ಗದಗ : ದೇಶ ವಿರೋಧಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಭಾರತ ದೇಶದ ವಿರುದ್ಧವೇ ಹೋರಾಟ ಮಾಡುವೆವು ಎಂಬ ದೇಶ ವಿರೋಧಿ ಹೇಳಿಕೆ ನೀಡಿದ್ದು ಹಾಗೂ ಭಾರತ ದೇಶದ ಸಂವಿಧಾನದ ಮೂಲಕ ರಚನೆಯಾದ ಎಲ್ಲಾ ಅಂಗಗಳನ್ನು ದೋಷಿಸುತ್ತಿದ್ದು,ಇದರ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಗದಗ ನಗರ ಮಂಡಲ ವತಿಯಿಂದ ನಗರದ ಗಾಂಧಿ ವೃತ್ತದ ಬಳಿ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ನವೀನ್ ಕೋಟೆಕಲ್ ವಹಿಸಿಕೊಂಡಿದ್ದರುಪಕ್ಷದ ಹಿರಿಯರಾದ ಎಂಎಸ್ ಕರಿ ಗೌಡ್ರು ಮಾತನಾಡಿ ದೇಶದ ವಿರುದ್ಧ ಇಂತಹ ಹೇಳಿಕೆ ನೀಡಿರುವುದು ತೀರ್ವವಾಗಿ ಖಂಡಿಸುತ್ತೇವೆ ಹಾಗೂ ಆರ್ ಎಸ್ಎಸ್, ಬಿಜೆಪಿ ದೇಶದ ಪರವಾಗಿ ಕೆಲಸ ಮಾಡುತ್ತಿದೆ ಅದರ ಜೊತೆಗೆ ವಿರೋಧಿಸುವ ಹೇಳಿಕೆಯನ್ನು ನೀಡಿರುವ ನಿಮಗೆ ಧಿಕ್ಕಾರವಿರಲಿ. ಎಂದು ಮಾತನಾಡಿದರು.
ಗದಗ ನಗರ ಮಂಡಲ ಅಧ್ಯಕ್ಷ ಅನಿಲ್ ಅಬ್ಬಿಗೇರಿ ಮಾತನಾಡಿ ದೇಶ ವಿರೋಧಿ ಮತ್ತು ಭಾರತ ದೇಶದ ಸಂವಿಧಾನದ ಮೂಲಕ ರಚನೆಯಾದ ಎಲ್ಲಾ ಅಂಗಗಳನ್ನು ದೋಷಿಸುತ್ತಿದ್ದು ಇದೊಂದು ಭಾರತ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅವಮಾನಿಸಿದಂತೆ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾನ್ಯ ಸಿಪಿಐ, ರಾಜೀವ್ ಗಾಂಧಿ ಬಡಾವಣೆ ಠಾಣೆ ಗದಗ ಇವರಿಗೆ ದೇಶ ವಿರೋಧಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಗದಗ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಒತ್ತಾಯಿಸಲಾಯಿತ್ತು.
ಈ ಸಂದರ್ಭದಲ್ಲಿ ಹಿರಿಯರಾದ ಎಂ ಎಂ ಹಿರೇಮಠ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಇರ್ಷಾದ ಮಾನ್ವಿ, ರಾಜ್ಯ ಹಿಂದುಳಿದ ವರ್ಗ ಮೋರ್ಚಾ ಕಾರ್ಯದರ್ಶಿ ಸುಧೀರ್ ಕಾಟಿಗರ, ನಗರಸಭೆ ಸದಸ್ಯರಾದ ವಿನಾಯಕ್ ಮಾನ್ವಿ, ನಾಗರಾಜ್ ತಳವಾರ್, ಮಾಧುಸಾ ಮೆರರ್ವಾಡೆ, ರಾಘವೇಂದ್ರ ಯಳವತ್ತಿ, ಮುತ್ತು ಮುಸಿಗೇರಿ, ಶಂಕರ ಕರಿಬಿಷ್ಟಿ, ಶಂಕರ್ ಮಲ್ಸಮುದ್ರ, ಯುವ ಮೋರ್ಚಾ ಜಿಲ್ಲಾ ಪದಾಧಿಕಾರಿಗಳಾದ ಕಿರಣ್ ಕಲಾಲ, ರಾಜು ರೊಟ್ಟಿ, ಸಚಿನ್ ಮಡಿವಾಳರ,ರಾಹುಲ್ ಸಂಕಣ್ಣವರ್ . ಯುವ ಮೋರ್ಚಾ ಮಂಡಲ ಪದಾಧಿಕಾರಿಗಳಾದ ಪ್ರವೀಣ್ ಹಡಪದ್, ಕೃಷ್ಣ ಚಿಂತಾ, ವಿನಾಯಕ್ ಕಟವಾ, ಶ್ರೀಕಾಂತ್ ಆದ್ಯಪ್ಪನವರ್ ಇನ್ನು ಹಲವರು ಉಪಸ್ಥಿತರಿದ್ದರು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ನೆರೆಗಲ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.