ಹುಬ್ಬಳ್ಳಿ 26 : ದಾವಣಗೆರೆ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಸುಮಾರು 6 ಲಕ್ಷಕ್ಕೂ ಜನರು ಫೋಟೋಗ್ರಫಿ, ವೀಡಿಯೋಗ್ರಫಿ ವೃತ್ತಿಗೆ ಅವಲಂಬಿತರಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ನಮ್ಮ ವೃತ್ತಿ ಬಾಂಧವರಿಗೆ ನಮ್ಮದೇ ಆದ ಒಂದು ಅಕಾಡೆಮಿಯನ್ನು ಮಾಡುವಂತೆ ಈ ಹಿಂದೆ ಬಂದತಹ ಸಂಬಧಿಸಿದ ಎಲ್ಲಾ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಇದುವರೆಗೂ ಈ ಕಾರ್ಯ ನಮ್ಮ ರಾಜ್ಯ ಸರ್ಕಾರದಿಂದ ಆಗಿರುವುದಿಲ್ಲ. ಈ ಅಕಾಡೆಮಿ ಮಾಡುವುದರಿಂದ ನಮ್ಮ ಫೋಟೋ, ವಿಡಿಯೋ ಗ್ರಾಫರ್ ಗಳಿಗೆ ಬಹಳ ಅನುಕೂಲವಾಗಲಿದೆ. ದಯವಿಟ್ಟು ನಮ್ಮ ಮನವಿಗೆ ಸ್ಪಂಧಿಸಿ ತಾವು ಫೋಟೋಗ್ರಾಫರ್ ಗಳಿಗೆ ಸಂಬಧಿಸಿದ ಅವರ ವೃತ್ತಿ ಬಾಂಧವರಿಗೆ ಅನುಕೂಲವಾಗುವಂತೆ ಅಕಾಡೆಮಿ ನಿರ್ಮಿಸುವಂತೆ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.
ತಾಂತ್ರಿಕತೆ ಬದಲಾದಂತೆ ಕ್ಯಾಮರಾ, ಲೆನ್ಸ್ಗಳು, ಬ್ಯಾಟರಿ ಸೇರಿದಂತೆ ವೃತ್ತಿಗೆ ಸಂಬಧಿಸಿದ ಎಲ್ಲಾ ವಸ್ತುಗಳೂ ಕೂಡಾ ಬದಲಾಗುತ್ತಿವೆ. ಅವುಗಳಿಗೆ ಅಷ್ಟು ಬಂಡವಾಳ ಹಾಕಿ ಕ್ಯಾಮರಾ ಪರಿಕರಗಳನ್ನು ಖರೀದಿಸಲು ಬಹಳ ತೊಂದರೆಯಾಗುತ್ತಿದೆ. ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳಿದ ನಮ್ಮ ವೃತ್ತಿ ಬಾಂಧವರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಕ್ಯಾಮರಾ ಖರೀದಿಸಲು ಅನುಕೂಲ ಮಾಡಿಕೊಡಬೇಕು. ನಮಗೆ ಯಾವುದೇ ರೀತಿಯ ಸಹಕಾರ ಇರುವುದಿಲ್ಲ. ನಮ್ಮ ಕ್ಯಾಮರಾಗಳಿಗೆ ಯಾವುದೇ ವಿಮೆ ಇರುವುದಿಲ್ಲ. ದಯವಿಟ್ಟು ನಮ್ಮ ಮನವಿಯನ್ನು ತಾವು ಗಮನ ಹರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.
ನಮ್ಮ ವೃತ್ತಿ ಬಾಂಧವರಿಗೆ ವರ್ಷದಲ್ಲಿ ಕೇವಲ 6-8 ತಿಂಗಳು ಮಾತ್ರ ಕೆಲಸಗಳು ಇರುತ್ತವೆ. ಇನ್ನುಳಿದ ದಿನಗಳಲ್ಲಿ ಕೆಲಸಗಳು ಇರುವುದಿಲ್ಲ. ಮಾಡಿದ ವೃತ್ತಿಗೆ ತಕ್ಕ ಪ್ರತಿಫಲ ಸಿಗುವುದು ಬಹಳ ಕಷ್ಟವಾಗಿದೆ. ನಮ್ಮ ವೃತ್ತಿ ಬಾಂಧವರಿಗೆ ತಮ್ಮ ಮಕ್ಕಳು, ಕುಟುಂಬ, ಜೀವನ ನಡೆಸುವುದು ಬಹಳ ಕಷ್ಟಕರವಾಗಿದೆ. ಮಕ್ಕಳ ಓದಿಗೆ ಫೀಜು ಕಟ್ಟಲು ಸಹಾ ಕಷ್ಟವಾಗಿದೆ. ಅಂತಹದರಲ್ಲಿಯೇ ಪ್ರತಿ ವರ್ಷ ಹಿರಿಯ ಛಾಯಾಗ್ರಾಹಕರಿಗೆ, ವೃತ್ತಿ ಬಾಂಧವರ ಸೇವೆ ಗುರುತಿಸಿ ಸನ್ಮಾನಿಸಿ ಗೌರವಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ.
