
13 ಕ್ಕೆ ಕೀರ್ತಿ ನೆನಪು ಕಾಯ೯ಕ್ರಮ.
ಧಾರವಾಡ : ಕನ್ನಡದ ಕೀರ್ತಿ ಕೀರ್ತಿನಾಥ ಕುರ್ತಕೋಟಿ ಅವರ 97ನೆ ಜನ್ಮದಿನವನ್ನು ಮನೋಹರ ಗ್ರಂಥಮಾಲೆ ಹಾಗೂ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಸಂಯುಕ್ತವಾಗಿ ‘ಕೀರ್ತಿ ನೆನಪು’ಎಂದು ದಿ 13 ಅಕ್ಟೋಬರ್ ಸೋಮವಾರದಂದು ರಂಗಾಯಣ ಸಮುಚ್ಚಯದಲ್ಲಿ ಬೆಳಗ್ಗೆ 11-00 ಕ್ಕೆ ಹಮ್ಮಿಕೊಂಡಿವೆ.
ಅಂದು ಇತ್ತೀಚೆಗೆ ಬಿಡುಗಡೆ ಆದ ಅವರ ‘ವಾಗರ್ಥ’ ಕೃತಿ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಸುಮಾರು ಐದು ದಶಕಗಳ ಕಾಲ ಕುರ್ತಕೋಟಿ ಅವರು ಬೇಂದ್ರೆ ಸಾಹಿತ್ಯ ಕುರಿತು ಪ್ರಕಟಿಸಿದ ಕೃತಿಗಳು ಹಾಗೂ ಲೇಖನಗಳ ಸಂಗ್ರಹ ಅದಾಗಿದೆ.
ಅವರ ವಿಮರ್ಶಾ ಲೇಖನಗಳು ಸಂಸ್ಕೃತ, ಕನ್ನಡ, ಇಂಗ್ಲಿಷ್ ಈ ಭಾಷೆಯ ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಕೂಡಿರುತ್ತವೆ. ಕನ್ನಡ ವಿಮರ್ಶಾ ಪ್ರಕಾರಕ್ಕೆ ಅಸ್ತಿಭಾರ ಹಾಕಿದವರು ಕುರ್ತಕೋಟಿ ಅವರು ಇಂದು ನಾಡಿನಲ್ಲಿ ಕುರ್ತಕೋಟಿ ವಿಮರ್ಶಾ ಪರಂಪರೆಯೆ ಇದೆ. ಅದನ್ನು ಕುರ್ತಕೋಟಿ ಕ್ರಿಟಿಸಿಜಮ್ ಸ್ಕೂಲ್ ಎಂದೆ ವಿಮರ್ಶಕರು ಉಲ್ಲೇಖಿಸುತ್ತಾರೆ. ಬೇಂದ್ರೆಯವರ ಕಾವ್ಯ ಅರ್ಥವಾಗ ಬೇಕಾದರೆ ಕೀರ್ತಿ ಅವರ ವಿಮರ್ಶಾ ಬರಹಗಳನ್ನು ಓದಲೇಬೇಕು.
ಬೇಂದ್ರೆ ಕಾವ್ಯ ಜಗತ್ತು ಕಂಡ ಶ್ರೇಷ್ಠ ಕವಿ. ಈ ಶ್ರೇಷ್ಠ ಕವಿಯ ಕಾವ್ಯದ ಶ್ರೇಷ್ಠ ವಿಮರ್ಶಾ ಕೃತಿ ‘ವಾಗರ್ಥ’. ಈ ಕೃತಿಯ ಕುರಿತು ಸಂವಾದ ಕೀರ್ತಿ ನೆನಪಿನಂದು. ಸಂವಾದದಲ್ಲಿ ಡಾ. ಶ್ರೀರಾಮ್ ಭಟ್, ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ವಿನಾಯಕ ನಾಯಕ ಹಾಗೂ ಡಾ. ಕೃಷ್ಣ ಕಟ್ಟಿ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಎರಡೂ ಸಂಸ್ಥೆಗಳು ಆಸಕ್ತರನ್ನೂ ಗೌರವ ಪೂರ್ವಕವಾಗಿ ಸ್ವಾಗತಿಸುತ್ತವೆ. ಸಮೀರ ಜೋಷಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.