ಕಾಂಗ್ರೆಸ್ಸಿನ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಪ್ರಸ್ತಾಪ- ಆರ್.ಅಶೋಕ್

ಬೆಳಗಾವಿ: ಅನುದಾನದಲ್ಲಿ ತಾರತಮ್ಯ ಮತ್ತು ಇತರ ವಿಷಯಗಳ ಕುರಿತು ಇಲ್ಲಿನ ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಬಿಜೆಪಿ ಜನಪ್ರತಿನಿಧಿಗಳ ಸಭೆ ಇಂದು ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದೆ ಎಂದು ಅವರು ತಿಳಿಸಿದರು. ಹೆಚ್ಚಿನ ಶಾಸಕರು ಅನುದಾನದ ತಾರತಮ್ಯ ಆಗುತ್ತಿದೆ ಎಂದು ತಿಳಿಸಿದ್ದಾರೆ ಎಂದರು.


ಅನುದಾನ ಇಲ್ಲದ ಕಾರಣ ರಸ್ತೆ ಸಮಸ್ಯೆ ಆಗಿದೆ. ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ; ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ. ಅತಿವೃಷ್ಟಿ ಬಂದರೂ ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಇವೆಲ್ಲವುಗಳನ್ನು ಚರ್ಚೆಗೆ ತೆಗೆದುಕೊಳ್ಳಲು ಕೋರಿದ್ದಾರೆ. ಇದಲ್ಲದೆ, ಬಾಣಂತಿಯರ ಸಾವು, ಮಕ್ಕಳ ಸಾವಿನ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ ಎಂದರು.
ಬೆಳಗಾವಿ ಅಧಿವೇಶನ ಎಂದೊಡನೆ ಮಲೆನಾಡು ಪ್ರದೇಶದ ವಿಚಾರ ಚರ್ಚೆಗೆ ಬರುತ್ತಿಲ್ಲ ಎಂದಿದ್ದಾರೆ. ಅದನ್ನು ಕೂಡ ಚರ್ಚಿಸುತ್ತೇವೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ದುಡ್ಡು ಕೊಡದೆ ಏನು ಕೆಲಸವೂ ಆಗುತ್ತಿಲ್ಲ ಎಂದು ದೂರಿದ್ದಾರೆ. ಗುತ್ತಿಗೆದಾರರು ಲಂಚ ಕೊಟ್ಟು ಕೆಲಸ ಗುತ್ತಿಗೆ ಪಡೆಯುತ್ತಿದ್ದಾರೆ. ಶಾಸಕರಿಗೆ ಗೌರವ ಇಲ್ಲ ಎಂಬ ವಿಚಾರವೂ ಚರ್ಚೆ ಮಾಡಲು ಕೋರಿದ್ದಾರೆ ಎಂದು ಹೇಳಿದರು. ತಾರತಮ್ಯ ಮತ್ತು ಕೃಷ್ಣಾ ಯೋಜನೆಗೆ (ಯುಕೆಪಿ) ಹಣ ನೀಡದೆ ಇರುವ ಕುರಿತು ಕೂಡ ಚರ್ಚೆ ನಡೆದಿದ್ದು ಇವೆಲ್ಲವುಗಳನ್ನು ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇದ್ದರು. ಒಟ್ಟಿಗೆ ಇರಲು ಸಹಮತ ವ್ಯಕ್ತವಾಗಿದೆ. ಇಂದಿನ ಸಭೆ ಮುಕ್ತವಾದ ವಾತಾವರಣದಲ್ಲಿ ನಡೆದಿದೆ. ಸಿಗುವ 5 ದಿನದಲ್ಲಿ ಕಾಂಗ್ರೆಸ್ಸಿನ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ಯತ್ನಾಳ್, ರಮೇಶ್ ಜಾರಕಿಹೊಳಿ ಅವರು ನನ್ನ ಜೊತೆ ಫೋನ್ ಮಾಡಿ ಮಾತನಾಡಿದ್ದಾರೆ. ಈ ಸಭೆಗೆ ಬರಲಾಗುವುದಿಲ್ಲ; ಮುಂದಿನ ಬಾರಿ ಬರುವುದಾಗಿ ಹೇಳಿದ್ದಾರೆ. ಶಾಸಕರಿಗೆ ಸಮಸ್ಯೆಗಳಿದ್ದರೆ ಬಂದು ಮಾತನಾಡಿ ಎಂದು ಅಧ್ಯಕ್ಷರೂ ಹೇಳಿದ್ದಾರೆ ಎಂದು ತಿಳಿಸಿದರು. ಇವತ್ತಿನ ಅಸೆಂಬ್ಲಿಯಲ್ಲಿ ನಾವೆಲ್ಲರೂ ಒಟ್ಟಾಗಿ ಹೋಗಿದ್ದೇವೆ ಎಂದು ವಿವರ ನೀಡಿದರು.
ಪಂಚಮಸಾಲಿ ವಿಚಾರದಲ್ಲಿ ಸರಕಾರವನ್ನು ಬಗ್ಗುಬಡಿದು ಗೆಲುವು ಸಾಧಿಸಿದ್ದೇವೆ. ಅನುಮತಿಯೂ ಸಿಕ್ಕಿದೆ ಎಂದರು. ನಾಳೆ ವಕ್ಫ್ ಬೋರ್ಡ್ ಕುರಿತು ಚರ್ಚೆ ಇದೆ. ಬಳಿಕ ಪಂಚಮಸಾಲಿ ಹೋರಾಟದ ಜಾಗಕ್ಕೆ ಭೇಟಿ ಕೊಡಲಿದ್ದೇನೆ ಎಂದು ಹೇಳಿದರು. ಇದು ತುಘಲಕ್ ಆಡಳಿತ ಎಂದು ಅವರು ಟೀಕಿಸಿದರು.

  • Related Posts

    ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು- ಸಂಸದ ಬಸವರಾಜ ಬೊಮ್ಮಾಯಿ

    ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ ಬಸವರಾಜ ಬೊಮ್ಮಾಯಿ ನವದೆಹಲಿ  ಡಿ.21 : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…

    ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷರರ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಡಿ.೨೧ :  2024-25 ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಹುಬ್ಬಳ್ಳಿ ಅಂಚಟಗೇರಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ…

    RSS
    Follow by Email
    Telegram
    WhatsApp
    URL has been copied successfully!