ಧಾರವಾಡ : ಭಾರತ ಕಂಡ ಮಹಾನ್ ವ್ಯಕ್ತಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ ಕೂಡ ಒಬ್ಬರು. ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಭಾರತ ದೇಶಕ್ಕೆ ಇವರು ನೀಡಿರುವ ಕೊಡುಗೆಗಳು ಅಪಾರ. ಅವರ ಜೀವನ ಹಾಗೂ ಪರಂಪರೆ ಸರ್ವರಿಗೂ ಆದರ್ಶಪ್ರಿಯವಾದದ್ದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನದಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕರ್ನಾಟಕ ಭೀಮಸೇನೆ ಸಂಘಟನೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ನಿಮಿತ್ಯ ಹಮ್ಮಿಕೊಂಡ ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಮಾತನಾಡಿದವರು.
ಕರ್ನಾಟಕ ಭೀಮಸೇನೆ ಜಿಲ್ಲಾಧ್ಯಕ್ಷರಾದ ಸತೀಶ ಸರ್ಜಾಪುರ ಮಾತನಾಡಿ, ಕರ್ನಾಟಕ ಭೀಮಸೇನೆ ರಾಜ್ಯಾಧ್ಯಕ್ಷರಾದ ಬಿ.ಡಿ.ಮಾದಾರ ಅವರ ಆದೇಶದ ಮೇರೆಗೆ ಈ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿ. ಭಾರತದಲ್ಲಿ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ಆಚರಿಸುತ್ತಾರೆ ಎಂದರು.
ಹಿರಿಯ ಪತ್ರಕರ್ತರಾದ ಬಸವರಾಜ ಆನೆಗುಂದಿ ಮಾತನಾಡಿ, ಡಾ.ಭೀಮಾರಾವ ರಾಮಜಿ ಅಂಬೇಡ್ಕರ ಅವರು ಸಮಾಜ ಸುಧಾರಕರೂ ಆಗಿದ್ದರು. ದಲಿತ ಬೌದ್ಧ ಚಳುವಳಿಯನ್ನು ಮುನ್ನಡೆಸುವ ಮೂಲಕ ಪ್ರೇರಣೆಯಾದವರು. ಡಿಸೆಂಬರ್ 6 ಇವರ ಪುಣ್ಯತಿಥಿ. ಈ ದಿನವನ್ನು ಮಹಾಪರಿನಿರ್ವಾಣ ದಿನ ಎಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಅವರ ಆದರ್ಶಗಳು ಯುವ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದರು.
ಹಿರಿಯ ಮುಖಂಡರಾದ ಅಶೋಕ ಭಂಡಾರಿ ಮಾತನಾಡಿ, ಸಂವಿಧಾನ ಪಿತಾಮಹ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಕೊಡುಗೆ ಅಪಾರವಾದದ್ದು. ಜಗತ್ತು ಅವರನ್ನು ಗೌರವಿಸಿ ಪ್ರೀತಿಸುತ್ತಿರುವಾಗ ಕರ್ನಾಟಕ ಭೀಮಸೇನೆ ಜಿಲ್ಲಾಧ್ಯಕ್ಷ ಸತೀಶ ಸರ್ಜಾಪುರ ನೇತೃತ್ವದಲ್ಲಿ ಪ್ರತಿವರ್ಷ ಅನ್ನ ಸಂತರ್ಪಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಜು ಕೋಟನ್ನವರ, ಪ್ರಕಾಶ ಮಲ್ಲಿವಾಡ, ಶಿವಾನಂದ ಅಮರಶೆಟ್ಟಿ, ಆನಂದ ಕೊಣ್ಣೂರ, ಕುಮಾರ ವಕ್ಕುಂದ, ಶ್ರೀಶೈಲ ಹೂಗಾರ, ಹರ್ಬಲ್ ಲೈಫ್ ನ ಮುಖ್ಯಸ್ಥರಾದ ಹನುಮಂತ, ಬಸ್ಸಮ್ಮ ಕಲೆ, ಸುಜಾತ ಎಚ್. ಸುಜಾತ ಜಾಧವ, ಶ್ರೀನಿವಾಸ ಅವರೋಳ್ಳಿ, ಪವನ ಜೋಶಿ, ಅಬ್ದುಲ್ ಅನ್ಸಾರಿ, ತುಕಾರಾಂ ಮಾಣಿಕ, ಪತ್ರಕರ್ತರಾದ ಚಂದ್ರಶೇಖರ ಹಿರೇಮಠ, ರಮೇಶ ದೊಡ್ಡವಾಡ, ಕಲ್ಲಪ್ಪ ಭೋವಿ, ಮಂಜುನಾಥ ವರೂರ, ಸಮರ್ಥ ಸರ್ಜಾಪುರ, ಪ್ರಕಾಶ ಹಾಗೂ ಕರ್ನಾಟಕ ಭೀಮಸೇನೆ ಸಂಘಟನೆ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಇದ್ದರು.