ಧಾರವಾಡ : ಧಾರವಾಡದ ನಾಟಕ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕೃತರು, ಧಾರವಾಡದ ಮಕ್ಕಳ ಮಹರ್ಷಿ ಎಂದೇ ಖ್ಯಾತರಾದ, ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಲೂಸಿ ಸಾಲ್ಡಾನರವರು ಸೇರಿದಂತೆ ಧಾರವಾಡದ ವಿವಿಧ ರಂಗದ ಸಾಧಕರಿಗೆ ಇಂದು ಎಸ್ ವಿ ಸಂಕನೂರ ವಿಧಾನ ಪರಿಷತ್ತಿನ ಸದಸ್ಯರು ತಮ್ಮ ಕಚೇರಿಯಲ್ಲಿ ಸತ್ಕರಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಲತಾ ಮುಳ್ಳೂರ, ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಶಾಸಕರಿಗೆ ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳ ಅವರ ವಚನ ದರ್ಪಣ ಪುಸ್ತಕವನ್ನು ನೀಡಲಾಯಿತು.