ಧಾರವಾಡ 27 : ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಡಾ.ಮನಮೋಹನ ಸಿಂಗ್ (92) ಅವರು ನಿಧನರಾದ ಹಿನ್ನೆಲೆಯಲ್ಲಿ,ಧಾರವಾಡ – 71 ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಯವರ, ತಾಲೂಕು ಪಂಚಾಯತಿಯಲ್ಲಿರುವ ಕಚೇರಿಯಲ್ಲಿ ಇಂದು, ಡಿಸೆಂಬರ್ 27 ಬೆಳಿಗ್ಗೆ 11-00 ಗಂಟೆಗೆ ಮನಮೋಹನಸಿಂಗ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಒಂದು ನಿಮಿಷ ಮೌನಚರಣೆ ಮಾಡಿ ಶೃದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆ ಎಮ್ ಎಫ್ ಸದಸ್ಯರಾದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು, ಬ್ಲಾಕ್ ಅಧ್ಯಕ್ಷರುಗಳಾದ ಅರವಿಂದ ಏಗನಗೌಡರ, ಈಶ್ವರ್ ಶಿವಳ್ಳಿ, ಮಹಾನಗರ ಪಾಲಿಕೆ ಸದಸ್ಯರುಗಳಾದ ರಾಜಶೇಖರ್ ಕಮತಿ, ಪ್ರಕಾಶ ಘಾಟಗೆ, ದೀಪಾ ನೀರಲಕಟ್ಟಿ, ಸೂರವ್ವ ಪಾಟೀಲ, ಹಾಗೂ ಮುಖಂಡರುಗಳಾದ ಚಣಬಸಪ್ಪ ಮಟ್ಟಿ, ಸಂಜು ಲಕಮನಹಳ್ಳಿ, ನಾಗಪ್ಪ ಮಾದರ, ನಿಜಾಮ ರಾಯಿ,ಕಿಶೋರ ಬಡಿಗೇರ,ನವೀನ ಕದಂ,ಮಿಲಿಂದ್, ಮಂಜು ಉಡಕೇರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ ಸದಸ್ಯರು ಹಾಗೂ ಕಾರ್ಯಕರ್ತರು ಈ ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.