ಧಾರವಾಡ ಜನವರಿ 26 : ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಇಂದು ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಗುದ್ದಲಿ ಪೂಜಾ ಕಾರ್ಯಕ್ರಮ ಕಲಘಟಗಿ ಮತಕ್ಷೇತ್ರದ ವಿವಿಧೆಡೆ ನಡೆದ ಗುದ್ದಲಿ ಪೂಜಾ ಕಾರ್ಯಕ್ರಮಗಳಲ್ಲಿ ಸಚಿವ ಲಾಡ್ ಅವರು ಭಾಗವಹಿಸಿದ್ದರು.
ಲೋಕೋಪಯೋಗಿ ಇಲಾಖೆಯಿಂದ ರೂ. 450.00 ಲಕ್ಷಗಳಲ್ಲಿ ಮಂಜೂರಾದ ಜಿ.ಬಸವನಕೊಪ್ಪ ಗ್ರಾಮದಿಂದ ವಯಾ ಕಳಸನಕೊಪ್ಪ, ಗಳಗಿಹುಲಕೊಪ್ಪ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ. 140.00 ಲಕ್ಷಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮಂಜೂರಾದ ನೀರಸಾಗರ. ಕನ್ನೇನಾಯ್ಕನಕೊಪ್ಪ, ಡೊಂಬರಿಕೊಪ್ಪ ರಸ್ತೆಗಳ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ನಡೆಸಿದರು.
ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಸಣ್ಣ ನೀರಾವರಿ ಇಲಾಖೆಯಿಂದ ರೂ. 320.00 ಲಕ್ಷಗಳಲ್ಲಿ ಜಿ.ಬಸವನಕೊಪ್ಪ ಮತ್ತು ನೀರಸಾಗರ ಮಧ್ಯದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಪೌರ ಕಾರ್ಮಿಕರಿಗೆ ಮನೆ: ಸಚಿವರ ಪ್ರಯತ್ನದ ಫಲ
ಅಳ್ನಾವರ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಪೌರ ಕಾರ್ಮಿಕರಿಗೆ ಪಟ್ಟಣ ಪಂಚಾಯತ್ ಮಾಲ್ಕಿಯ ಆಸ್ತಿ ನಂ 3125/2 ರಲ್ಲಿ ಜಿ+3 ಮಾದರಿಯ ಮನೆಗಳ ನಿರ್ಮಾಣ ಉದ್ಘಾಟನೆಯಲ್ಲಿ ಸಚಿವ ಸಂತೋಷ್ ಲಾಡ್ ಅವರು ಇಂದು ಭಾಗವಹಿಸಿದ್ದರು.
ವಿಶೇಷ ಎಂದರೆ ಈ ಮನೆಗಳ ನಿರ್ಮಾಣದಲ್ಲಿ ಸಚಿವ ಸಂತೋಷ್ ಲಾಡ್ ಅವರು ಸಾಕಷ್ಟು ಶ್ರಮವಹಿಸಿದ್ದು, ಅವರ ಪ್ರಯತ್ನದ ಫಲವಾಗಿ ಮನೆಗಳು ನಿರ್ಮಾಣವಾಗಿ ಲೋಕಾರ್ಪಣೆಯಾಗಿದೆ.