ಆರೋಗ್ಯದ ಗುಟ್ಟು ಪರಿಪೂರ್ಣವಾದ ಪೋಷಕಾಂಶ ಹೊಂದಿದ ಆಹಾರ ಸೇವಿಸಿ – ಡಾ‌.ಯಶೋಧಾ ಹೊಂಬಲ್

ಧಾರವಾಡ ೧೪ : ಉತ್ತಮ ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕಾಂಶ ಯುಕ್ತ ಆಹಾರವನ್ನು ಸೇವಿಸಬೇಕು ಎಂದು ಧಾರವಾಡದ ಗುತ್ತಲ್ ಆಯುರ್ವೇದ ಕಾಲೇಜಿನ ವೈದ್ಯೆ ಡಾ‌.ಯಶೋಧಾ ಹೊಂಬಲ್ ಹೇಳಿದರು.

ಅವರು ಕರ್ನಾಟಕ ಕಾಲೇಜಿನ ಕಾವೇರಿ ವಿದ್ಯಾರ್ಥಿ ವಸತಿ ನಿಲಯ ಮತ್ತು ಕಾಲೇಜಿನ ಲೇಡೀಸ್ ಅಸೋಸಿಯೇಷನ್ ಸಹಯೋಗದಲ್ಲಿ ಕಾವೇರಿ ವಿದ್ಯಾರ್ಥಿನಿಯರ ವಸತಿ ನಿಲಯದ ಸಭಾಂಗಣದಲ್ಲಿ ‘ ವಿದ್ಯಾರ್ಥಿನಿಯರಲ್ಲಿ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಸಂವಾದ ಕಾರ್ಯಕ್ರಮ ಮತ್ತು ಉಚಿತ ಸ್ಯಾನೇಟರಿ ಪ್ಯಾಡಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಿ ಮಾತನಾಡಿದರು.

ಪ್ರಸ್ತುತ ಹದಿಹರೆಯದ ಯುವತಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಕಾಣುತ್ತಿದ್ದೇವೆ ಈ ನಿಟ್ಟಿನಲ್ಲಿ ಆಹಾರದಲ್ಲಿ ಸಮತೋಲನವಾದ ಆಹಾರವನ್ನು ಸೇವಿಸಬೇಕು, ಹಸಿರು ತರಕಾರಿ, ಹಣ್ಣುಗಳನ್ನು, ಕಾಳುಗಳನ್ನು, ಹಾಲಿನ ಉತ್ಪನ್ನಗಳನ್ನು ನಮ್ಮ ಊಟದ ತಟೆಯಲ್ಲಿ ಇರಬೇಕು ಎಂದ ಅವರು ವ್ಯಯಕ್ತಿಕ ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು. ಇಂದು ಸಾಮಾನ್ಯವಾಗಿ ಹೆಚ್ಚಾಗಿ ಯುವತಿಯರಲ್ಲಿ ರಕ್ತಹೀನತೆಯ ಸಮಸ್ಯೆ ಒಳಗಾಗುತ್ತಿದ್ದಾರೆ ಆದ್ದರಿಂದ ಆರೋಗ್ಯದ ಗುಟ್ಟು ಪರಿಪರ‍್ಣವಾದ ಪೋಷಕಾಂಶ ಹೊಂದಿದ ಆಹಾರವನ್ನು ತೆಗೆದುಕೊಳ್ಳುಬೇಕು ಎಂದರು.

ಮರ‍್ಷಿ ಟ್ರಸ್ಟ್ ನ ಯೋಗ ಮತ್ತು ನೈಸರ್ಗಿಕ ಆಸ್ಪತ್ರೆಯ ವೈದ್ಯೆ ಸೌಮ್ಯ ಕುಕನೂರ ಮಾತನಾಡಿ ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಯೋಗ, ಧ್ಯಾನ ದಂತಹ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು, ನಿಸರ್ಗಕ್ಕೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಅವರು ಹಾಗಾಗಿ ವಿದ್ಯಾರ್ಥಿಗಳು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದ ಅವರು ಉತ್ಸಾಹಭರಿತ ಜೀವನ ಕ್ರಮಕ್ಕೆ ಯೋಗ ಮತ್ತು ನಿಸರ್ಗದಲ್ಲಿ ಪರಿಹಾರವಿದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನೇಟರಿ ಪ್ಯಾಡ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾ ಕಾಲೇಜಿನ ಲೇಡೀಸ್ ಅಸೋಸಿಯೇಷನ್ ಅಧ್ಯಕ್ಷೆ ವಿಭಾವರಿ ಕುಲಕರ್ಣಿ, ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ.ಸ್ಟೆಲ್ಲಾ ಸ್ಟಿವನ್, ಕಾವೇರಿ ವಸತಿ ನಿಲಯದ ಕ್ಷೇಮಪಾಲಕರಾದ ಡಾ.ಅನ್ನಪೂರ್ಣ. ಎಸ್, ವಿದ್ಯಾರ್ಥಿ ಕಾರ್ಯದರ್ಶಿ ನೇತ್ರಾ, ಸಂಗೀತಾ ಮತ್ತು ವೀಣಾ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿನಿಯರು ಹಾಜರಿದ್ದರು.

  • Related Posts

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    ವಿ.ಪ ಸದಸ್ಯ ಎಸ್.ವ್ಹಿ.ಸಂಕನೂರರ ಆದರ್ಶ ವ್ಯಕ್ತಿತ್ವ ಎಲ್ಲರಿಗೂ ಮಾದರಿ – ತಿಗಡಿ

    ಧಾರವಾಡ ೦೫ : ವಿಧಾನ ಪರಿಷತ್‌ನ ಸದಸ್ಯರಾದ ಪ್ರೋ ಎಸ್ ವ್ಹಿ ಸಂಕನೂರ ಅವರು ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯಾಗಿದ್ದು ಅವರದು ಆದರ್ಶದ ವ್ಯಕ್ತಿತ್ವ ಎಂದು ಸಂಘಟಕರು ಹಾಗೂ ನಿವೃತ್ತ ಶಿಕ್ಷಕರಾದ ಗುರು ತಿಗಡಿ ಹೇಳಿದರು. ಅವರು ಸಾಂಸ್ಕೃತಿಕ ಲೋಕ ಆರ್ಟ್ಸ…

    RSS
    Follow by Email
    Telegram
    WhatsApp
    URL has been copied successfully!