
ಹಾವೇರಿ 12 : ಹಾವೇರಿ ಜಿಲ್ಲೆ ಹಾವೇರಿ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಗಡಿ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬ ವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಹಬ್ಬಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೌನೇಶ್ ಬಡಿಗೇರ್ , ಡಯಟ್ ನ ಉಪನ್ಯಾಸಕರಾದ ಸುಣಗಾರ , ಕ್ಷೇತ್ರ ಸಮನ್ವಯ ಅಧಿಕಾರಿ ಎಂ ಡಿ ಮಾದರ , ಹೊಸರಿತ್ತಿ ವಲಯದ ಇಸಿಓ ರವರಾದ ಓಂ ಪ್ರಕಾಶ್ ಯತ್ನಳ್ಳಿ , ವಲಯದ ಬಿ ಆರ್ ಪಿ ಗಳಾದ ಶ್ರೀನಿವಾಸ್ ಟಿ ಎಂ , ಬಿ ಆರ್ ಪಿ ಗಳಾದ ಮತ್ತೂರು ಮತ್ತು ಅಗಡಿ ಗ್ರಾಮದ ಹಿರಿಯರು, ಶಿಕ್ಷಣ ಚಿಂತಕರು ಆದ ನಿಜಲಿಂಗಪ್ಪ ಬಸೆ ಗೆಣ್ಣಿ ಅವರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಪಿಟಿ ಕಾಮನಹಳ್ಳಿ,ಎನ್ ಜಿ ಓ ನಿರ್ದೇಶಕರು ಎಮ್ ವಿ . ಕಮ್ಮಾರ, ಎಚ್ ಪಿ ಎಸ್ ಅಗಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರ ಸರ್ವ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರೇಖಾ ತೋಟಗೇರ, ಕ್ಲಸ್ಟರ್ನ ಎಲ್ಲ ಶಾಲೆಯ ಪ್ರಧಾನ ಗುರುಗಳು ಶಿಕ್ಷಕರು ಎಲ್ಲಾ ಶಾಲೆಗಳಿಂದ ಆಗಮಿಸಿದ ಶಿಕ್ಷಕರು, ಅಗಡಿ ಕ್ಲಸ್ಟರ್ ನ ಅನುದಾನ ರಹಿತ ಶಾಲೆಗಳಿಂದ ಆಗಮಿಸಿದ ನಿರ್ಣಾಯಕರು ಮತ್ತು ಮುದ್ದು ಮಕ್ಕಳು , ಪಾಲಕ ಪೋಷಕ ವರ್ಗದವರು ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟು ಇಂದು ಅಗಡಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದರು.