ಧಾರವಾಡ 31 : ಸಾಮಾಜಿಕ ಜಾಲತಾಣ, ರೀಲ್ಸಗಳ ವ್ಯಾಮೋಹ ಜಾತಿ, ಧರ್ಮಗಳಂತಹ ವಿಷಯದಲ್ಲಿ ಸಿಕ್ಕಿಹಾಕಿಕೊಂಡ ಯುವ ಸಮುದಾಯ ಇವಾಗ ಎಚ್ಚೆತ್ತುಕೊಳ್ಳದಿದ್ದರೆ ದೇಶದ ಪ್ರಗತಿ ಅಸಾಧ್ಯ ಈ ನಿಟ್ಟಿನಲ್ಲಿ ಪ್ರತಿಷ್ಠಾನವು ಯುವಸಮುದಾಯಕ್ಕೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಪರಿಸರವಾದಿ, ನೇಚರ್ ಫಸ್ಟ್ ಇಕೋ ವಿಲೇಜ್ ನ ಸಂಸ್ಥಾಪಕರಾದ ಪಿ ವ್ಹಿ ಹಿರೇಮಠ ಹೇಳಿದರು.
ಅವರು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಫೆಬ್ರುವರಿ 15 ರಂದು ಹಮ್ಮಿಕೊಳ್ಳುತ್ತಿರುವ ಯುವ ಚಿಂತನಾ ಸಮಾವೇಶಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪರಿಸರ ತಜ್ಞ ಪಿ.ವಿ ಹಿರೇಮಠ ಅವರಿಗೆ ಆಹ್ವಾನ ನೀಡಿದ ಸಂದರ್ಶನದಲ್ಲಿ ಮಾತನಾಡಿ ಪ್ರತಿಷ್ಠಾನ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾದ ಮತ್ತು ಯುವ ಸಮುದಾಯವನ್ನು ಜಾಗೃತಿ ಮಾಡುವ ನಿಟ್ಟಿನಲ್ಲಿ ಇರುತ್ತವೆ ಎಂದು ಹೇಳಿದರು.
ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪಿ.ವಿ ಹಿರೇಮಠ ಅವರನ್ನು ಪ್ರತಿಷ್ಠಾನದ ಪದಾಧಿಕಾರಿಗಳು ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ, ಪ್ರದಾನ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಉಪಾಧ್ಯಕ್ಷ ಸುರೇಶ ಬೆಟಗೇರಿ, ಕೋಶಾಧ್ಯಕ್ಷ ಪ್ರೇಮಾನಂದ ಶಿಂಧೆ, ಇಂಜನಿಯರ್ಸ ಅಸೋಸಿಯೇಷನ್ ಅಧ್ಯಕ್ಷರಾದ ಸುನೀಲ ಬಾಗೇವಾಡಿ, ಕೃಷ್ಣಮೂರ್ತಿ ಗೊಲ್ಲರ ಇದ್ದರು.