ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಬದಲಾವಣೆ ತರುವಲ್ಲಿ ಯಶಸ್ವಿ : DC

ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಗಳಲ್ಲಿ ರ್ಯಾಂಕ್ಗಳ
ಬ್ಯಾಂಕ ಆಗಿದ್ದ ಧಾರವಾಡ ಜಿಲ್ಲೆ, ಕಳೆದ ಕೆಲವು ವರ್ಷಗಳಿಂದ ಪರೀಕ್ಷಾ ಫಲಿತಾಂಶದಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಕಾಣುತ್ತಿದೆ. ಆದರೆ ಕಳೆದ ಜುಲೈದಿಂದ ನಿರಂತರವಾಗಿ 10 ತಿಂಗಳಿಂದ ಮಿಷನ್ ವಿದ್ಯಾಕಾಶಿ ಮೂಲಕ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ವಿಶೇಷ ತರಗತಿ, ಸಂಜೆ ಪಾಠ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೊಬ್ಬ ಜಾಣನ ಜೋಡು, ಯುನಿಟ್ ಟೆಸ್ಟ್, ಅಭ್ಯಾಸ ಹಾಳೆ, ರೂಢಿ ಪರೀಕ್ಷೆ, ಪಾಸಿಂಗ್ ಪ್ಯಾಕೇಜ್ ಮುಂತಾದ ವಿನೂತನ ಪ್ರಯೋಗ ಮತ್ತು ವಿಶೇಷ ಪ್ರಯತ್ನಗಳ ಮೂಲಕ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಬದಲಾವಣೆ ತರುವಲ್ಲಿ ಯಶಸ್ವಿ ಆಗಿದ್ದೇವೆ.

ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಿದ್ದು, ಖಂಡಿತವಾಗಿ ಅದರ ಸಮೀಪಕ್ಕಾದರೂ ಬರುತ್ತೇವೆ. ಕಳೆದ ಸಲ 23 ನೇ ರ್ಯಾಂಕ್ ನಲ್ಲಿ ಇದ್ದ ನಮ್ಮ ಜಿಲ್ಲೆ ಈ ಸಲ ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ಪಡೆಯುತ್ತದೆ. ನನಗೆ ಬಲವಾದ ನಂಬಿಕೆ ಇದೆ.

ಶ್ರೀಮತಿ ದಿವ್ಯ ಪ್ರಭು
ಜಿಲ್ಲಾಧಿಕಾರಿಗಳು ಹಾಗೂ
ಅಧ್ಯಕ್ಷರು, ಮಿಷನ್ ವಿದ್ಯಾಕಾಶಿ ಯೋಜನೆ

  • Related Posts

    13 ಕ್ಕೆ ಜಗನ್ಮಾತಾ ಅಕ್ಕಮಹಾದೇವಿ ಮಠದ 57 ನೆಯ ವಾರ್ಷಿಕೋತ್ಸವ ಹಾಗೂ 16 ನೇ ಶರಣೋತ್ಸವ ಕಾರ್ಯಕ್ರಮ.

    ಧಾರವಾಡ : ಜಗನ್ಮಾತಾ ಅಕ್ಕಮಹಾದೇವಿ ಮಠದ 57ನೆಯ ವಾರ್ಷಿಕೋತ್ಸವ ಹಾಗೂ 16ನೇ ಶರಣೋತ್ಸವ ಏಪ್ರಿಲ್  13 ಮತ್ತು 14. 2025 ರಂದು ಮುಂಜಾನೆ 10.30 ಗಂಟೆಗೆ ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ ಉಳವಿ ರಸ್ತೆ, ಧಾರವಾಡ ನಡೆಯಲಿದೆ ಎಂದು  ಪೂಜ್ಯಶ್ರೀ ಜಗದ್ಗುರು ಮಾತೆ…

    ಕಾಂಗ್ರೆಸ್ಸಿನವರು ಹಿಂದೂ, ದಲಿತ ವಿರೋಧಿಗಳು- ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ

    ಬೆಂಗಳೂರು: ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ; ದಲಿತ ವಿರೋಧಿ ಕೂಡ ಎಂದು ಜನರಿಗೆ ಭೀಮ ಹೆಜ್ಜೆ ಕಾರ್ಯಕ್ರಮದ ವೇಳೆ ತಿಳಿಸುತ್ತೇವೆ ಎಂಬುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ. ಭೀಮ ಹೆಜ್ಜೆ 100ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯು ಸಂದರ್ಭದಲ್ಲಿ ಅವರು…

    RSS
    Follow by Email
    Telegram
    WhatsApp
    URL has been copied successfully!