ಧಾರವಾಡ 28 : ಯೋಧರ ಪತ್ನಿಯರ ಕಲ್ಯಾಣಕ್ಕಾಗಿ ನಿರ್ಮಾಣವಾದ ವೀರ ನಾರಿ ರತ್ನಾ ಫೌಂಡೇಶನ್ ಪದಾಧಿಕಾರಿಗಳು ಭಗವಂತ ಕೊಟ್ಟ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಸಮಸ್ಯೆಗಳು ಇರುತ್ತವೆ ಅವುಗಳನ್ನು ಬಗ್ಗಿಹರಿಸಿಕೊಳ್ಳಲು ಇಂತಹ ಸಂಸ್ಥೆಗಳ ಅವಶ್ಯಕತೆ ಇದೆ ಎಂದು ಶ್ರೀ ವೆಂಕಟೇಶ್ವರ ಕೊ ಆಪರೇಟಿವ್ & ಆಗ್ರೋ ಪ್ರೊಸೆಸಿಂಗ್ ಲಿಮಿಟೆಡ್ ನ ನಿರ್ದೇಶಕರಾ್ ನಾಯಬ್ ಸುಬೇದಾರ ಯಲ್ಲಪ್ಪ ಪುಟ್ಟಪ್ಪ ಜಗ್ರುಂಜಿ ಹೇಳಿದರು.
ಧಾರವಾಡದ ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸಭಾಭವನದಲ್ಲಿ “ವೀರ ನಾರಿ ರತ್ನ ಫೌಂಡೇಶನ್“ ಹೊಸ ಸಂಸ್ಥೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಈ ಸಂಸ್ಥೆ ರಾಜ್ಯಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿ, ಇದರ ಸರ್ವತೋಮುಖ ಅಭಿವೃದ್ಧಿಗೆ ತಾವು ಕೈಜೋಡಿಸುವುದಾಗಿ ಹೇಳಿದರು. ಈ ವೇಳೆ ಸಂಸ್ಥೆಯ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ವೀರ ನಾರಿ ರತ್ನ ಫೌಂಡೇಶನ್ ಸಂಸ್ಥೆಯ ಗೌರವ ಅಧ್ಯಕ್ಷರು ಹಾಗೂ ಹೊಂಬೆಳಕು ಫೌಂಡೇಶನ್ ಹಾಗೂ ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಮಾತನಾಡಿ,
ಈ ಹೊಸ ಸಂಸ್ಥೆಯ ಸೈನಿಕರ ಪತ್ನಿಯರ ಕಲ್ಯಾಣ ಸಂಗವು ಸೈನಿಕರ ಕುಟುಂಬಗಳ ಶ್ರೇಯೋಭಿವೃದ್ಧಿ ಮಹಿಳಾ ಶಕ್ತಿ ಕಿರಣ ಸಮಾಜಮುಖಿ ಸೇವೆ ಮತ್ತು ಆರ್ಥಿಕ ಪ್ರಗತಿಗೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಯೋಧರ ಪತ್ನಿಯರನ್ನು ಸಮರ್ಥ ನಾಗರಿಕರಾಗಿ ರೂಪಿಸುವುದರ ಜೊತೆಗೆ ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವಲ್ಲಿ ಸಹಾಯ ಮಾಡುತ್ತದೆ ಎಂದರು.
ಆರ್ಥಿಕ ಸಾವಲಂಬನೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳು, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿ, ಪ್ಲಾಂಟೇಶನ್ ಮತ್ತು ಹಸಿರು ಉದ್ಯಮ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆ, ಕೌಟುಂಬಿಕ ಆರೋಗ್ಯ, ಇನ್ನು ಹಲವಾರು ಗುರಿಗಳನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಯೋಧರ ರಾಜ್ಯಾಧ್ಯಕ್ಷ ಪಾಟೀಲ್ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಅನ್ನಪೂರ್ಣ ಎಸ್. ಜಿ. ಅಧ್ಯಕ್ಷರು, ರೇಣುಕಾ ಎಂ.ಬಿ. ಉಪಾಧ್ಯಕ್ಷರು, ಉಮಾ ಎಸ್.ಕೆ. ಕಾರ್ಯದರ್ಶಿಗಳು, ಪುಷ್ಪ ಎಸ್ ಹೆಚ್ ಸಹ ಕಾರ್ಯದರ್ಶಿಗಳು, ಮಂಜುಳಾ ಕಟ್ಟಿಮನಿ ಖಜಾಂಚಿಗಳು ಸೇರಿದಂತೆ ಇನ್ನಿತರರು ಇದ್ದರು.