ಧಾರವಾಡ : ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ ಇದು ಅತ್ಯಂತ ಸಂತೋಷದ ವಿಷಯ ಎಂದು, ಮೇಯರ್ ಜೋತ್ಯಿ ಪಾಟೀಲ ತಿಳಿಸಿದರು.

Swami Vivekananda introduced India's spiritual power to the world - Iresha Anchatageri
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ
ಪೂಜ್ಯ ಮಹಾಪೌ ಜ್ಯೋತಿ ಪಾಟೀಲ, ಮಾಜಿಮಹಾಪೌರರು ಸಭಾನಾಯಕರು ಈರೇಶ ಅಂಚಟಗೇರಿ ಗಣ್ಯಮಾನ್ಯರು ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆಗೈದು ಪುಷ್ಪನಮನಗಳನ್ನ ಸಲ್ಲಿಸಿ ಮಾತನಾಡಿದ ಅಂಚಟಗೇರಿ ಅವರು, ಶಿಸ್ತಿಗೆ ಮತ್ತೊಂದು ಹೆಸರು ಸ್ವಾಮಿ ವಿವೇಕಾನಂದರು. ಅವರ ಆದರ್ಶಗಳನ್ನು ಮಾವು ರೂಢಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಪ್ರಖರ ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲಸಂತ ಸ್ವಾಮಿ ವಿವೇಕಾನಂದರ ಜನ್ಮದಿನದ ಶುಭಾಷಯಗಳನ್ನು ತಿಳಿಸಿದರು.

Swami Vivekananda introduced India's spiritual power to the world - Iresha Anchatageri

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶಂಬು ಸಾಲಿಮನಿ, ರವಿ ಯಲಿಗಾರ, ಉದಯ ಯಂಡಿಗಿರಿ, ಪಾಲಿಕೆ ಅಧಿಕಾರಿಗಳು,
ಉಮೇಶ ಸವಣೂರ
ಪರಿಷತ್ ಕಾರ್ಯದರ್ಶಿ ,ವಲಯ ಅಧಿಕಾರಿಗಳಾದ ಅರವಿಂದ ಜಮಖಂಡಿ, ಶಂಕರಗೌಡ ಪಾಟೀಲ, ಗಂಗಾಧರ, ನವಿನ ಹಿರೇಮಠ, ಹಾಗೂ ಗಣ್ಯಮಾನ್ಯರು ಉಪಸ್ಥಿತರಿದ್ದರು