿಸಿ ವಂದಿಸಿದರು.

  • Independent Sangram News

    Related Posts

    ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮ

    ಧಾರವಾಡ  : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಮತ್ತು ಕೆ.ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಧಾರವಾಡ ಕೆ.ಪಿ.ಇ.ಎಸ್ ಪದವಿ…

    ವಕೀಲರ ರಕ್ಷಣೆ – ಭದ್ರತೆಗಾಗಿ ತುರತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ

    ಧಾರವಾಡ : ಹೊಸೊರ ವಕೀಲರ ಸಂಘದ ವೃತ್ತಿ ನಿರತ ವಕೀಲರ ಮಾರಣಾಂತಿಕ ಹತ್ಯೆಯನ್ನು ಧಾರವಾಡ ವಕೀಲರ ಸಂಘ ತೀರ್ವವಾಗಿ ಖಂಡಿಸುತ್ತದೆ ವಕೀಲರ ರಕ್ಷಣೆ ಮತ್ತು ಭದ್ರತೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಆಗ್ರಹಿಸಿ ನಗರದಲ್ಲಿ ಜಿಲ್ಲಾ ವಕೀಲರ…

    RSS
    Follow by Email
    Telegram
    WhatsApp
    URL has been copied successfully!