ಧಾರವಾಡ :ವಿಕಲಚೇತನರಿಗೆ ಅವರದೇ ಹಕ್ಕು ಮತ್ತು ಕರ್ತವ್ಯಗಳಿವೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಎಪಿಡಿ ಸಂಸ್ಥೆ ಸಹ ನಿರ್ದೇಶಕರಾದ ಶ್ರೀ ರಮೇಶ ಗೋಂಗಡಿ ಇವರು ತಿಳಿಸಿದರು.
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ವಿಶೇಷಚೇತನರಿಗೆ ಆಯೋಜಿಸಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ಫಲಾನುಭವಿಗೆ ಎಪಿಡಿ ಸಂಸ್ಥೆ ಹಾಗೂ ಆರೂಡ ಸಂಸ್ಥೆವತಿಯಿಂದ ಒದಗಿಸಿದ ವಿಲಚೇರ್ ಅನ್ನು ಶ್ರೀ ರಮೇಶ ಗೊಂಗಡಿ ಸರ್ ಇವರು ಪಲಾನುಭವಿಗೆ ವಿತರಿಸಿದರು.
ರಾಜ್ಯಸಲ್ಲಿ ಸುಮಾರು ಆರು ಲಕ್ಷ ವಿಷೇಶ ಚೇತನರಿಗೆ ನಮ್ಮ ಸಂಸ್ಥೆ ನೆರವಾಗಿದೆ ಇನ್ನು ಹಲವಾರು ವಿಷೇಶ ಚೇತನರನ್ನು ಗುರುತಿಸಿ ಅವರ ಕಷ್ಟಕ್ಕೆ ಸ್ಪಂದನೆ ನೀಡುವ ಉದ್ದೇಶ ಇದೆ ಎಂದು ತಿಳಿಸಿದರು.
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಆರೂಡ ಸಂಸ್ಥೆ ವಿಶೇಷ ಮಕ್ಕಳು ಮತ್ತು ವಿಕಲಚೇತನರು ಕೇಕ್ ಕತ್ತರಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಎಪಿಡಿ ಸಂಸ್ಥೆ ಅರ್ಚನಾ, ಸೌಮ್ಯ, ವನ್ನೂರುಸ್ವಾಮಿ, ಆರೂಡ ಸಂಸ್ಥೆ ಮುಖ್ಯಸ್ಥರಾದ ನಾಗರಾಜ, ಶ್ರೀಮತಿ ಗೀತಾ ಸೇರಿದಂತೆ ಬೆನ್ನುಹರಿ ಅಪಘಾತಕ್ಕೆ ಒಳಗಾದ ಫಲಾನುಭವಿಗಳು, ವಿಶೇಷಮಕ್ಕಳು ಮತ್ತು ಪಾಲಕರು, ಮಾಧ್ಯಮ ಮಿತ್ರರು, ಇತರರು ಉಪಸ್ಥಿತರಿದ್ದರು