ಮರ್ಯಾದಾ ಹತ್ಯೆ ಪ್ರಕರಣ ಗದಗ ಜಿಲ್ಲೆಯ ನಾಲ್ಕು ಜನರಿಗೆ ವಿಧಿಸಿದ ನ್ಯಾಯಾಲಯ.

ಗದಗ 31 : ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ನಡುಬೀದಿಯಲ್ಲಿಯೇ ಚಾಕು ಚೂರಿ ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ.

ಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳಿಗೆ ಗದಗ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವ ಜೋಡಿಗಳನ್ನು ಮರ್ಯಾದೆಗೆ ಧಕ್ಕೆ ಬಂದಿದೆ ಎಂದು ಹೇಳಿ ಹುಡುಗಿ ಮನೆಯವರು ಇಬ್ಬರನ್ನು ಕೊಲೆ ಮಾಡಿದ್ದರು. ಇದು ದೊಡ್ಡ ಸುದ್ದಿ ಮಾಡಿತ್ತು.

ರಮೇಶ ಮಾದರ ಮತ್ತು ಗಂಗಮ್ಮ ಮಾದರ ಎಂಬುವವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

ಇಬ್ಬರನ್ನು ನವೆಂಬರ್ 6, 2019 ರಲ್ಲಿ ಗಂಗಮ್ಮ ಕುಟುಂಬಸ್ಥರು ಕೊಲೆ ಮಾಡಿದ್ದರು.

ಕುಟುಂಬಸ್ಥರ ವಿರೋಧದ ನಡುವೆ ಗಂಗಮ್ಮ ಪ್ರೀತಿಸಿ ಅಂತರಜಾತಿ ವಿವಾಹ ಆಗಿದ್ದಕ್ಕೆ ಗಂಗಮ್ಮ ರಾಠೋಡ ಸಂಬಂಧಿಕರು ಗರಂ ಆಗಿದ್ದರು.ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಐಪಿಸಿ 427,449, 302, 506(2) ಅಡಿಯಲ್ಲಿ ನ್ಯಾಯಾಲಯಕ್ಕೆ, ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ರು.

ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯವು ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಆರೋಪಿಗಳಾದ, ಶಿವಪ್ಪ ರಾಠೋಡ, ರವಿಕುಮಾರ ರಾಠೋಡ, ರಮೇಶ ರಾಠೋಡ ಹಾಗೂ ಸಾರಿಗೆ ಇಲಾಖೆ ಚಾಲಕ ಪರಶುರಾಮ ರಾಠೋಡಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.

  • Related Posts

    ನಿರ್ವಾಕನ ಮೇಲೆ ಹಲ್ಲೆ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ

    ನಿರ್ವಾಕನ ಮೇಲೆ ಹಲ್ಲೆ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ಧಾರವಾಡ 25 : ಬೆಳಗಾವಿಯ ಜಿಲ್ಲೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆಯವತಿಯಿಂದ ಧಾರವಾಡದ ಜಿಲ್ಲಾಧಿಕಾರಿಗಳ ಮುಖಾಂತರ ಸಾರಿಗೆ ಸಚಿವರಾದ…

    ಧಾರವಾಡ ಮಹಾನಗರ ಪಾಲಿಕೆಗೆ ಬಿಜೆಪಿಯಿಂದಲೇ ಅಡ್ಡಗಾಲು : ಏಗನಗೌಡರ ಆರೋಪ

    ಧಾರವಾಡ 25 : ಧಾರವಾಡ ಮಹಾನಗರ ಪಾಲಿಕೆ ಗೆ ಬಿಜೆಪಿಯಿಂದಲೇ ಅಡ್ಡಗಾಲಾಗಿದೆ ಎಂದು ಕಿಡಿಕಾರಿದ ಅರವಿಂದ ಏಗನಗೌಡರ ಕಿಡಿಕಾರಿದರು ಅವರು ಪತ್ರಿಕಾಗೋಷ್ಠಿ ಮಾತನಾಡಿ, ಧಾರವಾಡ ಮಹಾನಗರ ಪಾಲಿಕೆಗೆ ಈಗಾಗಲೇ ರಾಜ್ಯ ಕಾಂಗ್ರೆಸ್ ಸರಕಾರ ಅನುಮೋದನೆ ನೀಡಿ ಗೆಜೆಟ್ ಹೊರಡಿಸಿದ್ದು ಧಾರವಾಡದ ಸಮಸ್ತ…

    RSS
    Follow by Email
    Telegram
    WhatsApp
    URL has been copied successfully!