ಯಾವುದೇ ಸರ್ಕಾರಿ, ಖಾಸಗಿ, ರಾಜಕೀಯ, ಶುಭ ಕಾರ್ಯಗಳು ಯಾವುದೇ ಇರಲಿ ಅಲ್ಲಿ ಫೋಟೋಗ್ರಾಫರ್ ಗಳ ಅವಶ್ಯಕತೆ ಇದ್ದೇ ಇರುತ್ತದೆ. ಅವರು ಇರದಿದ್ದರೆ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳು ಬಂದಾಗಿನಿದ ಫೋಟೋಗ್ರಾಫರ್ ಗಳಿಗೆ ಕೆಲಸಗಳು ಇಲ್ಲದಂತಾಗಿದೆ. ಆದರೆ ಅವರಿಗೆ ತಕ್ಕಂತೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳನ್ನು ನಮ್ಮ ಫೋಟೋಗ್ರಾಫರ್ ಗಳಿಗೆ ವೃತ್ತಿ ಬಾಂಧವರಿಗೆ ನೀಡಬೇಕು. ಪ್ರತಿ ವರ್ಷ ನಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಸಂಬಧಿಸಿದ ಪುಸ್ತಕಗಳು, ಯೂನಿಫಾರಂ, ಪಠ್ಯಪರಿಕರಗಳು, ಶಾಲೆಯ ಫೀಜು, ನಮ್ಮ ಕುಟುಂಬಗಳಿಗೆ ಆಹಾರ ಕಿಟ್ಗಳು, ನಮ್ಮ ಮಕ್ಕಳಿಗೆ ಲ್ಯಾಪ್ಟಾಪ್, ಕಂಪ್ಯೂಟರ್, ಇತರೆ ಸವಲತ್ತುಗಳನ್ನು ನೀಡಬೇಕು. ಮುಂದಿನ ಶಿಕ್ಷಣಕ್ಕೆ ಬೇಕಾದ ಸಾಲದ ಸವಲತ್ತುಗಳನ್ನು ತಕ್ಷಣಕ್ಕೆ ವಿದ್ಯಾರ್ಥಿ ವೇತನ ರೂಪದಲ್ಲಿ ಪ್ರತಿವರ್ಷ ನೀಡುವಂತಾಗಬೇಕು. ವೃತ್ತಿ ಬಾಂಧವರಿಗೆ ಆಪತ್ ಕಾಲದಲ್ಲಿ ತೊಂದರೆಯಾದಾಗ ಸರ್ಕಾರ, ಆಸ್ಪತ್ರೆಗಳಿಂದ ಯಾವುದೇ ರೀತಿಯ ಹಣ ಪಡೆಯದೇ ಉಚಿತವಾಗಿ ಶಸ್ತ್ರ ಚಿಕಿತ್ಸೆ , ಆರೋಗ್ಯ ತಪಾಸಣೆ ಮಾಡುವಂತಾಗಬೇಕು. ಆದ್ದರಿಂದ ವೃತ್ತಿ ಬಾಂಧವರಿಗೆ ಅನುಕೂಲವಾಗುವಂತೆ ಒಂದು ಅಕಾಡೆಮಿ ಸ್ಥಾಪಿಸಬೇಕು ಎಂದು ತಮ್ಮಲ್ಲಿ ವಿನಂತಿಸುತ್ತಿದ್ದೇವೆ.
ಪ್ರತಿವರ್ಷ ನಮ್ಮ ಫೋಟೋಗ್ರಾಫರ್ ಸಂಘದ ಸದಸ್ಯರ ಸಹಕಾರದಿಂದ ಆರೋಗ್ಯ ತಪಾಸಣೆ, ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ನೋಟ್ಪುಸ್ತಕ, ಪೆನ್ ವಿತರಣೆ, ಅನಾಥಾಶ್ರಮದ ಮಕ್ಕಳಿಗೆ ಅನ್ನಸಂತರ್ಪಣೆ, ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಫೋಟೋಗ್ರಾಫರ್ ಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ, ನಮ್ಮ ಸಂಘದ ಸದಸ್ಯರುಗಳ ಸಹಕಾರದೊಂದಿಗೆ ನಮ್ಮ ಕೈಲಾದ ಮಟ್ಟಿಗೆ ನೆರವು ನೀಡುವ ಕೆಲಸ ನಿರ್ವಹಿಸಿದ್ದೇವೆ. ಬರೀ ಫೋಟೋಗ್ರಾರ್ಸ್ಗಳು ಅಲ್ಲದೇ ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರುವ ರೈತರು, ಹೊರ ಊರುಗಳಿಂದ ಬಂದಂತಹ ಪ್ರಯಾಣಿಕರಿಗೆ, ಹೈವೇ ರಸ್ತೆಯಲ್ಲಿ ಲಾರಿ, ವಾಹನಗಳ ಚಾಲಕರು, ಕ್ಲೀನರ್ಗಳಿಗೆ ಊಟದ ಪೊಟ್ಟಣ ನೀಡುವ ಕೆಲಸವನ್ನು ಮಾಡಿರುತ್ತೇವೆ. ನಮ್ಮಲ್ಲಿ ಎಷ್ಟೇ ಕಷ್ಟವಿದ್ದರೂ ಕೂಡಾ ನಗು ಮೊಗದಿಂದ ಗ್ರಾಹಕರ ಮಧುವೆ, ಶುಭ ಕಾರ್ಯಕ್ರಮಗಳನ್ನು ಮಾಡಿಕೊಡುವ ದೃಷ್ಠಿ ನಮ್ಮದಾಗಿದೆ.
ದಯವಿಟ್ಟು ನಮ್ಮ ವೃತ್ತಿ ಬಾಂದವರಿಗೆ ಅವಶ್ಯಕತೆ ಇರುವಂತಹ ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹುಬ್ಬಳಿ ಯಲ್ಲಿ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಫೋಟೋ ಟುಡೇ (ಡಿ.ಜಿ.ಇಮೇಜ್) ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವರಾದ ಸನ್ಮಾನ್ಯ ಶ್ರೀ ಸಂತೋಷ್ ಎಸ್.ಲಾಡ್ಇವರಿಗೆ ದಾವಣಗೆರೆ ತಾಲ್ಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ(ರಿ.), ವತಿಯಿಂದ ಅಧ್ಯಕ್ಷ, ಮನು.ಎಮ್. ಮನವಿ ಕೊಡಲಾಯಿತು. ಮನವಿ ಸ್ವೀಕರಿಸಿದ ಸಚಿವರು ಮುಖ್ಯಮಂತ್ರಿ ಗಳೊಂದಿಗೆ ಮುಂದಿನ ಅಧೀವೇಶನದಲ್ಲಿ ಚರ್ಚಿಸಿತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ(ರಿ.), ವತಿಯಿಂದ ಅಧ್ಯಕ್ಷ, ಎಂ.ಮನು. ಗೌರವ ಅಧ್ಯಕ್ಷ ಬಿ.ಮಂಜುನಾಥ್, ಗ್ರಾಮಾಂತರ ವಲಯ ಅಧ್ಯಕ್ಷ ಕೊಂಡಜ್ಜಿ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ, ಉಪಾಧ್ಯಕ್ಷ ರಮೇಶ್ ಖಜಾಂಚಿ, ರಂಗನಾಥ ಮಾಜಿ ಪ್ರಧಾನ ಕಾರ್ಯದರ್ಶಿ, ಮಲ್ಲೇಶ್.ಎಚ್.ಪಾಟೀಲ್ ಸೇರಿದಂತೆ ಧಾರವಾಡ ಫೋಟೂ ಮತ್ತು ವಿಡಿಯೋಗ್ರಾಫರ ಸಂಘದ ಸದಸ್ಯರು ಸೇರಿದಂತೆ ಇನ್ನಿತರ ಜಿಲ್ಲೆಯ ವ್ರತ್ತಿ ಭಾಂಧವರು ಉಪಸ್ಥಿತಿದ್ದರು.